ವಾರಾಂತ್ಯಕ್ಕೆ ಕಾರ್ನಾಡರ ತುಘಲಕ್, ಕಾಸರವಳ್ಳಿ ಜೊತೆ ಕಿರುಚಿತ್ರ
ಬೆಂಗಳೂರು, ಏ.10: ಈ ವಾರಾಂತ್ಯದಲ್ಲಿ ರಂಗಾಸಕ್ತರು, ಸಿನಿಮಾ ಪ್ರಿಯರಿಗೆ ರಸದೌತಣ ಕಾದಿದೆ. ಸೇವಾ ಸದನದಲ್ಲಿ ಶನಿವಾರ ತುಘಲಕ್ ನಾಟಕ ಪ್ರದರ್ಶನವಿದ್ದರೆ, ಕೆವಿ ಸುಬ್ಬಣ್ಣ ಆಪ್ತ ಮಂದಿರದಲ್ಲಿ 6 ವಿಭಿನ್ನ ಕಿರುಚಿತ್ರಗಳ ಪ್ರದರ್ಶನವಿದೆ.
ಸಮುದಾಯ , ಬೆಂಗಳೂರು, ತುಘಲಕ್ ನಾಟಕದ ಪ್ರದರ್ಶನ, ಶನಿವಾರ(ಏ.11), ಮಲ್ಲೇಶ್ವರಂನ ಸೇವಾ ಸದನದಲ್ಲಿ ಪ್ರಸ್ತುತ ಪಡಿಸುತ್ತಿದೆ. ಇದು ಈ ತಂಡದಿಂದ ತುಘಲಕ್ 42ನೇ ಪ್ರದರ್ಶನವಾಗಿದೆ.
ಕಳೆದ ವರ್ಷ ಬೆಂಗಳೂರು ಸೇರಿದಂತೆ ಮೈಸೂರು, ಧಾರವಾಡ, ಶಿರಸಿ, ಮಂಗಳೂರು, ಉಡುಪಿ, ಗೌರಿಬಿದನೂರು, ಕೋಲಾರ ಮುಂತಾದ ಜಿಲ್ಲಾ ಕೇಂದ್ರಗಳಲ್ಲಿ ಪ್ರದರ್ಶನ ಕಂಡು, ರಾಷ್ಟ್ರೀಯ ನಾಟಕ ಶಾಲೆ (NSD) ನಡೆಸುವ ಅಂತರ ರಾಷ್ಟ್ರೀಯ ನಾಟಕ ಉತ್ಸವವಾದ, 17ನೇ ಭಾರತ ರಂಗ ಮಹೋತ್ಸವದಲ್ಲಿ ಆಯ್ಕೆಯಾದ ಏಕೈಕ ಕನ್ನಡ ನಾಟಕ ಎನಿಸಿಕೊಂಡಿತು.
ಒಂದು ವರ್ಷದಲ್ಲಿ 36 ಪ್ರದರ್ಶನಗಳನ್ನು ಒಂದು ಹವ್ಯಾಸಿ ರಂಗತಂಡ ನೀಡಿರುವ ಉದಾಹರಣೆಗಳು ಕನ್ನಡ ರಂಗಭೂಯಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡು ಬಂದಿಲ್ಲ.

ತುಘಲಕ್
ರಚನೆ : ಗಿರೀಶ ಕಾರ್ನಾಡ್
ಅಭಿನಯ : 'ಸಮುದಾಯ' ಬೆಂಗಳೂರು
ವಿನ್ಯಾಸ ಮತ್ತು ನಿರ್ದೇಶನ : ಡಾ. ಸ್ಯಾಮ್‌ಕುಟ್ಟಿ ಪಟ್ಟಂಕಾರಿ
ಸಹ ನಿರ್ದೇಶನ : ಡಾ. ಶ್ರೀಪಾದ ಭಟ್
ಸ್ಥಳ : ಸೇವಾ ಸದನ, ಮಲ್ಲೇಶ್ವರಂ 14ನೇ ಕ್ರಾಸ್
ದಿನಾಂಕ ಮತ್ತು ಸಮಯ : 11/04/2015 ಸಂಜೆ 7.00 ಕ್ಕೆ
ಟಿಕೆಟ್ ದರ : ರೂ. 100/-
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 99001 82400; 97399 33889
6 ಕಿರುಚಿತ್ರಗಳ ಪ್ರದರ್ಶನ ಕುರಿತು ಬೈಟೂ ಕಾಫಿ ಫಿಲಂ ತಂಡದ ಅಮರನಾಥ್ ವಿ.ಬಿ ಬರೆದು ಕಳಿಸಿದ್ದಾರೆ:
ಮೊದಲ ಬಾಲಿಗೆ ಸಿಕ್ಸರ್ ಹೊಡೆದಾಗ, ಹೊಡೆದವನ ಖುಷಿ ಹಾಗೂ ಆತ್ಮವಿಶ್ವಾಸ ಎಲ್ಲರಿಗಿಂತ ಹೆಚ್ಚೇ ಇರುತ್ತೆ. ಒಂದು ರೀತಿ ಅನುಭವ ಅದೇ ರೀತಿ ಇರುತ್ತೆ ಈ 12ರಂದು ನಮ್ಮ ಪ್ರೇಕ್ಷಕ ಪ್ರಭುಗಳಿಗೆ. ನೆಚ್ಚಿನ ನಿರ್ದೇಶಕರಾದ ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಅವರ ಸಮ್ಮುಖದಲ್ಲಿ, ಆರು ವಿಭಿನ್ನ ಕಿರುಚಿತ್ರಗಳ ರಸದೌತಣ ಒಂದೇ ಪರದೆಯ ಮೇಲೆ! ಪ್ರೇಕ್ಷಕರಿಗೂ ಹಬ್ಬ, ಚಿತ್ರ ಮಾಡಿದವರಿಗೂ ಹಬ್ಬ! ಇಂತಹದೊಂದು ಸಮ್ಮಿಲನಕ್ಕೆ ಸಾಕ್ಷಿ ಯಾಗಲು ನೀವು ರೆಡಿಯಿದ್ದೀರಾ?

ಇದೇ ಭಾನುವಾರ-12ನೇ ಏಪ್ರಿಲ್- ಸಂಜೆ-5.15ರ ನಂತರ,
ಸ್ಥಳ:
ಕೆ.ವಿ.ಸುಬ್ಬಣ್ಣ ಆಪ್ತ ಸಮೂಹ
151, ದಯಾನಂದ್ ಇಂಜಿನಿಯರಿಂಗ್ ಕಾಲೇಜ್ ಹತ್ತಿರ,
7ನೇ ಅಡ್ಡರಸ್ತೆ, ಟೀಚರ್ಸ್ ಕಾಲೋನಿ, ಮೊದಲನೇ ಹಂತ,
ಕುಮಾರಸ್ವಾಮಿ ಲೇ ಔಟ್, ಬೆಂಗಳೂರು-78
ಪ್ರದರ್ಶನಗೊಳ್ಳುವ ಕಿರುಚಿತ್ರಗಳು:
* ಡೆವಿಲ್ ಇನ್ ದ ಬ್ಲ್ಯಾಕ್ ಸ್ಟೋನ್: ಭಾಷೆ: ಕನ್ನಡ, ಅವಧಿ:20 ನಿಮಿಷ, ನಿರ್ದೇಶನ: ಅನನ್ಯ ಕಾಸರವಳ್ಳಿ
* ಆಸರೆ : ಭಾಷೆ: ಕನ್ನಡ, ಅವಧಿ:23 ನಿಮಿಷ, ನಿರ್ದೇಶನ: ಬೈಟೂ ಕಾಫೀ ಫಿಲಂ, ಭರತ್ ಬಾಳೇಮನೆ
* ದ ವೆಡ್ಡಿಂಗ್ ಸ್ಯಾರೀ: ಭಾಷೆ:ಹಿಂದಿ, ಅವಧಿ:15 ನಿಮಿಷ, ನಿರ್ದೇಶನ: ಅನಿಕೇತ್ ಧಾವಳೆ
* ಡಾರ್ಕ್ ಲೈಟ್ : ಭಾಷೆ:ಇಂಗ್ಲೀಷ್, ಅವಧಿ:5 ನಿಮಿಷ, ನಿರ್ದೇಶನ: ಹರೀಶ್ ಎಂ
* ಸೆವೆಂಟೀನ್ : ಭಾಷೆ: ಕನ್ನಡ, ಅವಧಿ:23 ನಿಮಿಷ, ನಿರ್ದೇಶನ: ಬೈಟೂ ಕಾಫೀ ಫಿಲಂ, ಭರತ್ ಬಾಳೇಮನೆ
* ಟಕ್ ಟಕ್ ಟಕ್ : ಭಾಷೆ: ಕನ್ನಡ, ಅವಧಿ:23 ನಿಮಿಷ, ನಿರ್ದೇಶನ: ಬೈಟೂ ಕಾಫೀ ಫಿಲಂ, ಭರತ್ ಬಾಳೇಮನೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications