ಕನ್ನಡ ಮಾತಾಡಿ ಕನ್ನಡಿಗರ ಮನಸ್ಸು ಗೆದ್ದ ವಾಷಿಂಗ್ಟನ್ "ಸುಂದರ"! , ಕೆ.ಎಲ್ ರಾಹುಲ್ ರಿಯಾಕ್ಷನ್ ಇಲ್ಲಿದೆ ವೈರಲ್ ವಿಡಿಯೋ!
ಕ್ರಿಕೆಟಿಗ ವಾಷಿಂಗ್ಟನ್ ಸುಂದರ್ ಅವರು ಕರ್ನಾಟಕಕ್ಕೆ ಭೇಟಿ ನೀಡಿದ್ದು, ಕರ್ನಾಟಕದ ಬಗ್ಗೆ ಹಾಗೂ ಕ್ರಿಕೆಟಿಗ ಕೆ.ಎಲ್ ರಾಹುಲ್ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಅವರು ಕನ್ನಡದಲ್ಲೇ ಮಾತನಾಡಿರುವುದು ಹಾಗೂ ಚೆನ್ನೈಗಿಂತ ಬೆಂಗಳೂರು ಚೆಂದ ಎನ್ನುವ ಬಗ್ಗೆ ಮಾತನಾಡಿರುವುದು ವೈರಲ್ ಆಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕಕ್ಕೆ ಭೇಟಿ ಕೊಟ್ಟಿರುವ ಅವರು ಕನ್ನಡದಲ್ಲೇ ಮಾತನಾಡಿರುವುದು ಸೊಗಸಾಗಿದೆ. ಈ ಚೆಂದದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಾಷಿಂಗ್ಟನ್ ಸುಂದರ್ ಅವರ ಕನ್ನಡದ ಹಾಡನ್ನೂ ಹಂಚಿಕೊಂಡಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಕ್ರಿಕೆಟಿಗ ವಾಷಿಂಗ್ಟನ್ ಸುದಂರ್ ಅವರು ಬ್ಲಾಗರ್ ಆಗಿ ಬದಲಾಗಿದ್ದಾರೆ. ಕರ್ನಾಟಕ ಮತ್ತು ಕನ್ನಡದ ಬಗ್ಗೆ ಮಾತನಾಡಿ, ಕನ್ನಡಗರಿಗೆ ಆಪ್ತರಾಗಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರು ಹಾಗೂ ನಂದಿಬೆಟ್ಟದ ಬಗ್ಗೆ ಅವರು ಮಾತನಾಡಿದ್ದಾರೆ. ಹುರಿದ ಜೋಳ ಮಾರುವವರೊಂದಿಗೆ "ಅಕ್ಕ ಕ್ರಿಕೆಟ್ ನೋಡ್ತೀರಾ" ಎಂದು ಸುಂದರ್ ಅವರು ಕನ್ನಡದಲ್ಲೇ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಇಲ್ಲ ಎಂದು ಮಹಿಳೆ ನಗುತ್ತಲ್ಲೇ ಉತ್ತರಿಸಿದ್ದಾರೆ.

ಬೆಂಗಳೂರಿನಲ್ಲಿ ನಾನು ಕಳೆದ ಕ್ಷಣಗಳು ಎನ್ನುವ ವಿಡಿಯೋವನ್ನು ಸುಂದರ್ ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನಾನು ನಂದಿಬೆಟ್ಟಕ್ಕೆ ಬರಬೇಕು ಎಂದು ಕೊಂಡು ಬಂದಿದ್ದೀನಿ ಅಂತ ಹೇಳಿದ್ದಾರೆ. ಇನ್ನು ನಂದಿಬೆಟ್ಟದ ದೃಶ್ಯಗಳೊಂದಿಗೆ ಪ್ರೇಮಲೋಕದ ಹಾಡನ್ನೂ ಹಂಚಿಕೊಂಡಿದ್ದಾರೆ. ಈ ವೇಳೆ ಕೆ.ಎಲ್ ರಾಹುಲ್ ಅವರು ಚೆನ್ನೈಗಿಂತ ಬೆಂಗಳೂರು ಚೆನ್ನಾಗಿದೆ ಎಂದು ಹೇಳುತ್ತಿರುತ್ತಾರೆ. ಅದನ್ನು ನಾನು ಎಂದಿಗೂ ಒಪ್ಪಿಕೊಂಡಿರಲಿಲ್ಲ. ಇದನ್ನೆಲ್ಲ ನೋಡಿದ ಮೇಲೆ ಅವರ ಮಾತುಗಳಿಗೆ ಕ್ರೆಡಿಟ್ ಕೊಡಬೇಕು / ಅಥವಾ ಅವರು ಹೇಳುವುದರಲ್ಲಿ ಸತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆ.ಎಲ್ ರಾಹುಲ್ ಅವರ ಅನುಭವ ಹಾಗೂ ಬೆಂಗಳೂರಿನ ಬಗ್ಗೆ ಅವರಿಗೆ ಇರುವ ಅಭಿಮಾನ ದೊಡ್ಡದು ಎಂದಿದ್ದಾರೆ.
ಕೆ.ಎಲ್ ರಾಹುಲ್ ರಿಯಾಕ್ಷನ್: ಇನ್ನು ಈ ಪೋಸ್ಟ್‌ಗೆ ಕೆ.ಎಲ್ ರಾಹುಲ್ ಅವರು ಸಹ ರಿಯಾಕ್ಟ್ ಮಾಡಿದ್ದಾರೆ. "Nammuru Bengaluru 💕" ಎಂದು ಕೆ.ಎಲ್ ರಾಹುಲ್ ಅವರು ರಿಯಾಕ್ಟ್ ಮಾಡಿದ್ದಾರೆ. ಸುಂದರ್ ಅವರ ಕನ್ನಡದ ಮಾತುಗಳಿಗೆ ಮನಸೋತಿರುವ ಕನ್ನಡಿಗರು "ದೂರದಿಂತ ಬಂದಂತ ಸುಂದರಂಗಾ ಜಾಣ 😍" ಅಂತ ಕಮೆಂಟ್ ಮಾಡಿದ್ದಾರೆ. ಸುಂದರ ವ್ಲಾಗ್ 😍, ಕನ್ನಡದ ಮಾತು ಚೆನ್ನ, ಕನ್ನಡದ ನೆಲ ಚೆನ್ನ,ಕನ್ನಡ ಮಾತನಾಡುವವರು ಇನ್ನು ಚೆನ್ನ..♥️ ಎಂದು ಹಲವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.












Click it and Unblock the Notifications