ಬೆಂಗಳೂರಿನ ವಿವಿಧೆಡೆ ಫೆಬ್ರವರಿ 6 ರಂದು ನೀರಿನ ಸರಬರಾಜಿನಲ್ಲಿ ವ್ಯತ್ಯಯ
ಬೆಂಗಳೂರು,ಫೆಬ್ರವರಿ 04: ಬೆಂಗಳೂರಿನ ವಿವಿಧೆಡೆ ಫೆಬ್ರವರಿ 6 ರಂದು ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಕೋರಮಂಗಲ,ಎಂಜಿರಸ್ತೆ,ಜಯನಗರ,ಆಡುಗೋಡಿ,ಅಲಸೂರಿನಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ ನೀರಿನ ವ್ಯತ್ಯಯ ಉಂಟಾಗಲಿದೆ.
ಬೆಳಗ್ಗೆ 8 ರಿಂದ ಸಂಜೆ 6ರವರೆಗೆ ವ್ಯತ್ಯಯವಾಗಲಿದೆ. ಪಂಪಿಂಗ್ ಸ್ಟೇಷನ್ ಉನ್ನತೀಕರಿಸುತ್ತಿರುವ ಕಾರಣ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ ಎಂದು ಜಲ ಮಂಡಳಿ ಮಾಹಿತಿ ನೀಡಿದೆ.

ಯಾವ್ಯಾವ ಪ್ರದೇಶದಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಮಾಹಿತಿ ಇಲ್ಲಿದೆ.ಜಯನಗರ, ತಿಲಕ್ ನಗರ,ಎಸ್‌ಆರ್ ನಗರ, ಆಡುಗೋಡಿ, ನೇತಾಜಿನಗರ, ಕೆಪಿ ಅಗ್ರಹಾರ,ನ್ಯೂ ಬಿನ್ನಿ ಲೇಔಟ್,ರಾಘವೇಂದ್ರ ಕಾಲೊನಿ,ಟಿಪ್ಪು ನಗರ,ಚಾಮರಾಜಪೇಟೆ, ರಾಮಚಂದ್ರ ಅಗ್ರಹಾರ,ಆದರ್ಶ ನಗರ,ಪಾದರಾಯನಪುರ,ಅಂಜನಪ್ಪ ಗಾರ್ಡನ್,ಶ್ರೀನಿವಾಸನಗರ,ಬ್ಯಾಂಕ್ ಕಾಲೊನಿ,ಐಟಿಐ ಲೇಔಟ್,ಗುರುರಾಜ ಲೇಔಟ್,ವಿವೇಕಾನಂದನಗರ, ಕತ್ರಿಗುಪ್ಪೆ, ತ್ಯಾಗರಾಜನಗರ,ಬಸವನಹಗುಡಿ,ಶಾಸ್ತ್ರಿನಗರ,ಎನ್‌ಆರ್ ಕಾಲೊನಿ, ಮೌಂಟ್ ಜಾಯ್ ಎಕ್ಸ್‌ಟೆನ್ಷನ್, ಕುಮಾರಸ್ವಾಮಿ ಲೇಔಟ್, ಇಸ್ರೋ ಲೇಔಟ್,ವಿಟ್ಠಲನಗರ,ಶಾಂತಲನಗರ,ಅಂಬೇಡ್ಕರ್ ನಗರ, ನೀಲಸಂಧ್ರ, ಆಸ್ಟಿನ್ ಟೌನ್, ಈಜಿಪುರ, ವಿವೇಕನಗರ,ಅಶೋಕ್ ನಗರ, ರಿಚ್‌ಮಂಡ್ ಟೌನ್, ಎಂಜಿ ರಸ್ತೆ,ಬ್ರಿಗೇಡ್ ರಸ್ತೆ, ಎಚ್‌ಎಎಲ್ ಎರಡನೇ ಹಂತ, ಕೋಡಿಹಳ್ಳಿ,ಉಲಸೂರು,ಜೋಗುಪಾಳ್ಯ, ರಾಜೇಂದ್ರನಗರ,ನಂಜಪ್ಪ ರೆಡ್ಡಿ ಲೇಔಟ್‌ನಲ್ಲಿ ನೀರಿನ ಸರಬರಾಜು ಇರುವುದಿಲ್ಲ.
ಕೋರಮಂಗಲ ಸುತ್ತಮುತ್ತಲ ಪ್ರದೇಶ, ವೆಂಕಟೇಶ್ವರ ಲೇಔಟ್, ಕಾವೇರಿ ಲೇಔಟ್, ಜೋಗಿ ಕಾಲೊನಿ, ದೊಮ್ಮಲೂರು, ಬೃಂದಾವನನಗರ,ಮಾರುತಿ ನಗರ, ಎಕೆ ಕಾಲೊನಿ, ನೇತ್ರಾವತಿ 1 ರಿಂದ 10 ನೇ ಬ್ಲಾಕ್, ನಂಜಪ್ಪರೆಡ್ಡಿ ಲೇಔಟ್,ಭೋವಿ ಕಾಲೊನಿಯ ಸುತ್ತಮುತ್ತಲ ಪ್ರದೇಶದಲ್ಲಿ ನೀರು ಇರುವುದಿಲ್ಲ.












Click it and Unblock the Notifications