ತೇಜಸ್ವಿ ಸೂರ್ಯ ವಿರುದ್ಧ ಮಹಿಳೆ ಆರೋಪ ಏನು, ಅದು ಎಲ್ಲಿಗೆ ಬಂತು?

Recommended Video

      Lok Sabha Elections 2019 : ತೇಜಸ್ವಿ ಸೂರ್ಯ ವಿರುದ್ಧ ಮಹಿಳೆ ಮಾಡಿದ ಆರೋಪ ಏನು?

      ಬೆಂಗಳೂರು, ಮಾರ್ಚ್ 28: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಗಿರುವ ಇಪ್ಪತ್ತೆಂಟು ವರ್ಷದ ತೇಜಸ್ವಿ ಸೂರ್ಯ ಅವರ ಮೇಲೆ ಮಹಿಳೆಯೊಬ್ಬರು ಅರೋಪ ಮಾಡಿದ್ದಾರೆ. ಇಂಥವರನ್ನು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿದ್ದೀರಾ ಎಂದು ಆ ಮಹಿಳೆ ಪ್ರಶ್ನಿಸಿದ್ದು, ಆ ವಿಚಾರದ ಮೂಲಕ ಕಾಂಗ್ರೆಸ್ ಬುಧವಾರದಿಂದ ವಾಗ್ದಾಳಿ ಆರಂಭಿಸಿದೆ.

      ಆ ಮಹಿಳೆಯ ಆರೋಪಗಳಿಗಾಗಲೀ ಅಥವಾ ಕಾಂಗ್ರೆಸ್ ನ ವಾಗ್ದಾಳಿಗೆ ತೇಜಸ್ವಿ ಸೂರ್ಯ ಆಗಲೀ ಬಿಜೆಪಿಯಿಂದಾಗಲೀ ಆರಂಭದಲ್ಲಿ ಪ್ರತಿಕ್ರಿಯೆ ಬಂದಿರಲಿಲ್ಲ. ಆ ಮಹಿಳೆ ಮಾಡಿರುವ ಆರೋಪದ ಸ್ಕ್ರೀನ್ ಶಾಟ್ ಕಾಂಗ್ರೆಸ್ ತೆಗೆದುಕೊಂಡು, ತೇಜಸ್ವಿ ಸೂರ್ಯ ಅವರು ಮತ್ತೊಬ್ಬ ಎಂ.ಜೆ.ಅಕ್ಬರ್ ಆಗುತ್ತಾರಾ? ತೇಜಸ್ವಿ ಅವರು ಅತ್ಯುತ್ತಮ ಆಯ್ಕೆ. ಬೆಂಗಳೂರು ದಕ್ಷಿಣ ಇದನ್ನು ನೆನಪಿಟ್ಟುಕೊಳ್ಳುತ್ತದೆ ಎಂದಿದೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಸಂಪಾದಕರಾಗಿ ಕಾರ್ಯ ನಿರ್ವಹಿಸುವ ವೇಳೆ ಎಂ.ಜೆ.ಅಕ್ಬರ್ ಅವರು ಲೈಂಗಿಕ ಶೋಷಣೆ ಮಾಡಿದ್ದರು ಎಂಬ ಆರೋಪ ಬಂದಿದ್ದ ಹಿನ್ನೆಲೆಯಲ್ಲಿ ಕಳೆದ ವರ್ಷ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹುದ್ದೆಯಿಂದ ಕೆಳಗೆ ಇಳಿದಿದ್ದರು. ಇನ್ನು ತೇಜಸ್ವಿ ಸೂರ್ಯ ಬಗ್ಗೆ ಆರೋಪ ಮಾಡಿದ್ದ ಮಹಿಳೆ ನಂತರ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.

      ಮಹಿಳೆ ಏನೆಂದು ಟ್ವೀಟ್ ಮಾಡಿದ್ದರು?

      ಮಹಿಳೆ ಏನೆಂದು ಟ್ವೀಟ್ ಮಾಡಿದ್ದರು?

      ಆ ಮಹಿಳೆಯು ಮಾಡಿದ ಟ್ವೀಟ್ ನಲ್ಲಿ, ತೇಜಸ್ವಿ ಸೂರ್ಯರಿಂದ ನಾನು ಬಹಳ ನರಳಿದ್ದೇನೆ. ಹಾಗಂತ ನಾನು ಕೊನೆಯವಳೂ ಅಲ್ಲ, ಇದು ಇಲ್ಲಿಗೇ ನಿಲ್ಲುವುದೂ ಇಲ್ಲ. ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವ ಮುನ್ನ ಅಭ್ಯರ್ಥಿಗಳ ಹಿನ್ನೆಲೆಯನ್ನು ಬಿಜೆಪಿ ಪರಿಶೀಲಿಸುವುದಿಲ್ಲವಾ ಎಂಬ ಪ್ರಶ್ನೆ ಮಾಡಿದ್ದರು. ಜತೆಗೆ ಈ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಒದಗಿಸಲು ಸಹ ನಾನು ಸಿದ್ಧಳಿದ್ದೇನೆ ಎಂದಿದ್ದರು.

      ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?

      ತೇಜಸ್ವಿ ಸೂರ್ಯ ಪ್ರತಿಕ್ರಿಯೆ

      ತೇಜಸ್ವಿ ಸೂರ್ಯ ಪ್ರತಿಕ್ರಿಯೆ

      ಆರೋಪ ಮಾಡಿದ ಮಹಿಳೆ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಸೂರ್ಯ, ಅವರು ನನಗೆ ಬೇಕಾದ ಸ್ನೇಹಿತರು. ಅವರು ನನ್ನ ವಿರುದ್ಧ ಆರೋಪ ಮಾಡಿದ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದಾರೆ. ಇನ್ನು ಆ ವಿಚಾರ ಮುಂದುವರಿಸದಂತೆ ಕೇಳಿದ್ದಾರೆ. ಸಭ್ಯ ವ್ಯಕ್ತಿಯಾಗಿ ಆ ಮಾತಿಗೆ ಗೌರವ ನೀಡಬೇಕಾದದ್ದು ನನ್ನ ಕರ್ತವ್ಯ. ನಾನು ಕೂಡ ಇದನ್ನು ಮುಂದುವರಿಸುವುದಿಲ್ಲ ಎಂದು ಹೇಳಿದ್ದಾರೆ.

      ಅನಂತಕುಮಾರ್ ಸ್ಪರ್ಧಿಸುತ್ತಿದ್ದ ಕ್ಷೇತ್ರವಿದು

      ಅನಂತಕುಮಾರ್ ಸ್ಪರ್ಧಿಸುತ್ತಿದ್ದ ಕ್ಷೇತ್ರವಿದು

      ಆಶ್ಚರ್ಯಕರ ಬೆಳವಣಿಗೆಯಲ್ಲಿ ಬಿಜೆಪಿಯಿಂದ ಪಕ್ಷದ ಯುವ ಘಟಕದ ನಾಯಕ ತೇಜಸ್ವಿ ಸೂರ್ಯ ಅವರನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗಿದೆ. ಅದಕ್ಕೂ ಮುನ್ನ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದವರು ಕೇಂದ್ರದ ದಿವಂಗತ ಸಚಿವ ಅನಂತಕುಮಾರ್. ಅವರ ನಂತರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಈ ಕ್ಷೇತ್ರದ ಟಿಕೆಟ್ ದೊರೆಯಬಹುದು ಎಂಬ ಅಂದಾಜಿತ್ತು.

      ತೇಜಸ್ವಿನಿ ಅವರಿಗೆ ಟಿಕೆಟ್ ಸಿಗಲಿಲ್ಲ

      ತೇಜಸ್ವಿನಿ ಅವರಿಗೆ ಟಿಕೆಟ್ ಸಿಗಲಿಲ್ಲ

      ಇಪ್ಪತ್ತೆಂಟು ವರ್ಷ ತೇಜಸ್ವಿ ಸೂರ್ಯ ವೃತ್ತಿಯಿಂದ ವಕೀಲರು. ಮಾರ್ಚ್ ಇಪ್ಪತ್ತಾರರ ಮಂಗಳವಾರದಂದು ನಾಮಪತ್ರ ಸಲ್ಲಿಸಿದ್ದಾರೆ. ಈ ಮಧ್ಯೆ ಪಕ್ಷದೊಳಗೆ ತೇಜಸ್ವಿ ಸೂರ್ಯ ಸ್ಪರ್ಧೆ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಕೆಲವು ಹಿರಿಯ ನಾಯಕರು ಪ್ರಚಾರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ತೇಜಸ್ವಿನಿ ಅನಂತಕುಮಾರ್ ಅವರು ಅದಮ್ಯ ಚೇತನ ಎಂಬ ಎನ್ ಜಿಒ ನಡೆಸುತ್ತಿದ್ದು, ಅವರಿಗೆ ಪಕ್ಷದ ಟಿಕೆಟ್ ನಿರಾಕರಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+