ಸ್ಥಗಿತಗೊಂಡಿದ್ದ ಹೆಬ್ಬಾಳ ಮೇಲ್ಸೇತುವೆ ಕಾಮಗಾರಿಗೆ ಮರು ಚಾಲನೆ

ಬೆಂಗಳೂರು, ಡಿಸೆಂಬರ್ 15: ಸದಾ ವಾಹನಗಳ ದಟ್ಟಣೆಯಿಂದ ಕೂಡಿರುವ ನಗರದ ಪ್ರಮುಖ ಜಂಕ್ಷನ್ ಆದ ಹೆಬ್ಬಾಳ ಮೇಲ್ಸೇತುವೆಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಸ್ಥಗತಿಗೊಂಡಿದ್ದ ಎರಡು ಲೈನ್‌ನ ಕಾಮಗಾರಿಯು ಮೂರು ವರ್ಷಗಳ ಬಳಿಕ ಪುನಾರಂಭಗೊಳ್ಳಲಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದಿಂದ ನಡೆಯಬೇಕಿದ್ದ ಹೆಬ್ಬಾಳ ಮೇಲ್ಸೇತುವೆಯ ಕಾಮಗಾರಿಯು ಏಪ್ರಿಲ್ 2019ರಲ್ಲೇ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಮೂರು ವರ್ಷಗಳ ಬಳಿಕ ಇದೀಗ ಪುನಾರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಬುಧವಾರ ಬಿಡಿಎಗೆ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದ ಮೇಲ್ಸೇತುವೆಗೆ ಮೊದಲ ಹಂತದಲ್ಲಿ ಕಾಮಗಾರಿ ಯೋಜನೆ ಶೀಘ್ರವೇ ಆರಂಭಗೊಳ್ಳಲಿದೆ. ಸದ್ಯಕ್ಕೆ ಎರಡನೇ ಹಂತದಲ್ಲಿ ನಿರ್ಮಿಸುವ ಯೋಜನೆಯನ್ನು ಕೈಬಿಡಲಾಗಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

ಹಾಲಿ ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನ ದಟ್ಟಣೆ ಎದುರಿಸಲಾಗುತ್ತಿದೆ. ಯಲಹಂಕ, ಜಕ್ಕೂರು, ದೊಡ್ಡಬಳ್ಳಾಪುರ, ಗೌರಿಬಿದನೂರು, ಸಹಕಾರ ನಗರ, ಕಾಫಿಬೋರ್ಡ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ಬೆಂಗಳೂರು ಪ್ರವೇಶಿಸಲು ಈ ಮೇಲ್ಸೇತುವೆ ಅನುಸರಿಸುತ್ತಾರೆ. ಸಾಕಷ್ಟು ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದಾರೆ.

Was Suspended Work Of Hebbal Flyover Will Resumption Soon

ಮುಂದಿನ ದಿನಗಳಲ್ಲಿ ಈ ಟ್ರಾಫಿಕ್‌ ಸಮಸ್ಯೆ ಕಡಿಮೆಯಾಗಲಿದೆ. ಇಲ್ಲಿ ರಸ್ತೆ ಅಂಡರ್‌ಪಾಸ್ ಹೊರತುಪಡಿಸಿ ಮೊದಲ ಹಂತದಲ್ಲಿ ಮಾತ್ರ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಕಡೆಗೆ ಬರುವ ಎರಡು ಲೇನ್‌ಗಳನ್ನು ಬಿಡಿಎ ನಿರ್ಮಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) 2019 ರಲ್ಲಿ ಬಿಡಿಎ ನಿಂದ ನಡೆಯುತ್ತಿದ್ದ ಹೆಬ್ಬಾಳ ಮೇಲ್ಸೇತುವೆ ಉದ್ದೇಶಿತ ಯೋಜನೆಯ ಕೆಲಸವನ್ನು ಸ್ಥಗಿತಗೊಳಿಸಿಸಿತ್ತು. ಕಾರಣ ಈ ಮೇಲ್ಸೇತುವೆ ಹಿಂದೆ ಎರಡು ಪ್ರತ್ಯೇಕ ಮೆಟ್ರೋ ಲೈನ್‌ಗಳಿಗೆ ಹಾದು ಹೋಗಲಿವೆ ಎನ್ನಲಾಗಿದೆ. ಹೀಗಾಗಿ ರಸ್ತೆ ಲೈನ್ ನಿರ್ಮಾಣ ಕೆಲಸ ನಿಂತಿತ್ತು.

Was Suspended Work Of Hebbal Flyover Will Resumption Soon

ಅಂಡರ್‌ಪಾಸ್‌ ನಿರ್ಮಾಣ ಸದ್ಯಕ್ಕಿಲ್ಲ

ಹೆಬ್ಬಾಳ ಮೇಲ್ಸೇತುವೆಯ ಮೂಲಕ ಕೆಂಪಾಪುರದವರೆಗಿನ ಹೊರವರ್ತುಲ ರಸ್ತೆ ಪಶ್ಚಿಮ ಭಾಗಕ್ಕೆ ಮೆಟ್ರೋ ಹಂತ3 ಮತ್ತು ಸರ್ಜಾಪುರದಿಂದ ಹೆಬ್ಬಾಳದವರೆಗಿನ ಹಂತ 3ಎ ಮೆಟ್ರೋ ಲೇನ್ ಹಾದುಹೋಗುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಹಾಲಿ ಮೇಲ್ಸೇತುವೆ ಮತ್ತು ವಿವಿಧ ದಿಕ್ಕುಗಳಿಗೆ ಲೂಪ್‌, ಇಳಿಜಾರುಗಳನ್ನು ವಿಸ್ತರಿಸಲು ಯೋಜಿಸಲಾಗಿದೆ. ಮೆಟ್ರೋ ಹಂತ 3ರ ಲೇನ್ ಜೋಡನೆ ಅನುಗುಣವಾಗಿ ಅಂಡರ್‌ಪಾಸ್ ನಿರ್ಮಾಣ ಯೋಜನೆ ರೂಪಿಸಬೇಕಿದೆ. ಹೀಗಾಗಿ ಮೇಲ್ಸೇತುವೆ ಕಾಮಗಾರಿಯಲ್ಲಿ ಅಂಡರ್‌ಪಾಸ್‌ ಒಳಪಟ್ಟಿಲ್ಲ ಎನ್ನಲಾಗಿದೆ.

ಯೋಜನೆಯನ್ನು ಪಿಜೆಬಿ ಕನ್‌ಸ್ಟ್ರಕ್ಷನ್ಸ್ ಕಂಪನಿಗೆ 80 ಕೋಟಿ ರೂ, ಗುತ್ತಿಗೆ ನೀಡಲಾಗಿದೆ. ಬಿಡಿಎ ಈಗಾಗಲೇ 25 ಕೋಟಿ ರೂ. ಬಿಡುಗಡೆ ಮಾಡಿದೆ. 2019ಕ್ಕೂ ಮೊದಲು ಯೋಜನೆ ಪಾಯದ ಕಾಮಗಾರಿ ಪೂರ್ಣಗೊಂಡಿದೆ. ಮೂರು ವರ್ಷದ ವಿಳಂಬದಿಂದಾಗಿ ಉದ್ದೇಶಿತ ಯೋಜನೆಯ ವೆಚ್ಚ ಈಗ ಹೆಚ್ಚಾಬಹುದು. ಒಂದು ವೇಳೆ ಅಧಿಕ ಹಣ ನೀಡಬೇಕಾದಲ್ಲಿ ಅದನ್ನು ಕಂಪನಿಗೆ ನೀಡಲಾಗುವುದು. ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಬಿಡಿಎ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+