• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮತ ಹಾಕಿ, ಚಿತ್ರ ಕ್ಲಿಕ್ಕಿಸಿ, ಟ್ವೀಟ್ ಮಾಡಿ, ಗಿಫ್ಟ್ ಗೆಲ್ಲಿ

By Prasad
|

ಬೆಂಗಳೂರು, ಏ. 16 : ಸಮಯ ಬಂದಾಗಿದೆ. ನಮ್ಮನ್ನು, ನಾವಿರುವ ಕ್ಷೇತ್ರವನ್ನು, ಇಡೀ ರಾಜ್ಯವನ್ನು, ದೇಶವನ್ನು ಪ್ರತಿನಿಧಿಸುವಂಥ, ನಮ್ಮ ಆಶೋತ್ತರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವಂಥ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಿ ದೆಹಲಿಗೆ ಕಳಿಸುವ ಸಮಯ ಬಂದಿದೆ. ಎಲ್ಲಾ ಕೆಲಸಗಳನ್ನು ಬಿಟ್ಟು ಏ.17 ಗುರುವಾರದಂದು ತಪ್ಪದೆ ಮತ ಹಾಕಿರಿ.

ನಾನೂ ಮತ ಹಾಕಿದೆ ಎಂದು ಎಡಗೈ ಹೆಬ್ಬೆರಳಿಗೆ ಅಂಟಿರುವ ಅಳಿಸಲಾಗದ ಇಂಕನ್ನು ಸ್ನೇಹಿತರಿಗೆ, ಬಂಧುಗಳಿಗೆ ತೋರಿಸುವುದೆಂದರೆ ಹೆಮ್ಮೆಯ ಸಂಗತಿಯಲ್ಲವೆ? ಪ್ರಪ್ರಥಮವಾಗಿ ವೋಟ್ ಮಾಡಿದವರಿಗೆ ಎಷ್ಟು ಖುಷಿಯಿರುತ್ತದೋ, ಹತ್ತನೇ ಬಾರಿ ಮತ ಹಾಕಿದವರಿಗೂ ಅದೇ ಬಗೆಯ ಹೆಮ್ಮೆಯಿರುತ್ತದೆ.

ಸ್ನೇಹಿತರೆ, ಮತ ಹಾಕಿ ಹಾಗೆಯೇ ಮನೆಗೆ ಬರಬೇಡಿ ಅಥವಾ ಕಚೇರಿಗೆ ತೆರಳಬೇಡಿ. ಹೆಬ್ಬೆರಳಿಗೆ ಅಂಟಿದ ಮಸಿಯ ಸಮೇತ ಒಂದು ಸ್ವಚಿತ್ರವನ್ನು ಕ್ಲಿಕ್ಕಿಸಿಕೊಂಡು #1indiavotes ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರಿ. ಜೊತೆಗೆ @oneindia ಹ್ಯಾಂಡಲ್ ಹಾಕುವುದನ್ನು ಮಾತ್ರ ಮರೆಯಬೇಡಿರಿ. [ಅಭ್ಯರ್ಥಿಗಳ ಹಣೆಬರಹ ನೀವೇ ನಿರ್ಧರಿಸಿ]

ಎಲ್ಲ ಚಿತ್ರಗಳನ್ನು ಕ್ರೋಢೀಕರಿಸಿ ಅತ್ಯುತ್ತಮ ಚಿತ್ರವನ್ನು ಆಯ್ಕೆ ಮಾಡಲಾಗುವುದು. ಅಣ್ಣತಮ್ಮಂದಿರೇ, ಅಕ್ಕತಂಗಿಯರೆ, ಆಯ್ಕೆಯಾದ ಚಿತ್ರಕ್ಕೆ ಬಹುಮಾನ ಕೂಡ ಉಂಟು. ಈ ಎಲ್ಲ ಚಿತ್ರಗಳನ್ನು ನಮ್ಮ ವೆಬ್ ಸೈಟಿನಲ್ಲಿ ಅಪ್ಲೋಡ್ ಕೂಡ ಮಾಡಲಾಗುವುದು. ಈ ಸಂಗತಿಯನ್ನು ನಿಮ್ಮ ಸ್ನೇಹಿತರಿಗೂ ತಿಳಿಸುವುದನ್ನು ಮರೆಯಬೇಡಿ.

ಈ ರೀತಿ ಫೋಟೋ ಕ್ಲಿಕ್ಕಿಸಿ ಆನಂದಿಸುವಂಥ ಅವಕಾಶವೇನೋ ಸಿಕ್ಕೇ ಸಿಗುತ್ತದೆ, ಆದರೆ, ಮೇಲಿಂದ ಮೇಲೆ ಮತದಾನ ಮಾಡುವ ಅವಕಾಶ ಮಾತ್ರ ಇನ್ನೈದು ವರ್ಷಗಳ ಕಾಲ ಸಿಗುವುದಿಲ್ಲ. ಹಾಗಾಗಿ, ಮತದಾನ ಮಾಡುವುದು ನಮ್ಮ ಆದ್ಯ ಕರ್ತವ್ಯವೆಂದು ಭಾವಿಸಿ ಸೂಕ್ತ ಅಭ್ಯರ್ಥಿಗೆ ಮತ ಹಾಕಿರಿ, ಭವ್ಯ ಭಾರತದ ನಿರ್ಮಾಣಕ್ಕೆ ನೀವೂ ಕಾರಣರಾಗಿರಿ.

English summary
Dear friends, you all know that Karnataka is going to poll on 17th April, 2014. Vote without fail, take selfies, tweet it with #1indiavotes hash tag and with @oneindia handle. Goodies are waiting for you. Best photos will get prizes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X