ಬೆಂಗಳೂರು ಜಲಮಂಡಳಿ: ಜು.6ರಂದು ನೀರಿನ ಅದಾಲತ್
ಬೆಂಗಳೂರು, ಜು.5: ಬೆಂಗಳೂರು ಜಲಮಂಡಳಿಯ ಪೂರ್ವ(1) ವಿಭಾಗದಲ್ಲಿ ಜು.6ರಂದು ನೀರಿನ ಅದಾಲತ್ ನಡೆಯಲಿದೆ. ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಭ ಮತ್ತಿತರೆ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ನೀರಿನ ಅದಾಲತ್ ನಡೆಸಲಾಗುತ್ತದೆ.
ನೀರಿನ ಅದಾಲತ್ ಬೆಳಗ್ಗೆ 9.30ರಿಂದ 11 ಗಂಟೆಯವರೆಗೆ ನಡೆಯಲಿದೆ. ಪೂರ್ವ ಉಪವಿಭಾಗ ವ್ಯಾಪ್ತಿಗೆ ಬರುವ ಎಚ್.ಆರ್.ಬಿ.ಆರ್ ಲೇಔಟ್, ಕಲ್ಯಾಣನಗರ, ಎಚ್‌ಬಿಆರ್ ಲೇಔಟ್ ಸೇವಾಠಾಣೆಗಳಿಗೆ ಸಂಬಂಧಿಸಿದ ವಿವಾದಗಳನ್ನು 1 ನೇ ಬ್ಲಾಕ್, ಎಚ್‌ಆರ್‌ಬಿಆರ್ ಲೇಔಟ್, ಕಲ್ಯಾಣನಗರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಲ್ಲಿ ಪರಿಶೀಲಿಸಿ ಬಗೆಹರಿಸಲಾಗುತ್ತದೆ.

ಕುಂದುಕೊರತೆಗೆ ಸಂಬಂಧಿಸಿದಂತೆ ಮಂಡಳಿಗೆ 22238888, ಅಥವಾ 8762228888 ಕತೆ ಮಾಡಬಹುದು. ಸಾರ್ವಜನಿಕರು ಸಮಸ್ಯೆಗಳನ್ನು ಬಗೆಹಿರಿಸಕೊಳ್ಳಲು ಈ ನೀರಿನ ಅದಾಲತ್ ಸೌಲಭ್ಯಗಳನ್ನು ಬಳಸಿಕೊಳ್ಳಬಹುದಾಗಿದೆ.












Click it and Unblock the Notifications