ದೆಹಲಿ, ಮುಂಬೈಗೆ 'ವಿಸ್ತಾರ' ವಿಮಾನ ಸೇವೆ ಆರಂಭ
ಬೆಂಗಳೂರು, ಜೂ.16 : ನವದೆಹಲಿ-ಬೆಂಗಳೂರು, ಬೆಂಗಳೂರು-ಮುಂಬೈ ನಡುವೆ ಸಂಪರ್ಕ ಕಲ್ಪಿಸುವ 'ವಿಸ್ತಾರ' ವಿಮಾನಯಾನ ಸೇವೆಗೆ ಮಂಗಳವಾರ ಚಾಲನೆ ಸಿಕ್ಕಿದೆ. ಟಾಟಾ ಸಮೂಹ ಮತ್ತು ಸಿಂಗಪುರ ಏರ್‌ಲೈನ್ಸ್ ಜಂಟಿಯಾಗಿ ವಿಸ್ತಾರ ಸೇವೆಯನ್ನು ಆರಂಭಿಸಿವೆ.
'ವಿಸ್ತಾರ' ವಿಮಾನಯಾನ ಸೇವೆಯ ಮೊದಲ ವಿಮಾನ ನವದೆಹಲಿ-ಬೆಂಗಳೂರು ನಡುವೆ ಮಂಗಳವಾರ ಹಾರಾಟ ಆರಂಭಿಸಿದೆ. ಬೆಳಗ್ಗೆ 6.40ಕ್ಕೆ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನ ಆಗಮಿಸಿದೆ. ಬೆಂಗಳೂರು-ಮುಂಬೈ ನಡುವಿನ ವಿಮಾನ ಬೆಳಗ್ಗೆ 10.10ಕ್ಕೆ ಬೆಂಗಳೂರಿನಿಂದ ಹೊರಟಿದೆ. [ಬೆಂಗಳೂರು-ಕಡಪ ನಡುವೆ ಏರ್ ಪೆಗಾಸಸ್ ಸೇವೆ]

ಈಗಾಗಲೇ 'ವಿಸ್ತಾರ' ವಿಮಾನಯಾನ ಸಂಸ್ಥೆ ದೆಹಲಿ, ಅಹಮದಾಬಾದ್, ಹೈದರಾಬಾದ್, ಲಖನೌ, ಮುಂಬೈ ಮತ್ತು ಪುಣೆ ನಡುವೆ ವಿಮಾನ ಸೇವೆಯನ್ನು ಒದಗಿಸುತ್ತಿದೆ. ಟಾಟಾ ಸಮೂಹ ಮತ್ತು ಸಿಂಗಪುರ ಏರ್‌ಲೈನ್ಸ್ ಜಂಟಿಯಾಗಿ ವಿಸ್ತಾರ ಸೇವೆಯನ್ನು 2015ರ ಜನವರಿಯಲ್ಲಿ ಆರಂಭಿಸಿದ್ದವು. [ಬುಕ್ಕಿಂಗ್ ಮಾಡಲು ವಿಳಾಸ]
Dear Bengaluru, here we come! First flight UK889 from Delhi to Bengaluru has just departed. Super excited to touchdown at @kempegowda_air
— Vistara (@airvistara) June 16, 2015 ಪ್ರತಿದಿನ ದೆಹಲಿ ಮತ್ತು ಮುಂಬೈಗೆ ಎರಡು ವಿಮಾನಗಳು ಹಾರಾಟ ನಡೆಸಲಿವೆ. ಮುಂದಿನ ದಿನಗಳಲ್ಲಿ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ ಎಂದು 'ವಿಸ್ತಾರ'ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೀ ಟೀಕ್ ಯೊ ಮಾಹಿತಿ ನೀಡಿದ್ದಾರೆ.












Click it and Unblock the Notifications