Video Viral: ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಪ್ರಶ್ನಿಸಿದ್ದಕ್ಕೆ ಯುವ ಕಾಂಗ್ರೆಸ್ ನಾಯಕಿಗೆ ಅಶ್ಲೀಲ ಸನ್ನೆ, ವ್ಯಕ್ತಿ ಬಂಧನ
ಬೆಂಗಳೂರು, ಫೆಬ್ರವರಿ 28: ಬೆಂಗಳೂರಿನಂತಹ ನಗರಗಳಲ್ಲಿ ಅಜಾಗರೂಕ ಚಾಲನೆ, ನಿಯಮ ಉಲ್ಲಂಘಟನೆಗಳು ಮಾಮೂಲಿ ಎನ್ನಬಹುದು. ಈ ಬಗ್ಗೆ ಸಾಕಷ್ಟು ಘಟನೆಗಳು ನಿತ್ಯ ಕೇಳಿ ಬರುತ್ತಿವೆ. ಇಂತಹ ಘಟನೆಗಳಿಂದ ಮಹಿಳಾ ಚಾಲಕಿಯರಿಗೆ ಸುರಕ್ಷತೆ ಇಲ್ಲವಾ ಎಂಬ ಭಾವನೆ ಮೂಡುತ್ತಿದೆ. ಅಜಾಗರೂಕ ಚಾಲನೆ ಬಗ್ಗೆ ಪ್ರಶ್ನಿಸಿದ್ದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆದ ಮಹಿಳಾ ಚಾಲಕಿಗೆ ವ್ಯಕ್ತಿಯೊಬ್ಬ ಅಶ್ಲೀಲ ಸನ್ನೆ ಮಾಡಿದ್ದಾನೆ. ಈ ಕುರಿತ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಅಶ್ಲೀಲ ಸನ್ನೆ ಮಾಡಿದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಹೌದು, ಬೆಂಗಳೂರಿನಲ್ಲಿ ಮೈಸೂರು ರಸ್ತೆಯ ಗೋಪಾಲನ್ ಮಾಲ್ ಬಳಿ ಕಳೆದ ಫೆಬ್ರವರಿ 26 ರಂದು ಸಂಜೆ 4 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಗೋಪಾಲ್ ಮಾಲ್ ಬಳಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷತಾ ರವಿಕುಮಾರ್ ಅವರು ವಾಹನದಲ್ಲಿ ತೆರಳುವಾಗ ಈ ಘಟನೆ ನಡೆದಿದೆ. ಅಶ್ಲೀಲವಾಗಿ ಸನ್ನೆ ಮಾಡಿದ ವ್ಯಕ್ತಿ ಹರ್ಷ ಎಂದು ಗುರುತಿಸಲಾಗಿದೆ.

ಹರ್ಷ ಅಜಾಗರೂಕ ಚಾಲನೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಅಕ್ಷತಾ ಅವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಹರ್ಷ ಅಶ್ಲೀಲ ಕೈ ಬೆರಳ ಸನ್ನೆ ಮಾಡಿದ್ದಾನೆ. ಈ ಘಟನೆ ಕುರಿತು ಅಕ್ಷತಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ (ಎಕ್ಸ್) @AkshathaRaviku2 ವಿಡಿಯೋ ಪೊಸ್ಟ್ ಹಂಚಿಕೊಂಡಿದ್ದಾರೆ. ಅವರಿಗಾದ ಅಹಿತಕರ ಅನುಭವ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಚಾಮರಾಜಪೇಟೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ದೂರು ದಾಖಲಾದ ಕೂಡಲೇ ಹರ್ಷನನ್ನು ವಶಕ್ಕೆ ಪಡೆದಿದ್ದಾರೆ.
ಹರ್ಷ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಲ್ಲದೇ, ಅಕ್ಷತಾ ಅವರ ಮುಂದೆ ಅಶ್ಲೀಲ ಸನ್ನೆ ಮಾಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಈ ಸಂಬಂಧ ಹರ್ಷಾರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಈ ತ್ವರಿತ ಸ್ಪಂದನೆ, ಕಾರ್ಯಕ್ಕೆ ಅಕ್ಷತಾ ಅವರು ಅಭಿನಂದಿಸಿದ್ದಾರೆ.
ಅಕ್ಷತಾ ಅವರ ಪೋಸ್ಟ್‌ನಲ್ಲಿ ಏನಿದೆ?
ನಗರದಲ್ಲಿ ಮಹಿಳಾ ಚಾಲಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ವ್ಯಕ್ತಿ ನನಗೆ ಅಶ್ಲಿಲ ಸನ್ನೆ ಮೂಲಕ ನಿಂದಿಸಿದ ನಂತರ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ. ಯು-ಟರ್ನ್ ಆಯ್ಕೆ ಇಲ್ಲದಿದ್ದರೂ ಅಲ್ಲಿ ಯೂಟರ್ನ್ ತೆಗೆದುಕೊಂಡಿದ್ದಾರೆ. ಈ ವೇಳೆ ರೆಡ್ ಸಿಗ್ನಲ್ ಇತ್ತು ಎಂದು ಅವರು ತಿಳಿಸಿದ್ದಾರೆ. ಇಂತಹ ಘಟನೆಗಳನ್ನು ನಾವು ಕೇಳಬೇಕಲ್ಲವೇ ಅಥವಾ ನಿರ್ಲಕ್ಷಿಸಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ. ಹರ್ಷನ ಅಶ್ಲೀಲ ಕೈಸನ್ನೆ ವಿಡಿಯೋ ಅವರು ಹಂಚಿಕೊಂಡಿದ್ದಾರೆ.
Women drivers in Bangalore face a lot of issues..
— Akshatha Ravikumar (@AkshathaRaviku2) February 26, 2025
After abusing, he breaks traffic rules and takes a U-turn(where there is no). And it was still Red signal...
Happened at 4pm on Mysore- Bangalore road - gopalan mall..on 26/02/2025.
So we gotto listen to these & neglect?? pic.twitter.com/RY6PqB6dDw
ಪೊಲೀಸರಿಗೆ ಹ್ಯಾಟ್ಸ್ ಆಫ್
ಇನ್ನೂ ಪೊಲೀಸರು ಈ ಪ್ರಕರಣದಲ್ಲಿ ತತಕ್ಷಣವೇ ಸ್ಪಂದಿಸಿದ್ದಾರೆ. ಚಾಮರಾಜಪೇಟೆ ಪೊಲೀಸರು, ಬೆಂಗಳೂರು ಸಂಚಾರಿ ಪೊಲೀಸರ ಕಾರ್ಯವನ್ನು ಅಕ್ಷತಾ ಅವರು ಶ್ಲಾಘಿಸಿದ್ದಾರೆ. ಈ ಬಗ್ಗೆ ನನಗೆ ಹೆಮ್ಮೆ ಇದೆ. ವಿಷಯ ಗೊತ್ತಾದ ಕೆಲವೇ ಸಮಯದಲ್ಲೇ ಅವರು ಎಫ್‌ಐಆರ್ ದಾಖಲಿಸಿದ್ದಾರೆ. ಚಾಮರಾಜಪೇಟೆ ಪಿಎಸ್ ಸಂಚಾರ ಇಲಾಖೆಗೆ ಹ್ಯಾಟ್ಸ್ ಆಫ್ ಎಂದು ಅವರು ಬರೆದುಕೊಂಡಿದ್ದಾರೆ.
-
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
Bangladesh Bus Tragedy: ನದಿಗೆ ಉರಳಿದ 50 ಪ್ರಯಾಣಿಕರಿದ್ದ ಬಸ್, ಹಲವರು ಸಾವು; ಎದೆ ನಡುಗಿಸೋ ವಿಡಿಯೋ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್












Click it and Unblock the Notifications