Video Viral: ಚಲಿಸುವ ರೈಲಿನ ಅಡಿಯಲ್ಲಿ ಮಲಗಿ ಮಗು ರಕ್ಷಿಸಿದ ಯುವಕ: ಶಹಬ್ಬಾಸ್ ಎಂದ ನೆಟ್ಟಿಗರು

Video Viral: ಭಾರತದಲ್ಲಿ ರೈಲು ಸಂಚಾರದ ಮೇಲೆ ಅವಲಂಬನೆ ಹೆಚ್ಚಿದೆ. ನಿತ್ಯ ಕೋಟ್ಯಾಂತರ ಜನರು ಸಂಚಾರ ಮಾಡುತ್ತಾರೆ. ಹೀಗೆ ಓಡಾಡುವಾಗ ಒಂದಿಲ್ಲೊಂದು ಅವಘಡಗಳು, ದುರಂತಗಳು ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಪವಾಡ ಸದೃಶ್ಯದಂತೆ ಸಾವಿನ ದವಡೆಯಿಂದ ಪ್ರಯಾಣಿಕರು ಪಾರಾಗಿದ್ದು ಇದೆ. ಇಂಥದ್ದೆ ಒಂದು ಘಟನೆಯಲ್ಲಿ ಮಗು ಕಾಪಾಡಲು ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿ ಸಾಹಸ ಮೆರೆದ ಯುವಕನಿಗೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ. ಆತನ ಧೈರ್ಯವನ್ನು ಕೊಂಡಿದ್ದಾರೆ.

ರೈಲು ನಿಲ್ದಾಣದಲ್ಲಿ ನಿಂತಿದ್ದ ಮಗು ಅಚಾನಕ್ಕಾಗಿ ಪ್ಲಾಟ್‌ಫಾರ್ಮ್‌ನಿಂದ ರೈಲು ಹಳಿಗೆ ಬಿದ್ದಿದೆ. ಅಲ್ಲಿಯೇ ಇದ್ದ ಈ ಯುವಕ ರೈಲು ಬರುವುದನ್ನು ನೋಡಿಯೂ ಸಹ ಹಳಿಗೆ ಜಿಗಿದು ಮಗು ರಕ್ಷಿಸಿದ್ದಾನೆ. ಮಗುವಿನೊಂದಿಗೆ ಮತ್ತೆ ಪ್ಲಾಟ್‌ಫಾರ್ಮ್‌ ಹತ್ತಲು, ಬೇರೆಡೆ ಸರಿದುಕೊಳ್ಳುವಷ್ಟು ಸಮಯ ಇರಲಿಲ್ಲ. ಹೀಗಾಗಿ ಕಾರಣ ಮಗುವನ್ನು ತಬ್ಬಿ ರೈಲು ಬರುತ್ತಿರುವ ಹಳೆ ಮೇಲೆ ಮಲಗಿದ್ದಾನೆ. ಆಗ ರೈಲು ಅವರ ಮೇಲೆಯೇ ಸಾಗಿದೆ. ಅದೃಷ್ಟವಶಾತ್ ಮಗುವಿಗಾಗಲಿ, ಯುವಕನಿಗಾಗಿ ಜೀವಕ್ಕೆ ಹಾನಿ ಆಗಿಲ್ಲ ಎಂದು ವರದಿ ಆಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Viral Video

ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಸ್ಪಷ್ಟ ಮಾಹಿತಿ ಇಲ್ಲ. ಮೇಲ್ನೋಟಕ್ಕೆ ಉತ್ತರ ಭಾರತದ ಕಡೆಗಿನ ರೈಲು ನಿಲ್ದಾಣದಲ್ಲಿ ನಡೆದಂತೆ ಕಂಡು ಬಂದಿದೆ. ಯುವಕನಿಂದಾಗಿ ಮಗು ಬುದಕುಳಿದಿದೆ. ಮಗು ಹಳಿಗೆ ಬಿದ್ದಾಗ ಅರೇ ಕ್ಷಣದಲ್ಲಿ ಏನು ಮಾಡಬೇಕೆಂದು ತಾಯಿಗೆ ತಿಳಿದಿಲ್ಲ. ಅವರು ಗಾಬರಿಯಾಗಿದ್ದು, ಆತಂಕದಿಂದ ಮಗುವಿನತ್ತ ನೋಡಿದ್ದಾರೆ. ಕ್ಷಣ ಮಾತ್ರದಲ್ಲಿ ಯುವಕ ಹಳಿಗೆ ಜಿಗಿದು ಮಗು ರಕ್ಷಿಸುವಲ್ಲಿ ಸಮಯ ಪ್ರಜ್ಞೆ ಮೆರೆದಿದ್ದಾನೆ.

E-Swathu: ಇ-ಸ್ವತ್ತು ತಾಂತ್ರಿಕ ಸಮಸ್ಯೆಗಳಿಗೆ ಮುಕ್ತಿ, ಸೇವೆಗೆ ವೇಗ; 1.40 ಲಕ್ಷ ಅರ್ಜಿಗಳ ವಿಲೇವಾರಿ
E-Swathu: ಇ-ಸ್ವತ್ತು ತಾಂತ್ರಿಕ ಸಮಸ್ಯೆಗಳಿಗೆ ಮುಕ್ತಿ, ಸೇವೆಗೆ ವೇಗ; 1.40 ಲಕ್ಷ ಅರ್ಜಿಗಳ ವಿಲೇವಾರಿ

ನಿಲ್ದಾಣ ಪ್ಲಾಟ್‌ಫಾರ್ಮ್‌ ಅಂಚು ಮತ್ತು ರೈಲು ಹಾದು ಹೋಗುವ ಹಳಿಗೂ ಮಧ್ಯ ಕೊಂಚ ಸ್ಥಳವಿರುತ್ತದೆ. ಆ ಭಾಗದಲ್ಲಿ ಮಗು, ಯುವಕರು ಮಲಗಿ ಜೀವ ರಕ್ಷಿಸಿಕೊಂಡಿದ್ದಾರೆ. ನೋಡಲು ಸಿನಿಮಾ ಶೈಲಿಯಂತೆ ಕಂಡು ಬಂದರೂ ನಿಜ ಜೀವನದಲ್ಲಿ ಇಂತಹ ಘಟನೆಗಳು, ಈ ರೀತಿ ಬದುಕುಳಿಯುವುದು ಅಪರೂಪ ಎನ್ನಬಹುದು.

ಯುವಕನ ಸಾಹಸ ಕೊಂಡಾಡಿದ ನೆಟ್ಟಿಗರು

ವೈರಲ್ ವಿಡಿಯೋ ನೋಡಿದ ನೆಟ್ಟಿಗರು 'ಮಾನವೀಯತೆ ಇನ್ನೂ ಜೀವಂತವಾಗಿದೆ' ಎಂದು ಹೇಳಿದ್ದಾರೆ. ಮತ್ತೊಬ್ಬರು 'ಅಪರಿಚಿತ ವ್ಯಕ್ತಿಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಅವರನ್ನು ಉಳಿಸಲು ಅಪಾರ ಧೈರ್ಯ ಬೇಕು' ಈ ಸಹೋದರರು ಅಂಥಹ ಧೈರ್ಯ ಪ್ರದರ್ಶಿಸುವ ಜೊತೆಗೆ ಮಾನವೀಯತೆ ಮೆರೆದಿದ್ದಾನೆ' ಎಂದಿದ್ದಾರೆ. 'ಮಾನವೀಯತೆಗೆ ಈ ವ್ಯಕ್ತಿಯೇ ಮಾದರಿ' ಎಂದು ಮತ್ತೊಬ್ಬರು ಯುವಕನ ಶೌರ್ಯ ಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+