Bengaluru Water Crisis: ಕಡ್ಡಾಯ ಏರಿಯೇಟರ್ ಅಳವಡಿಕೆಗೆ ಗಡುವು ವಿಸ್ತರಿಸಿದ ಜಲಮಂಡಳಿ

ಬೆಂಗಳೂರು, ಮಾರ್ಚ್ 30: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮಾರ್ಚ್ 31 ರೊಳಗೆ ನಗರದ ಎಲ್ಲಾ ಸಾರ್ವಜನಿಕ ನಲ್ಲಿಗಳಿಗೆ ಕಡ್ಡಾಯವಾಗಿ ಏರೇಟರ್‌ಗಳನ್ನು ಅಳವಡಿಸಬೇಕು ಎಂದು ಈ ಹಿಂದೆ ಆದೇಶ ಹೊರಡಿಸಿತ್ತು. ಈಗ ಗಡುವನ್ನು ಏಪ್ರಿಲ್ 7 ರವರೆಗೆ ವಿಸ್ತರಿಸಿ ಆದೇಶ ನೀಡಿದೆ.

ಮಾರುಕಟ್ಟೆಗಳಲ್ಲಿ ಕಡಿಮೆ ಬೆಲೆಗೆ ಸಿಗುವ ಏರಿಯೇಟರ್‌ಗಳನ್ನು ಕೊಳಾಯಿಗಳಿಗೆ ಅಳವಡಿಕೆ ಮಾಡುವ ಮೂಲಕ ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯಬೇಕು ಎಂದು ಈ ಸೂಚನೆ ನೀಡಿತ್ತು. ಇಲ್ಲದೆ ಇದ್ದರೇ ಮೊದಲ ಅಪರಾಧಕ್ಕೆ 5,000 ರೂಪಾಯಿ ದಂಡ ವಿಧಿಸಲಾಗುವುದು ಮತ್ತು ಅಂತಹವರಿಗೆ 50% ರಷ್ಟು ನೀರು ಸರಬರಾಜನ್ನು ಕಡಿತಗೊಳಿಸಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

Water Crisis BWSSB extends deadline for mandatory tap aerators till April 7

ಜಲಮಂಡಳಿ ಮರು ಆದೇಶದಲ್ಲಿ ಏನಿದೆ...?

ಬೆಂಗಳೂರು ನಗರದಲ್ಲಿ ಮಳೆಯ ಅಭಾವದಿಂದಾಗಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿರುತ್ತವೆ. ಈ ಸಂಬಂಧ, ಉಲ್ಬಣವಾಗಿರುವ ಸಮಸ್ಯೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಎಲ್ಲರ ಸಹಕಾರ ಬಹಳ ಮಹತ್ವವಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಮಾಲ್‌ಗಳಲ್ಲಿ, ವಾಣಿಜ್ಯ ಸಂಕೀರ್ಣಗಳಲ್ಲಿ, ಅಪಾರ್ಟ್‌ಮೆಂಟ್‌ ಗಳಲ್ಲಿ, ಸರ್ಕಾರಿ ಕಟ್ಟಡಗಳಲ್ಲಿ, ಐಷಾರಾಮಿ ಹೋಟೆಲ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ಹಾಗೂ ಧಾರ್ಮಿಕ ಸ್ಥಳಗಳನ್ನೊಳಗೊಂಡ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆಗಾಗಿ ಬಳಸುವ ನಲ್ಲಿಗಳಲ್ಲಿ ಕಡ್ಡಾಯವಾಗಿ Flow Restrictor/Aerator ಎಂಬ ಸಾಧನವನ್ನು ದಿನಾಂಕ: 31.03.2024 ರೊಳಗಾಗಿ ಅಳವಡಿಸಿಕೊಂಡು ನೀರನ್ನು ಬಳಕೆ ಮಾಡುವಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಆದೇಶಿಸಲಾಗಿರುತ್ತದೆ.

ಈ ಕ್ರಮವನ್ನು ಸರಿಯಾಗಿ ನಿರ್ವಹಿಸುವ ಮೇಲ್ಕಂಡ ಗ್ರಾಹಕರುಗಳಿಗೆ ಬೆಂಗಳೂರು ಜಲಮಂಡಳಿ ವತಿಯಿಂದ "ಪರಿಸರ ಸ್ನೇಹಿ ಹಸಿರು ಸ್ಟಾರ್ ಬಳಕೆದಾರ" ಎಂಬ ಪ್ರಮಾಣ ಪತ್ರ ನೀಡಲಾಗುವುದೆಂದು ತಿಳಿಸಲಾಗಿತ್ತು. ಒಂದು ವೇಳೆ ದಿನಾಂಕ: 31.03.2024 ರೊಳಗಾಗಿ ಮೇಲೆ ತಿಳಿಸಿರುವ ಸ್ಥಳಗಳಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964 ಕಲಂ 49 ರಂತೆ Flow Restrictor/Aerator ಅಳವಡಿಸದೆ ಇರುವುದು ಕಂಡುಬಂದಲ್ಲಿ, ಕೂಡಲೇ ಅಂತಹವರಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ- 1964 ಕಲಂ 53 ರಂತೆ ಮಂಡಳಿಯು ಸರಬರಾಜು ಮಾಡುತ್ತಿರುವ ನೀರಿನ ಪ್ರಮಾಣದಲ್ಲಿ ಶೇಕಡ 50 ರವರೆಗೆ ಕಡಿತಗೊಳಿಸಲಾಗುವುದು.

Water Crisis BWSSB extends deadline for mandatory tap aerators till April 7

ಜಲಮಂಡಳಿಯ ಕಾಯ್ದೆ 1964 ರ ಕಲಂ 109 ರಂತೆ ರೂ. 5000ಗಳ ದಂಡ ವಿಧಿಸಲಾಗುವುದು. ಈ ಉಲ್ಲಂಘನೆಯು ಮರುಕಳಿಸಿದಲ್ಲಿ ದಂಡ ಮೊತ್ತ ರೂ.5000 ಜೊತೆಗೆ ಹೆಚ್ಚುವರಿಯಾಗಿ ರೂ.500 ಪ್ರತಿದಿನದಂತೆ ದಂಡ ಹಾಕಲಾಗುವುದು. ಹಾಗೂ ನಂತರ Flow Restrictor/Aerator ಅಳವಡಿಸದೆ ಇರುವ ಮೇಲ್ಕಂಡ ಸ್ಥಳಗಳಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964 ಕಲಂ 49(2) ರಲ್ಲಿರುವ ಅವಕಾಶಗಳಂತೆ ಜಲಮಂಡಳಿಯ ವತಿಯಿಂದಲೆ Flow Restrictor/Aerator ಅಳವಡಿಸಿ ಆ ಮೊತ್ತವನ್ನು ಆಯಾ ಗ್ರಾಹಕರಿಂದಲೇ ವಸೂಲಿ ಮಾಡಲಾಗುವುದು ಎಂದು ಈಗಾಗಲೇ ಆದೇಶಿಸಲಾಗಿರುತ್ತದೆ.

ಪ್ರಸ್ತುತ ಸಾರ್ವಜನಿಕರು ಈ ಗಡುವನ್ನು ವಿಸ್ತರಿಸುವಂತೆ ಕೋರಿರುವುದರಿಂದ, ಸಾರ್ವಜನಿಕ ಹಿತದೃಷ್ಟಿಯಿಂದ Flow Restrictor/Aerator ಎಂಬ ಸಾಧನವನ್ನು ಅಳವಡಿಸಿಕೊಳ್ಳಲು ನಿಗದಿಪಡಿಸಿದ್ದ ಗಡುವನ್ನು ದಿನಾಂಕ: 31.03.2024 ರಿಂದ ದಿನಾಂಕ: 07.04.2024 ರವರೆಗೆ ದಂಡ ರಹಿತವಾಗಿ ವಿಸ್ತರಿಸಲಾಗಿದೆ. ಒಂದು ವೇಳೆ ದಿನಾಂಕ: 07.04.2024 ರೊಳಗಾಗಿ ಅಳವಡಿಸದಿದ್ದಲ್ಲಿ ಈಗಾಗಲೇ ಆದೇಶಿಸಿರುವಂತೆ ದಿನಾಂಕ: 08.04.2024 ರಿಂದ ದಂಡ ವಿಧಿಸಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+