ವೈರಲ್ ವಿಡಿಯೋ; ಬೆಂಗಳೂರಲ್ಲಿ ಮಳೆ, ಕೊಚ್ಚಿ ಹೋದ ರಸ್ತೆ
ಬೆಂಗಳೂರು, ಜೂನ್ 25 : ಬೆಂಗಳೂರು ನಗರದಲ್ಲಿ ಗುರುವಾರ ಸಂಜೆ ಭಾರಿ ಮಳೆಯಾಗಿದೆ. ವೃಷಭಾವತಿ ತುಂಬಿ ಹರಿದಿದ್ದು, ತಡೆ ಗೋಡೆ ಕೊಚ್ಚಿ ಹೋಗಿ ಮೈಸೂರು ರಸ್ತೆ ಕುಸಿದು ಹೋಗಿದೆ.
ಗುರುವಾರ ಸಂಜೆ 4.30ರ ಸುಮಾರಿಗೆ ನಗರದಲ್ಲಿ ಮಳೆ ಆರಂಭವಾಯಿತು. 6.30ರ ತನಕ ಗುಡುಗು ಮತ್ತು ಸಿಡಿಲಿನ ಜೊತೆಗೆ ಮಳೆ ಸುರಿದಿದೆ. ರಾತ್ರಿ 11 ಗಂಟೆ ಸುಮಾರಿಗೆ ಮತ್ತೆ ಮಳೆ ಆರಂಭವಾಗಿದೆ.
ನಗರದಲ್ಲಿ ಸುರಿದ ಮಳೆಯಿಂದಾಗಿ ವೃಷಭಾವತಿ ತುಂಬಿ ಹರಿಯಿತು. ಇದರಿಂದಾಗಿ ಕೆಂಗೇರಿ ಬಳಿಯ ದುಬಾಸಿಪಾಳ್ಯದಲ್ಲಿ ನದಿಗೆ ಕಟ್ಟಲಾಗಿದ್ದ ತಡೆಗೋಡೆ ಕೊಚ್ಚಿ ಹೋಗಿದೆ. ಇದರಿಂದಾಗಿ ಹಲವು ತಾಸುಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಬೆಂಗಳೂರು-ಮೈಸೂರು ಸಂಪರ್ಕಿಸುವ ರಸ್ತೆ ಸುಮಾರು 3 ಅಡಿಯಷ್ಟು ಕುಸಿದು ಹೋಗಿದೆ. ಶುಕ್ರವಾರವೇ ರಸ್ತೆ ದುರಸ್ಥಿ ಕಾರ್ಯ ಆರಂಭಿಸಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ.
ವೃಷಭಾವತಿ ತುಂಬಿ ಹರಿಯುತ್ತಿರುವ ಮತ್ತು ತಡೆ ಗೋಡೆ ಕುಸಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೃಷಭಾವತಿ ನೀರಿನಲ್ಲಿ ಹಲವು ವಾಹನಗಳು ಸಹ ಸಿಕ್ಕಿ ಹಾಕಿಕೊಂಡಿರುವ ಫೋಟೋಗಳು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿವೆ.
ವೈರಲ್ ಆಗಿರುವ ವಿಡಿಯೋ
Karnataka: Water level of Vrishabawathi river continues to rise, following heavy rainfall in Bengaluru. pic.twitter.com/udCOZTMqbl
— ANI (@ANI) June 25, 2020












Click it and Unblock the Notifications