ಚಂದನ್ ಶೆಟ್ಟಿ-ನಿವೇದಿತಾ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು ಗೊತ್ತಾ?
ಬೆಂಗಳೂರು, ಜೂನ್, 10: ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನದ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ಶುರುವಾಗಿದ್ದವು. ಇನ್ನು ಈ ವದಂತಿಗಳಿಗೆಲ್ಲ ತೆರೆ ಎಳೆಯಲು ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಇವರಿಬ್ಬರೂ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಏನೆಲ್ಲಾ ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸುದ್ದಿಗೋಷ್ಠಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಮಾತನಾಡಿದ್ದು, "ನಾವು ಕಾನೂನಿನ ಪ್ರಕಾರವಾಗಿ ವಿಚ್ಛೇದನ ಪಡೆದಿದ್ದೇವೆ. ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ. ಸುಮ್ಮನೆ ಇಲ್ಲದಿದ್ದನ್ನು ಸೃಷ್ಟಿ ಮಾಡಬೇಡಿ. ನಮ್ಮ ಖಾಸಗಿ ವಿಚಾರವನ್ನು ನಮ್ಮಲ್ಲೇ ಇರಲು ಬಿಡಿ," ಎಂದು ಹೇಳಿದ್ದಾರೆ.

"ಬೇಡದಿರುವ ವಿಚಾರಗಳನ್ನು ಸುಮ್ಮನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಮತ್ತಷ್ಟು ತಂದಿಡುವ ಕೆಲಸವನ್ನು ಮಾಡುತ್ತಿದ್ದಾರೆ. ನನ್ನ ಮತ್ತು ನಿವೇದಿತಾ ಆಲೋಚನೆಗಳು ಬೇರೆ ಆಗಿವೆ. ಹೊಂದಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದೆವು. ಇದು ಸಾಧ್ಯವಾಗದಿದ್ದಕ್ಕೇ ವಿಚ್ಛೇದನಕ್ಕೆ ಮುಂದಾಗಿದ್ದು. ಇದಕ್ಕೇ ಬೇರೆ ಅರ್ಥ ಕಲ್ಪಿಸಬೇಡಿ," ಎಂದು ಸುದ್ದಿಗೋಷ್ಠಿಯಲ್ಲಿ ಚಂದನ್ ಶೆಟ್ಟಿ ಹೇಳಿದರು.
ನಿವೇದಿತಾಗೆ ಮೋರನೇ ವ್ಯಕ್ತಿಯ ಹಸರನ್ನ ಸೇರಿಸಬೇಡಿ. ಈ ಬಗ್ಗೆ ಸಂಬಂಧ ಕಲ್ಪಿಸಿರುವು ತುಂಬ ಬೇಸರ ಆಗಿದೆ. ಇನ್ನು ನಿವೇದಿತಾ ಗೌಡ ಅವರು ನನ್ನಿಂದ ಯಾವುದೇ ಜೀವನಾಂಶ ಕೇಳಿಲ್ಲ, ನಾನು ಕೊಟ್ಟಿಲ್ಲ. ಮಗು ಪಡೆಯುವ ವಿಚಾರದಲ್ಲಿ ನಾನು ನಿವೇದಿತಾಗೆ ಒತ್ತಾಯ ಮಾಡಿದ್ದೇನೆ ಎನ್ನುವ ವದಂತಿಗಳ ಕೂಡ ಹರಿದಾಡ್ತಿದ್ದು, ಅವುಗಳು ಸಹ ನಿಜ ಅಲ್ಲ. ನಾನು ಒತ್ತಾಯ ಮಾಡಿಲ್ಲ. ಮಕ್ಕಳ ವಿಚಾರದಲ್ಲಿ ನಿವೇದಿತಾ ಕೂಡ ನಿರಾಕರಿಸಿಲ್ಲ ಎಂದು ಚಂದನ್ ಶೆಟ್ಟಿ ಅವರು ಹೇಳಿದರು.
"ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳನ್ನು ನೋಡಿದಾಗ ನನಗೆ ತುಂಬಾ ನೋವಾಯಿತು. ನಾವೆಲ್ಲ ಫ್ಯಾಮಿಲಿ ಫ್ರೆಂಡ್ಸ್. ಪ್ರತಿ ವರ್ಷ ಅವರು ನನ್ನ ಜನ್ಮದಿನಕ್ಕೆ ವಿಶ್ ಮಾಡುತ್ತಾರೆ. ನಾನು ಕೂಡ ಅವರಿಗೆ ಶುಭಾಷಯ ಕೋರುತ್ತೇವೆ. ಈ ವರ್ಷವೇ ಈ ರೀತಿ ವದಂತಿ ಹಬ್ಬಿದ್ದು ಯಾಕೆ ಅಂತಾ ಗೊತ್ತಿಲ್ಲ. ಇದರಿಂದ ಅವರ ಕುಟುಂಬದವರಿಗೂ ನೋವಾಗುತ್ತದೆ. ನಿಮಗೆ ಇಷ್ಟ ಬಂದ ರೀತಿಯಲ್ಲಿ ಪೋಸ್ಟ್ ಮಾಡಿ ಇನ್ನೊಬ್ಬರ ಜೀವನದಲ್ಲಿ ಆಟಬೇಡಿ," ಎಂದು ವದಂತಿ ಪೋಸ್ಟ್‌ಗಳ ವಿರುದ್ಧ ನಿವೇದಿತಾ ಗೌಡ ಅಸಮಾಧಾನ ಹೊರಹಾಕಿದರು.












Click it and Unblock the Notifications