Viral Video: ಬೆಂಗಳೂರು ಸಮೀಪದ ಗುಹೆಯಲ್ಲಿ ವಾಸವಾಗಿರುವ 188 ವರ್ಷದ ವ್ಯಕ್ತಿ! ಏನಿದು ವೈರಲ್ ವಿಡಿಯೋ
ಮನುಷ್ಯನ ಆಯಸ್ಸು ಎಷ್ಟು ಎನ್ನುವುದಕ್ಕೆ ಸರಿಯಾದ ಸಂಖ್ಯೆಯನ್ನು ಎಂದಿಗೂ ಹೇಳಲಾಗದು. ಆಹಾರ ಪದ್ಧತಿ, ವಾತಾವರಣ, ಜೀವನ ಕ್ರಮದಂತಹ ಹಲವು ಸಂಗತಿಗಳು ಮನುಷ್ಯನ ಆಯಸ್ಸಿನ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೂ 100 ವರ್ಷಕ್ಕೂ ಮೇಲ್ಪಟ್ಟು ಬದುಕಿ ಬಾಳಿದ ಸಾವಿರಾರು ಜನ ನಮ್ಮ ಕಣ್ಮುಂದೆ ಇದ್ದಾರೆ. ಸಾಧು ಸಂತರು ಮಾತ್ರವಲ್ಲದೆ ಹಲವು ಸಾಮಾನ್ಯ ಜನ ಕೂಡ ನೂರಕ್ಕೂ ಹೆಚ್ಚು ವರ್ಷಗಳ ಜೀವಂತ ಇರುವ ಸಾವಿರಾರು ಉದಾಹರಣೆಗಳಿವೆ. ಆದರೆ ಬೆಂಗಳೂರು ಸಮೀಪದ ಗುಹೆಯೊಂದರಲ್ಲಿ 188 ವಯಸ್ಸಿನ ವ್ಯಕ್ತಿಯೊಬ್ಬ ಜೀವಂತವಾಗಿದ್ದು, ರಕ್ಷಣೆ ಮಾಡಲಾಗಿದೆ ಎನ್ನುವ ವಿಡಿಯೋ ಸದ್ಯ ಸಖತ್ ವೈರಲ್ ಆಗಿದೆ.
'ಕನ್ಸರ್ನ್ಡ್ ಸಿಟಿಜನ್' ಎನ್ನುವ ಎಕ್ಸ್ ಹ್ಯಾಂಡಲ್‌ನಲ್ಲಿ ವ್ಯಕ್ತಿಯೊಬ್ಬ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 188 ವರ್ಷದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಲಾಗಿದ್ದು, ಸದ್ಯ 34.5 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ವಯೋವೃದ್ಧರೊಬ್ಬರು ಇಬ್ಬರ ಸಹಾಯದಿಂದ ನಡೆದುಕೊಂಡು ಬರುತ್ತಿರುವ ವಿಡಿಯೋ ಹಂಚಿಕೊಂಡಿದ್ದು, "ಈ ಭಾರತೀಯ ವ್ಯಕ್ತಿ ಗುಹೆಯಲ್ಲಿ ಪತ್ತೆಯಾಗಿದ್ದು, ಅತನಿಗೆ 188 ವರ್ಷ ವಯಸ್ಸಾಗಿದೆ ಎನ್ನಲಾಗಿದೆ" ಎಂದು ಶೀರ್ಷಿಕೆ ನೀಡಿದ್ದಾರೆ.
24 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಇಬ್ಬರು ಪುರುಷರು ವೃದ್ಧನಿಗೆ ಸಹಾಯ ಮಾಡುತ್ತಿದ್ದಾರೆ. ಬಿಳಿ ಗಡ್ಡವನ್ನು ಹೊಂದಿದ್ದು, ವಾಕಿಂಗ್ ಸ್ಟಿಕ್ ಹಿಡಿದು ನಿಧಾನವಾಗಿ ನಡೆಯುತ್ತಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, ಹಲವು ಮಂದಿ ವೃದ್ಧನ ವಯಸ್ಸಿನ ಬಗ್ಗೆ ಅನುಮಾನ ವ್ಯಕ್ತಪಡಿಸಲು ಆರಂಭಿಸಿದರು. ಫ್ಯಾಕ್ಟ್ ಚೆಕ್ ಮಾಡಿದಾಗ ನಿಜ ಸಂಗತಿ ಏನೆಂದು ಬಯಲಾಗಿದೆ.
🇮🇳 This Indian Man has just been found in a cave.
— Concerned Citizen (@BGatesIsaPyscho) October 3, 2024
It’s alleged he’s 188 years old. Insane. pic.twitter.com/a7DgyFWeY6
ವಿಡಿಯೋ ಅಸಲಿಯತ್ತೇನು?
ವೈರಲ್ ಆಗಿರುವ ವಿಡಿಯೋ ಅಸಲಿಯತ್ತು ಬಯಲಾಗಿದ್ದು, ಇದು ಬೆಂಗಳೂರಿನ ವಿಡಿಯೋ ಅಲ್ಲವೇ ಅಲ್ಲ ಎಂದು ತಿಳಿದು ಬಂದಿದೆ. ವಿಡಿಯೋದಲ್ಲಿರುವ ವ್ಯಕ್ತಿಯನ್ನು ಮಧ್ಯಪ್ರದೇಶದ ಹಿಂದೂ ಸನ್ಯಾಸಿ ಸಿಯಾರಾಮ್ ಬಾಬಾ ಎಂದು ಹಲವು ವರದಿಗಳು ಸೂಚಿಸಿವೆ.
ವಿಡಿಯೋದಲ್ಲಿರುವ ವೃದ್ಧನಿಗೆ 188 ವರ್ಷ ವಯಸ್ಸು ಎನ್ನುವುದು ಸುಳ್ಳು, ಆ ವ್ಯಕ್ತಿಗೆ ಸುಮಾರು 110 ವರ್ಷ ವಯಸ್ಸಾಗಿದೆ ಎಂದು ವರದಿ ತಿಳಿಸಿದೆ. ನವಭಾರತ್ ಟೈಮ್ಸ್ ಜುಲೈ 2024ರಲ್ಲಿ ವರದಿ ಮಾಡಿರುವ ಪ್ರಕಾರ, ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಪ್ರಸಿದ್ಧ ವ್ಯಕ್ತಿಯಾಗಿರುವ ಸಿಯಾರಾಮ್ ಬಾಬಾ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಯನ್ನು ಸ್ಥಳೀಯ ಜನ ಭಕ್ತಿಯಿಂದ ನೋಡುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications