ದೃಷ್ಟಿ ತೆಗೆಯುವ ಸೋಗಿನಲ್ಲಿ ಮಂಗಳಮುಖಿಯರು Just Bakeನಲ್ಲಿ ಮಾಡಿದ್ದೇನು ?

ಬೆಂಗಳೂರು, ಏ. 03: ಮಂಗಳಮುಖಿಯರು ದೃಷ್ಟಿ ತೆಗೆದರೆ ಒಳ್ಳೆಯ ವ್ಯಾಪಾರ ಆಗುತ್ತೆ ಅಂತೆ ಅಂಗಡಿ ಮಾಲೀಕರು ಅವರನ್ನು ಕರೆಸಿ ಪೂಜೆ ಮಾಡಿಸುತ್ತಾರೆ. ಮಂಗಳಮುಖಿಯರ ಕೈಯಲ್ಲಿ ದೃಷ್ಟಿ ತೆಗೆಸುವುದು ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿಬಿಟ್ಟಿದೆ. ದೃಷ್ಟಿ ತೆಗೆಯುವ ಸೋಗಿನಲ್ಲಿ ಜಸ್ಟ್ ಬೇಕ್‌ಗೆ ಎಂಟ್ರಿ ಕೊಟ್ಟ ಮಂಗಳಮುಖಿಯರ ಗ್ಯಾಂಗ್ ಮಾಡಿರುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.!

ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಟ್ಟಿರುವ ಉಳ್ಳಾಲದಲ್ಲಿ ಜಸ್ಟ್ ಬೇಕ್ ಮಳಿಗೆ ತೆಗೆಯಲಾಗಿದೆ. ಮಾ. 31 ರಂದು ನಾಲ್ವರು ಮಂಗಳಮುಖಿಯರು ಭಿಕ್ಷೆ ಬೇಡುತ್ತಿದ್ದರು. ಜಸ್ಟ್ ಬೇಕ್ ಮಳಿಗೆಗೆ ಬಂದಾಗ ದೃಷ್ಟಿ ತೆಗೆಯುವ ಸಂಬಂಧ ನಾಲ್ವರು ಎಂಟ್ರಿ ಕೊಟ್ಟಿದ್ದಾರೆ. ನಿಂಬೆ ಹಣ್ಣಿಂದ ಮೂರು ಕಡೆ ದೃಷ್ಟಿ ತೆಗೆದ ಮಂಗಳಮುಖಿಯರು ನಂತರ ಕ್ಯಾಶ್ ಕೌಂಟರ್ ಮೇಲೆ ಕಣ್ಣು ಹಾಕಿದ್ದಾರೆ. ಕ್ಯಾಶ್ ಕೌಂಟರ್‌ಗೆ ದೃಷ್ಟಿ ತೆಗೆದಂತೆ ನಟಿಸಿ ಕೌಂಟರ್‌ನಲ್ಲಿದ್ದ ಐದು ಸಾವಿರ ರೂ. ನಗದು ಎಗರಿಸಿದ್ದಾರೆ. ಜಸ್ಟ್ ಬೇಕ್ ಸಿಬ್ಬಂದಿ ಪಕ್ಕದಲ್ಲಿದ್ದರೂ ಸ್ವಲ್ಪವೂ ಅನುಮಾನ ಬಂದಿಲ್ಲ. ಕೇವಲ ಹತ್ತು ರೂಪಾಯಿ ಮಾತ್ರ ತೆಗೆದುಕೊಂಡು ಹೋದಂತೆ ಬಿಂಬಿಸಿ ಅಲ್ಲಿಂದ ತೆರಳಿದ್ದಾರೆ.

ವಾಸ್ತವದಲ್ಲಿ ಕ್ಯಾಶ್ ಕೌಂಟರ್‌ಗೆ ನಿಂಬೆ ಹಣ್ಣು ದೃಷ್ಟಿ ತೆಗೆಯುವ ಸೋಗಿನಲ್ಲಿ ಅಲ್ಲಿದ್ದ ಐದು ಸಾವಿರ ರೂ. ನಗದು ಹಣ ದೋಚಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಣ ಕಳುವು ಆಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ಜಸ್ಟ್ ಬೇಕ್ ಮಳಿಗೆ ಮಾಲೀಕ ಲಕ್ಷ್ಮೀಪತಿಗೌಡ ಜ್ಞಾನ ಭಾರತಿ ಪೊಲೀಸ್ ಠಾಣೆಗೆ ಸಿಸಿಟಿವಿ ಸಮೇತ ದೂರು ನೀಡಿದ್ದಾರೆ. ಮಂಗಳಮುಖಿ ಸಿಸಿಟಿವಿ ಇರುವ ವಿಚಾರ ತಿಳಿದು ಮುಖಕ್ಕೆ ಸೆರಗು ಹಾಕಿಕೊಂಡು ಕ್ಯಾಶ್ ಕೌಂಟರ್‌ಗೆ ಕೈ ಹಾಕಿ ಹಣ ಪಡೆದು ಅಲ್ಲಿಂದ ಕಾಲ್ಕಿತ್ತಿರುವ ದೃಶ್ಯ ಸೆರೆಯಾಗಿದೆ. ಸಾಮಾನ್ಯವಾಗಿ ಮಂಗಳ ಮುಖಿಯರ ಕೈಯಲ್ಲಿ ದೃಷ್ಟಿ ತೆಗೆಸುವರು ಈ ವಿಡಿಯೋ ನೋಡಿ ಶಾಕ್ ಆಗಿದ್ದಾರೆ.

Viral Video: Transgenders Looted Just Bake Shop in the Name of Pooja

Recommended Video

      ಕರಣ್ ನಾಯರ್ ಚಹಲ್ ಗೆ ಮಾಡಿದ ಅನ್ಯಾಯ !!

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+