Bengaluru: ಬೆಂಗಳೂರು - ಹೈದರಾಬಾದ್ ಅಭಿವೃದ್ಧಿಗೆ ಚಂದ್ರಬಾಬು ಕಾರಣ, ವೈರಲ್ ವಿಡಿಯೋ
ಬೆಂಗಳೂರು: ಬೆಂಗಳೂರು ಸಿಲಿಕಾನ್ ಸಿಟಿ ಎನ್ನುವ ಖ್ಯಾತಿ ಗಳಿಸಿದೆ. ವಿಶ್ವದಾದ್ಯಂತ ಜನ ಬೆಂಗಳೂರನ್ನು ಬೆರಗುಗಣ್ಣಿನಿಂದ ನೋಡುತ್ತಾರೆ. ಬೆಂಗಳೂರಿನ ಅಭಿವೃದ್ಧಿಯ ಹಿಂದೆ ಕರ್ನಾಟಕದಲ್ಲಿ ಆಳ್ವಿಕೆ ಮಾಡಿದ ರಾಜಮಹಾರಾಜರ ಕೊಡುಗೆ ಇದೆ. ಅದಾದ ನಂತರ ಕರ್ನಾಟಕದ ರಾಜಕಾರಣಿಗಳ ಕೆಲವೊಂದು ನಿರ್ಧಾರಗಳು ಹಾಗೂ ಎಲ್ಲದಕ್ಕಿಂತಲೂ ಮುಖ್ಯವಾಗಿ ಕನ್ನಡಿಗರ ಪರಿಶ್ರಮವಿದೆ.
ಬೆಂಗಳೂರು ಐಟಿ ರಾಜಧಾನಿ ಆಗುವುದಕ್ಕೆ ದೇಶದಲ್ಲೇ ಮೊದಲು ನಾವು ಐಟಿ ನೀತಿ - ಕಾನೂನುಗಳನ್ನು ರೂಪಿಸಿಕೊಂಡಿದ್ದೂ ಸಹ ಪ್ರಮುಖ ಕಾರಣ. ಆದರೆ ಬೆಂಗಳೂರು ಐಟಿ ರಾಜಧಾನಿಯಾಗಿ, ಐಟಿ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆಯುವುದಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಂತಹ ನಾಯಕರು ಕಾರಣ ಎಂದು ಏಕಪಕ್ಷೀಯವಾಗಿ ಕೇಂದ್ರ ಸಚಿವರೊಬ್ಬರು ಹೇಳಿರುವ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಕನ್ನಡಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರು ಐಟಿ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆಯುವುದಕ್ಕೆ, ಐಟಿ ಕ್ರಾಂತಿಗೆ ದಿವಂಗತ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ದೊಡ್ಡ ಪಾತ್ರವಿದೆ. ಬೆಂಗಳೂರು ಮತ್ತು ಹೈದರಾಬಾದ್ ಇಂದು ದೇಶದಲ್ಲಿ ತಂತ್ರಜ್ಞಾನ ರಾಜಧಾನಿಗಳಾಗಿವೆ, ಅಂದರೆ ಇದಕ್ಕೆ ಚಂದ್ರಬಾಬು ಅವರಂತಹ ದೂರದೃಷ್ಟಿಯ ನಾಯಕರು ಕಾರಣ. ಆಂಧ್ರಪ್ರದೇಶವು ವಿಶ್ವ ದರ್ಜೆಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ.
ಇದೀಗ ಚಂದ್ರಬಾಬು ನಾಯ್ಡು ಅವರೊಂದಿಗೆ ಇದೀಗ ಅವರ ಪುತ್ರ ನಾರಾ ಲೋಕೇಶ್ ಅವರು ಸಹ ಇದ್ದಾರೆ ಎಂದು ಕೇಂದ್ರ ಸಚಿವ ಚಂದ್ರಶೇಖರ್ ಪೆಮ್ಮಸಾನಿ ಅವರು ಹೇಳಿದ್ದಾರೆ. ಪೆಮ್ಮಸಾನಿ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರು ಅಭಿವೃದ್ಧಿಗೆ ಚಂದ್ರಬಾಬು ನಾಯ್ಡು ಅವರು ಕಾರಣ ಎನ್ನುವುದಕ್ಕೆ ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ ?
ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ಚಂದ್ರಶೇಖರ್ ಪೆಮ್ಮಸಾನಿ ಅವರು, ಬೆಂಗಳೂರು ಹಾಗೂ ಹೈದರಾಬಾದ್ ಇಂದು ಇಷ್ಟೊಂದು ಅಭಿವೃದ್ಧಿ ಆಗಿದೆ ಎಂದರೆ ಅದಕ್ಕೆ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅವರಂತಹ ಪ್ರಭಾವಿ ನಾಯಕರು ಕಾರಣ. ಬೆಂಗಳೂರು ಹಾಗೂ ಹೈದರಾಬಾದ್ ನಗರಗಳು ಮೊದಲೇ ಐಟಿ ಕ್ಷೇತ್ರಕ್ಕೆ ಪೂರಕವಾಗಿ ಇರಲಿಲ್ಲ. ಇದನ್ನು ನಾಯಕರ ಚಿಂತನೆಯಿಂದ ಬದಲಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಿಗರು ಈ ವೈರಲ್ ವಿಡಿಯೋಗೆ ಹೇಳಿದ್ದೇನು
ಬೆಂಗಳೂರಿನ ಹೆಸರು ತೆಗೆದುಕೊಂಡಿರುವುದು ಕನ್ನಡಿಗರ ಆಕ್ಷೇಪಕ್ಕೆ ಕಾರಣವಾಗಿದೆ. ರವಿಕೀರ್ತಿ ಗೌಡ ಎನ್ನುವವರು, "ಸೋಮನಹಳ್ಳಿ ಮಲ್ಲಯ್ಯ ಕೃಷ್ಣ" ಎಂಬ ಹೆಸರನ್ನು ಎಂದಾದರೂ ಕೇಳಿದ್ದೀರ ಎಂದು ವ್ಯಂಗ್ಯವಾಡಿದ್ದಾರೆ. ಗೌತಮ್ ಎನ್ನುವವರು, ಬೆಂಗಳೂರು ಮಾತ್ರನಾ ಇಲ್ಲ ಅಮೆರಿಕದ ಸಿಲಿಕಾನ್ ವ್ಯಾಲಿನೂ ಅಭಿವೃದ್ಧಿ ಮಾಡಿದ್ದ, ಕೆಟ್ಟ ಬುದ್ಧಿ ಎಂದು ಟೀಕಿಸಿದ್ದಾರೆ.
Bengaluru matra na athava America silicon valley nu neeve development madidda
— Goutham R (@Goutham29R) February 7, 2026
Worst buddhi https://t.co/lIuLtTDZbm
ತೆಲುಗು ಭಾಷಿಕರಿಂದಲೂ ವ್ಯಂಗ್ಯ
ಇನ್ನು ಈ ವೈರಲ್ ವಿಡಿಯೋಗೆ ಕೆಲವು ತೆಲುಗು ಭಾಷಿಕರು ಸಹ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿಗೂ - ಚಂದ್ರಬಾಬು ನಾಯ್ಡು ಅವರಿಗೂ ಏನು ಸಂಬಂಧ ಈ ರೀತಿ ಹೋಲಿಕೆ ಮಾಡುವುದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ. ಬೆಂಗಳೂರು ಐಟಿಗೆ ಚಂದ್ರಬಾಬು ನಾಯ್ಡು ಅವರು ಹೇಗೆ ಕಾರಣ, ಬೆಂಗಳೂರಲ್ಲಿ ಬೆಣ್ಣೆ ದೋಸೆ ಪರಿಚಯಿಸಿದರಾ ಎಂದು ತೆಲುಗು ನೆಟ್ಟಿಗರು ಕೇಳಿದ್ದಾರೆ.












Click it and Unblock the Notifications