ಫ್ರೇಜರ್ ಟೌನ್ ಕ್ರಿಸ್ಮಸ್ ಕೇಕ್ ಮತ್ತು ಶಾಪಿಂಗ್ ಫೆಸ್ಟಿವಲ್‌ಗೆ ಬನ್ನಿ
ಬೆಂಗಳೂರು ಡಿಸೆಂಬರ್ 25: ಪ್ರತಿವರ್ಷ ಕ್ರಿಸ್‌ಮಸ್ ಹಾಗೂ ನ್ಯೂ ಇಯರ್ ನ್ನು ಕೇಕ್ ಹಾಗೂ ವೈನ್ ಗಳ ಜೊತೆಯಲ್ಲಿ ಆಚರಿಸಲಾಗುತ್ತದೆ. ಈ ಬಾರಿ ಗಿಯರಿ ಬಾಕ್ಸ್ ಈವೆಂಟ್ಸ್ ಮತ್ತು ಎಕ್ಸಿಬಿಷನ್, ನಗರದಲ್ಲಿ ಓಪನ್ ಏರ್ ವೆನ್ಯೂಗಳ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ರೀತಿಯ ಕಾನ್ಸೆಪ್ಟಿನ ಫೆಸ್ಟಿವಲನ್ನು ಆಯೋಜಿಸಿದೆ.
ನಗರದಲ್ಲಿ ಕುಟುಂಬದೊಂದಿಗೆ ಗಜಿಬಿಜಿ ಇಲ್ಲದೆ ರಜಾದಿನಗಳನ್ನು ಕಳೆಯುವುದಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಫ್ರೇಜರ್ ಟೌನ್ ನ ಹೋಲಿ ಘೋಸ್ಟ್ ಚರ್ಚಿನ ಪಕ್ಕದ ಫುಟ್‌ಬಾಲ್ ಮೈದಾನದಲ್ಲಿ ಕ್ರಿಸ್‌ಮಸ್ ಕೇಕ್ ಮತ್ತು ಶಾಪಿಂಗ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿದೆ.
ಜನವರಿ 06 ರ ವರೆಗೆ ನಡೆಯಲಿರುವ ಈ ಫೆಸ್ಟಿವಲ್ ಗೆ ಇಂದು ಚಾಲನೆ ನೀಡಲಾಯಿತು. ಬೆಂಗಳೂರಿನಲ್ಲಿ ಗಜಿ ಬಿಜಿ ಇಲ್ಲದೆ ಕುಟುಂಬದೊಂದಿಗೆ ಕಾಲ ಕಳೆಯಲು ಸಿನೆಮಾ ಹಾಲ್‌ಗಳಿಗೆ ಹೋಗಬೇಕು, ಇಲ್ಲವೆ ಯಾವುದಾದರೂ ಮಾಲ್ ಗಳಿಗೆ ಹೋಗಬೇಕು. ಆದರೆ, ಜನ ಜಂಗುಳಿಯ ಮಧ್ಯೆ ಕೆಲವೇ ವಿಷಯಗಳ ಅನುಭವ ಇಲ್ಲಿ ಸಾಧ್ಯವಾಗುತ್ತದೆ.
ಕ್ರಿಸ್‌ಮಸ್ ಕೇಕ್ ಮತ್ತು ಶಾಪಿಂಗ್ ಫೆಸ್ಟಿವಲ್ ನ ಆಕರ್ಷಣೆಗಳು: ಕುಟುಂಬದೊಂದಿಗೆ ಹರಟುತ್ತಾ ತಮಗೆ ಇಷ್ಟವಾದ ಖಾದ್ಯಗಳನ್ನು ಸವಿಯುತ್ತಾ, ಕ್ರಿಸ್‌ಮಸ್ ನ ಮಹತ್ವವನ್ನು ಸಾರುವ ಅತ್ಯಂತ ನೈಪೂಣ್ಯತೆಯ ಕೇಕ್ ಗಳನ್ನು ನೋಡುವ ಅವಕಾಶ ಇಲ್ಲಿದೆ ಎನ್ನುತ್ತಾರೆ ಕ್ರಿಸ್ಮಸ್ ಕೇಕ್ ಮತ್ತು ಶಾಪಿಂಗ್ ಫೆಸ್ಟಿವಲ್ ಆಯೋಜಕ ಸೈಯದ್.

ಡಿಸೈನರ್ ಕ್ರಿಸ್‌ಮಸ್ ಕೇಕ್ ಶೋ:
ಕೇಕ್ ಇಲ್ಲದೆ ಕ್ರಿಸ್‌ಮಸ್ ಆಚರಣೆ ಊಹಿಸಿಕೊಳ್ಳುವುದು ಸಾಧ್ಯವಿಲ್ಲ. ಕ್ರಿಸ್‌ಮಸ್ ನ ಮಹತ್ವವನ್ನು ಸಾರುವ ಅತ್ಯಂತ ನೈಪೂಣ್ಯತೆಯ ಕೇಕ್ ಗಳ ಪ್ರದರ್ಶನವನ್ನು ನಗರದ ಫ್ರೇಸರ್ ಟೌನನ ಹೋಲಿ ಘೋಸ್ಟ್ ಚರ್ಚ್ ನ ಪಕ್ಕದ ಮೈದಾನದಲ್ಲಿ ಆಯೋಜಿಸಲಾಗಿದೆ. ದೊಡ್ಡ ದೊಡ್ಡ ಕೇಕ್‌ನ ಕಲಾಕೃತಿಗಳನ್ನು ರಚಿಸುವುದು ಅಷ್ಟು ಕಷ್ಟವಾದ ಕೆಲಸವಲ್ಲ. ಆದರೆ, ಸೂಕ್ಷ್ಮ ಸೂಕ್ಷ್ಮ ಅಂಶಗಳನ್ನೂ ಹಿಡಿದಿಡುವ ಕೆಲಸವನ್ನು ಜಸ್ಟ್ ಬೇಕ್‌ನ ಕಲಾವಿದರು ಮಾಡಿದ್ದಾರೆ.

8 ಅಡಿ ಎತ್ತರದ ಕೇಕ್ ಕ್ರಿಸ್‌ಮಸ್ ಟ್ರೀ
8 ಅಡಿ ಎತ್ತರದ ಕೇಕ್ ಕ್ರಿಸ್‌ಮಸ್ ಟ್ರೀ ಹಾಗೂ ಸಾಂತಾ ವಿಲೇಜ್‌ನ ಕಲಾಕೃತಿ ಹಾಗೂ ಜಂಗಲ್ ಥೀಮ್ ಕೇಕ್ ಎಲ್ಲರ ಗಮನ ಸೇಳೆಯುತವಂತಿದೆ. ಸಾಂತಾ ವಿಲೇಜ್ ನಲ್ಲಿ ಕೇಕ್ ನಿಂದ ನಿರ್ಮಿಸಲಿರುವ ಸಣ್ಣ ಸಣ್ಣ ಸಾಂತಾ ಹಾಗೂ ಇನ್ನಿತರೆ ಕಲಾಕೃತಿಗಳು ಕಲಾವಿದರ ಸೂಕ್ಷ್ಮ ಕೆಲಸಕ್ಕೆ ಹಿಡಿದ ಕೈಗನ್ನಡಿಯಂತಿವೆ. ಜಂಗಲ್ ಥೀಮ್ ನಲ್ಲಿ ಪ್ರಾಣಿಗಳ ಜೀವಂತ ಮೂರ್ತಿಗಳನ್ನು ನಿರ್ಮಿಸಿದಂತಿದೆ.

ಫುಡ್ ಫೆಸ್ಟಿವಲ್
ಫುಡ್ ಫೆಸ್ಟಿವಲ್: 50 ಕ್ಕೂ ಹೆಚ್ಚು ಪುಡ್ ಸ್ಟಾಲ್ ಗಳನ್ನು ಇಲ್ಲಿ ನಿರ್ಮಿಸಲಾಗಿದೆ. ದೇಶದ ವಿವಿಧ ಭಾಗಗಳ ವೆಜ್ ಹಾಗೂ ನಾನ್ ವೆಜ್ ನ ಖಾದ್ಯಗಳನ್ನು ಇಲ್ಲಿ ಸವಿಯಬಹುದಾಗಿದೆ. ಶೀಖ್ ಕಬಾಬ್, ರಾಜಸ್ಥಾನಿ ಖಾದ್ಯಗಳು, ಪತ್ತರ್ ಕ ಘೋಷ್, ನಾರ್ತ ಇಂಡಿಯನ, ಸೌತ್ ಇಂಡಿಯನ್ ಖಾದ್ಯಗಳು ಹೀಗೆ ಹಲವಾರು ಬಗೆ ಬಗೆಯ ಖಾದ್ಯಗಳ ಸವಿಯನ್ನು ಅನುಭವಿಸಬಹುದಾಗಿದೆ. ಬಾಯಲ್ಲಿ ನೀರುರಿಸುವ ಪಾನೀಪುರಿ ಸೇರಿದಂತೆ ಹಲವಾರು ಬಗೆಯ ಚಾಟ್ಸ್ ಗಳೂ ಇಲ್ಲಿರಲಿವೆ.

ಶಾಪಿಂಗ್ ಫೆಸ್ಟಿವಲ್
ಶಾಪಿಂಗ್ ಫೆಸ್ಟಿವಲ್: ಈ ಫೆಸ್ಟಿವಲ್ ನಲ್ಲಿ ಶಾಪಿಂಗಿಗೂ ಅವಕಾಶ ಕಲ್ಪಿಸಲಾಗಿದೆ. 50 ಕ್ಕೂ ಹೆಚ್ಚು ಮಳಿಗೆಗಳಲ್ಲಿ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಟ ಮಾಡಲಿದ್ದಾರೆ. ಈ ಮಳಿಗೆಗಳಲ್ಲಿ ಡಿಸೈನರ್ ಗಾರ್ಮೆಂಟ್ಸ್ ನಿಂದ ಲಕ್ಸೂರಿ ಮತ್ತು ಡೆಕೋರ್ ಎಲಿಮೆಂಟ್ಸ್ ಗಳನ್ನು ಕೊಂಡುಕೊಳ್ಳಬಹುದಾಗಿದೆ.

ಅಮ್ಯೂಸ್ ಮೆಂಟ್ ಮತ್ತು ಫನ್ ಝೋನ್
ಅಮ್ಯೂಸ್ ಮೆಂಟ್ ಮತ್ತು ಫನ್ ಝೋನ್: ಇಷ್ಟೆಲ್ಲಾ ಆಕರ್ಷಣೆಗಳ ಮಧ್ಯೆ ಮಕ್ಕಳನ್ನು ಎಂಗೇಜ್ ಮಾಡಲು ಅಮ್ಯೂಸ್ ಮೆಂಟ್ ಪಾರ್ಕ ಮತ್ತು ಫನ್ ಜೋನ್ ಕೂಡಾ ನಿರ್ಮಿಸಲಾಗಿದೆ.
ಲೈವ್ ಇನ್ ಕಾನ್ಸರ್ಟ್: ಈ ಫೆಸ್ಟಿಲ್‌ನ ಇನ್ನೊಂದು ಆಕರ್ಷಣೆ ವಿವಿಧ ಕಲಾಕಾರಿಂದ ಲೈವ್ ಇನ್ ಕಾನ್ಸರ್ಟ್. ಪ್ರತಿ ದಿನ ವಿವಿಧ ಕಲಾವಿದರು ಲೈವ್ ಪರ್ಪಾರಮೆನ್ಸ್ ನೀಡಲಿದ್ದಾರೆ.












Click it and Unblock the Notifications