Bribe: ಲಂಚ ಪಡೆಯಲು ಟ್ರಾಫಿಕ್‌ ಪೊಲೀಸರ ಖತರ್ನಾಕ್‌ ಪ್ಲ್ಯಾನ್‌, ವಿಡಿಯೋ ವೈರಲ್‌

ಜನರನ್ನು ಕಾಯಬೇಕಾದ ಕೆಲ ಪೊಲೀಸರು ಮಾಡುವ ಭ್ರಷ್ಟಾಚಾರದ ಕಳಂಕ ಇಂದು ಇಡೀ ಇಲಾಖೆಯನ್ನು ತಲೆತಗ್ಗಿಸುವಂತಿವೆ. ಅದರಲ್ಲೂ ಪೊಲೀಸ್‌ ಅಂದ್ರೆ ಲಂಚ, ಲಂಚ ಅಂದ್ರೆ ಪೊಲೀಸ್‌ ಅಂತಾರೆ ನೊಂದಿರುವ ಜನರು. ಈಗ ಸೋಶಿಯಲ್‌ ಮೀಡಿಯಾ ಬಂದಾಗಿನಿಂದಂತೂ ಹಲವು ಪೊಲೀಸರ ಮುಖವಾಡ ಕಳಚಿ ಬೀಳುತ್ತಿದೆ. ಇನ್ನು ಬೆಂಗಳೂರಿನ ಟ್ರಾಫಿಕ್‌ ಪೊಲೀಸರಿಬ್ಬರು ಮಾಡಿರುವ ಘನಂದಾರಿ ಕೆಲಸಕ್ಕೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.

ಟ್ರಾಫಿಕ್‌ ಪೊಲೀಸರು ಹೆಚ್ಚಾಗಿ ವಾಹನ ಮಾಲೀಕರಿಂದ ಲೂಟಿ ಮಾಡುತ್ತಾರೆ ಎನ್ನುವ ಆರೋಪ ಮೊದಲಿನಿಂದಲೂ ಇದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದೇವೆ ಎಂದು ಎಷ್ಟೇ ಸಮರ್ಥಿಸಿಕೊಂಡರೂ ಆಗಾಗ ಲಂಚಬಾಕತನದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ. ಟ್ರಾಫಿಕ್‌ ಪೊಲೀಸರಿಗೆ ಹೆದರಿ ಕೆಲವರು ರಸ್ತೆಗೆ ಗಾಡಿ ತೆಗೆಯಲು ಕೂಡ ಹಿಂಜರಿಯುವ ಪರಿಸ್ಥಿತಿ ಇದೆ.

Viral Video Bengaluru Traffic Police Allegedly Using Tea Stall QR Codes For Bribes

ಟ್ರಾಫಿಕ್‌ ಫೈನ್‌ ಕಟ್ಟಲು ಆಧುನಿಕ ತಂತ್ರಜ್ಞಾನಗಳು ಬಳಕೆಯಲ್ಲಿದ್ದರೂ, ಪೊಲೀಸರು ಲಂಚ ಪಡೆಯಲು ಅದೇ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸಾಮಾನ್ಯವಾಗಿ ಈಗಿನ ಟ್ರಾಫಿಕ್‌ ನಿಯಮ ಉಲ್ಲಂಘನೆಗೆ ದಂಡದ ಪ್ರಮಾಣ ಕಡಿಮೆಯೇನಿಲ್ಲ. ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಟ್ರಾಫಿಕ್‌ ಪೊಲೀಸರು ಒಂದಷ್ಟು ಜೇಬಿಗೆ ಇಟ್ಟರೆ ಗಾಡಿ ಬಿಟ್ಟುಕಳಿಸುವ ಟ್ರೆಂಡ್‌ ಸೆಟ್‌ ಮಾಡಿದ್ದಾರೆ. ಈ ಮೂಲಕ ಇಲಾಖೆಗೆ ಹಾಗೂ ತಮ್ಮ ವೃತ್ತಿಗೆ ದ್ರೋಹ ಬಗೆಯುವವರೂ ಇದ್ದಾರೆ ಎಂದು ಹಲವರು ಸೋಶಿಯಲ್‌ ಮೀಡಿಯಾಗಳಲ್ಲಿ ನೋವು ತೋಡಿಕೊಳ್ಳುತ್ತಾರೆ.

ಸದ್ಯ ಇದೇ ರೀತಿಯ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇಲ್ಲಿವರೆಗೆ ವಾಹನ ಸವಾರರನ್ನು ಪಕ್ಕಕ್ಕೆ ಕರೆಸಿಕೊಂಡು ಲಂಚದ ಹಣ ಪಡೆಯುವುದನ್ನೇ ಬಹುತೇಕ ಕಡೆಗಳಲ್ಲಿ ನೋಡಿರುತ್ತೀರಿ. ಬೆಂಗಳೂರಲ್ಲಿ ನಡೆದಿದೆ ಎನ್ನಲಾದ ವಿಡಿಯೋವೊಂದರಲ್ಲಿ ಪೊಲೀಸರು ಖತರ್ನಾಕ್‌ ಐಡಿಯಾ ಬಳಸಿ, ಲಂಚ ಪಡೆಯುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಇಷ್ಟಕ್ಕೂ ಆಗಿದ್ದೇನೆಂದರೆ, ವಿಡಿಯೋವೊಂದರಲ್ಲಿ ಇಬ್ಬರು ಪೊಲೀಸರು ಟೀ ಅಂಗಡಿಯವನ ಬಳಿ ಬಂದು ವ್ಯವಹಾರದ ಬಗ್ಗೆ ಮಾತನಾಡುತ್ತಿದ್ದಾರೆ. ಹಣಕಾಸಿನ ಬಗ್ಗೆಯೇ ಚರ್ಚೆ ನಡೆಯುತ್ತಿದ್ದರೂ, ಟ್ರಾಫಿಕ್‌ ಪೊಲೀಸರಿಗೂ ಟೀ ಅಂಗಡಿಗೂ ಏನು ಸಂಬಂಧ? ಎಂದು ಅನುಮಾನಗೊಂಡ ಸಾರ್ವಜನಿಕರೊಬ್ಬರು ವಿಡಿಯೋ ರೆಕಾರ್ಡ್‌ ಮಾಡಿಕೊಂಡು ಟೀ ಅಂಗಡಿಯವನ ಬಳಿ ಬಾಯಿ ಬಿಡಿಸಿದ್ದಾರೆ. ಆತ ಹೇಳಿದ ವಿಚಾರ ಕೇಳಿ ಶಾಕ್‌ ಕೂಡ ಆಗಿದ್ದಾನೆ.

Viral Video Bengaluru Traffic Police Allegedly Using Tea Stall QR Codes For Bribes

ಟ್ರಾಫಿಕ್‌ ಪೊಲೀಸರು ಲಂಚದ ಹಣ ಪಡೆಯಲು ಟೀ ಅಂಗಡಿಯವನ ಕ್ಯೂಆರ್‌ ಕೋಡ್‌ ಸ್ಕ್ಯಾನರ್‌ ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಅಂದರೆ ವಾಹನ ಸವಾರರು ನಿಯಮ ಉಲ್ಲಂಘನೆಯಲ್ಲಿ ಸಿಕ್ಕಿಬಿದ್ದಾಗ ಅವರಿಗೆ ದುಬಾರಿ ದಂಡ ಪಾವತಿಸುವುದು ಕಷ್ಟವಾಗುತ್ತೆ. ಆಗ ಅದರಲ್ಲಿ ಕಡಿಮೆ ಮೊತ್ತ ಪಾವತಿಸಿ ಅಲ್ಲಿಂದ ಸಲೀಸಾಗಿ ಹೋಗುವ ಆಯ್ಕೆ ನೀಡಿದ್ದಾರೆ. ಅದರಂತೆ ಟೀ ಅಂಗಡಿಗೆ ಹೋಗಿ ಹಣ ಸ್ಕ್ಯಾನ್‌ ಮಾಡಿ ಹೊರಡು ಎಂದು ಪೊಲೀಸರು ಹೊಸ ತಂತ್ರ ಮಾಡಿಕೊಂಡಿದ್ದಾರೆ ಎಂದು ಟೀ ಅಂಗಡಿಯವನು ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾನೆ.

ಸಾಮಾನ್ಯವಾಗಿ ಸವಾರರು ಸಾವಿರಾರು ರೂಪಾಯಿ ಮೊತ್ತದ ದಂಡ ವಿಧಿಸುತ್ತಾರೆ. ಅಷ್ಟೆಲ್ಲ ಹಣ ಕೊಡಲು ಒದ್ದಾಡುವವರು ನೂರಾರು ರೂಪಾಯಿಗಳನ್ನು ಪೊಲೀಸರಿಗೆ ಕೊಟ್ಟು ಎಸ್ಕೇಪ್‌ ಆಗುತ್ತಾರೆ. ಪೊಲೀಸರ ಸೂಚನೆ ಮೇರೆಗೆ ಅಂಗಡಿಯ ಕ್ಯೂಆರ್‌ ಕೋಡ್‌ಗೆ ಸ್ಕ್ಯಾನ್‌ ಮಾಡಿ ಹಣ ಪಾವತಿಸಿರುತ್ತಾರೆ. ಬಳಿಕ ಪೊಲೀಸರು ಬಂದು ಎಷ್ಟಾಯಿತು ಎಂದು ಹಂಚಿಕೊಳ್ಳುತ್ತಾರೆ ಎಂದು ವಿವರಿಸಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.

Viral Video Bengaluru Traffic Police Allegedly Using Tea Stall QR Codes For Bribes

ಪೊಲೀಸರು ಸಿಕ್ಕಿಬೀಳದಂತೆ ಇಂತಹ ಪ್ಲ್ಯಾನ್‌ ಮಾಡಿಕೊಂಡಿದ್ದು, ಈ ಬಗ್ಗೆ ಎಲ್ಲರೂ ಎಚ್ಚರದಿಂದಿರಿ ಎಂದು ಮನವಿ ಮಾಡಿದ್ದಾರೆ. ಕೆಲವರು ಈ ವಿಡಿಯೋ ಅನ್ನು ಪೊಲೀಸ್‌ ಇಲಾಖೆಗೆ ಟ್ಯಾಗ್‌ ಮಾಡಿ, ಇದೇನಾ ನಿಮ್ಮ ಸೇವೆ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಈ ವಿಡಿಯೋ ಬೆಂಗಳೂರಿನ ಯಾವ ಏರಿಯಾಗೆ ಸಂಬಂಧಿಸಿದ್ದು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಎಕ್ಸ್‌ನಲ್ಲಿ Karnataka Portfolio ಸೇರಿದಂತೆ ಹಲವು ಪೇಜ್‌ಗಳು ಈ ವಿಡಿಯೋ ಹಂಚಿಕೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+