ಫುಡ್ ಲೇಟಾಯ್ತು ಅಂತಾ ಬೈದು, ಆಮೇಲೆ ಸಾರಿ ಎಂದ ಗ್ರಾಹಕನಿಗೆ ಸ್ಕೋಡಾ ಕಾರನ್ನೇ ಗಿಫ್ಟ್ ಕೊಟ್ಟ ಡೆಲಿವರಿ ಬಾಯ್
ಜಗತ್ತಿನಲ್ಲಿ ಎಷ್ಟೋ ಬಾರಿ ನಾವು ಮಾಡುವ ಸಣ್ಣ ಪುಟ್ಟ ಒಳ್ಳೆಯ ಕೆಲಸಗಳು ನಮಗೆ ದೊಡ್ಡ ಮಟ್ಟದ ಪ್ರತಿಫಲವನ್ನ ತಂದುಕೊಡುತ್ತವೆ. ತಾಳ್ಮೆ ಮತ್ತು ಕರುಣೆಗೆ ಯಾವಾಗಲೂ ಬೆಲೆ ಇದ್ದೇ ಇರುತ್ತದೆ ಎಂಬುದಕ್ಕೆ ಈ ಘಟನೆಯೇ ಉದಾಹರಣೆ. ಕೇವಲ 26ನೇ ವಯಸ್ಸಿನಲ್ಲಿ ಸ್ವಂತ ಪರಿಶ್ರಮದಿಂದ ಕೋಟ್ಯಾಧಿಪತಿಯಾಗಿರುವ ರುದ್ರ ಬ್ಯಾನರ್ಜಿ ಎಂಬುವವರ ಕಥೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ತಮ್ಮದೇ ಆದ ಸುಮಾರು 1000 ಟ್ರೈಲರ್‌ಗಳನ್ನ ಹೊಂದಿರುವ ಯಶಸ್ವಿ ಉದ್ಯಮಿ ರುದ್ರ ಬ್ಯಾನರ್ಜಿ, ಒಂದು ದಿನದ ಮಟ್ಟಿಗೆ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಬಳಿ ಕ್ಷಮೆ ಕೇಳಿದ ಒಬ್ಬ ಗ್ರಾಹಕನಿಗೆ ದುಬಾರಿ ಕಾರನ್ನೇ ಉಡುಗೊರೆಯಾಗಿ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.

ಮಿಲಿಯನೇರ್ ರುದ್ರ ಬ್ಯಾನರ್ಜಿ ಡೆಲಿವರಿ ಬಾಯ್ ಆಗಿದ್ದೇಕೆ?
ರುದ್ರ ಬ್ಯಾನರ್ಜಿ ಪೋರ್ಟ್ (ಬಂದರು) ವ್ಯವಹಾರದಲ್ಲಿ ದೊಡ್ಡ ಹೆಸರು ಮಾಡಿರುವ ಯುವ ಉದ್ಯಮಿ. ಕೇವಲ 26ನೇ ವಯಸ್ಸಿನಲ್ಲಿ ಸಾವಿರಾರು ಟ್ರೈಲರ್‌ಗಳ ಒಡೆಯನಾಗಿರುವ ಇವರು ಮಿಲಿಯನೇರ್. ಆದರೆ, ದಿನನಿತ್ಯದ ಒಂದೇ ರೀತಿಯ ಐಷಾರಾಮಿ ಜೀವನದಿಂದ ಕೊಂಚ ಬೋರ್ ಆಗಿದ್ದ ರುದ್ರ, ಏನಾದರೂ ಹೊಸತು ಮಾಡಬೇಕು, ಸಾಮಾನ್ಯರ ಕಷ್ಟಗಳನ್ನ ಹತ್ತಿರದಿಂದ ನೋಡಬೇಕು ಎಂದು ನಿರ್ಧರಿಸಿದರು.
ಇದೇ ಕಾರಣಕ್ಕಾಗಿ ಅವರು ಒಂದು ದಿನದ ಮಟ್ಟಿಗೆ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಲು ಮುಂದಾದರು. ತಾವು ಶ್ರೀಮಂತ ಎನ್ನುವುದನ್ನ ಮರೆತು, ಸಾಮಾನ್ಯ ಡೆಲಿವರಿ ಮಾಡುವ ಯುವಕನ ರೀತಿಯಲ್ಲಿ ಐದು ಆರ್ಡರ್‌ಗಳನ್ನ ತೆಗೆದುಕೊಂಡರು.
ಡೆಲಿವರಿ ಬಾಯ್ ಲೈಫ್ ಮತ್ತು ಕಸ್ಟಮರ್ಸ್ ಪ್ರತಿಕ್ರಿಯೆ
ಡೆಲಿವರಿ ಬಾಯ್ ಆಗಿ ಕೆಲಸ ಶುರು ಮಾಡಿದ ರುದ್ರ ಬ್ಯಾನರ್ಜಿ, ಜನರನ್ನು ಸ್ವಲ್ಪ ಕಾಡಿಸಬೇಕು ಎಂದುಕೊಂಡರು. ತಮಗೆ ಬಂದ 5 ಆರ್ಡರ್‌ಗಳನ್ನ ಬೇಕಂತಲೇ ತಡವಾಗಿ ತಲುಪಿಸಲು ನಿರ್ಧರಿಸಿದರು. ಗ್ರಾಹಕರು ಪದೇ ಪದೇ ಕಾಲ್ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಕೊನೆಗೂ ಆಹಾರ ತಣ್ಣಗಾದ ಮೇಲೆ ಗ್ರಾಹಕರಿಗೆ ಕರೆ ಮಾಡಿ ಆರ್ಡರ್ ತಲುಪಿಸಿದರು.
ಹಸಿವಿನಿಂದ ಕಾಯುತ್ತಿದ್ದ ಐದೂ ಜನ ಗ್ರಾಹಕರು ತಡವಾಗಿ ಬಂದಿದ್ದಕ್ಕೆ ಮತ್ತು ಕರೆ ಸ್ವೀಕರಿಸದಿದ್ದಕ್ಕೆ ಡೆಲಿವರಿ ಬಾಯ್ ಮೇಲೆ ಸಿಟ್ಟು ಮಾಡಿಕೊಂಡರು. ರುದ್ರ ಅವರಿಗೆ ಬಾಯಿಗೆ ಬಂದಂತೆ ಬೈದರು. ಆದರೆ ರುದ್ರ, ಡೆಲಿವರಿ ಬಾಯ್ ಲೈಫ್ ಹೇಗಿರುತ್ತದೆ ಎನ್ನುವುದನ್ನ ಅರಿತುಕೊಳ್ಳುತ್ತಾ, ಗ್ರಾಹಕರು ಬೈಯುವುದನ್ನ ಆನಂದಿಸಿದರು. ಯಾರೊಬ್ಬರಿಗೂ ತಾವು ಯಾರೆಂದು ಹೇಳಲಿಲ್ಲ.
Meet Rudra banerjee
— Suprvirat (@MostlyKohli) September 13, 2026
- He has nearly 1000 trailers in his port business
- Self made millionaire at 26
- Bro was bored, so he decided to become a delivery guy for a day
- He received 5 orders and didn’t answer anyone’s calls just to tease them
- Orders got late and he finally… pic.twitter.com/eTbITK1erh
ಕ್ಷಮೆ ಕೇಳಿದ ಗ್ರಾಹಕನಿಗೆ ಸ್ಕೋಡಾ ಕಾರು ಉಡುಗೊರೆ
ಮರುದಿನ ಬೆಳಗ್ಗೆ ರುದ್ರ ಬ್ಯಾನರ್ಜಿ ಎದ್ದಾಗ ಅವರ ವಾಟ್ಸಾಪ್‌ಗೆ ಒಂದು ಅಚ್ಚರಿಯ ಮೆಸೇಜ್ ಬಂದಿತ್ತು. ಹಿಂದಿನ ದಿನ ತಡವಾಗಿ ಫುಡ್ ತಂದಿದ್ದಕ್ಕೆ ಬೈದಿದ್ದ ಗ್ರಾಹಕನೊಬ್ಬ, "ಡೆಲಿವರಿ ಬಾಯ್ ಆಗಿ ಕೆಲಸ ಮಾಡುವುದು ಎಷ್ಟು ಕಷ್ಟ ಎಂದು ನನಗೆ ತಿಳಿದಿದೆ. ನಿನ್ನೆ ಹಸಿವಿನ ಕೋಪದಲ್ಲಿ ನಾನು ತುಂಬಾ ತಪ್ಪಾಗಿ ಮಾತನಾಡಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ" ಎಂದು ಮೆಸೇಜ್ ಕಳುಹಿಸಿದ್ದರು.
ಕೇವಲ ಒಬ್ಬ ಡೆಲಿವರಿ ಬಾಯ್ ಬಳಿ ಇಷ್ಟೊಂದು ಕರುಣೆಯಿಂದ ಕ್ಷಮೆ ಕೇಳಿದ ಆ ವ್ಯಕ್ತಿಯ ಗುಣ ರುದ್ರ ಅವರಿಗೆ ತುಂಬಾ ಇಷ್ಟವಾಯಿತು. ಆ ವ್ಯಕ್ತಿಯ ಒಳ್ಳೆಯತನವನ್ನ ಮೆಚ್ಚಿದ ರುದ್ರ, ಮುಂದಿನ ವಾರವೇ ಆ ಗ್ರಾಹಕನಿಗೆ ಹೊಸ ಸ್ಕೋಡಾ ಕಾರ್ ಒಂದನ್ನ ಉಡುಗೊರೆಯಾಗಿ ನೀಡಿದರು. ಇದನ್ನ ಆ ಗ್ರಾಹಕನಿಗೆ ನಂಬಲಾಗಲೇ ಇಲ್ಲ.
ಒಂದು ಸಣ್ಣ 'ಸಾರಿ' ಪದ ಒಬ್ಬ ವ್ಯಕ್ತಿಯ ಜೀವನದಲ್ಲಿ ಎಂತಹ ದೊಡ್ಡ ಬದಲಾವಣೆ ತರಬಹುದು ಎಂಬುದಕ್ಕೆ ಈ ಘಟನೆಯೇ ಉದಾಹರಣೆ. ನಾವು ಇತರರೊಡನೆ ಹೇಗೆ ನಡೆದುಕೊಳ್ಳುತ್ತೇವೆ ಎಂಬುದು ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ಒಳ್ಳೆಯತನಕ್ಕೆ ಯಾವಾಗಲೂ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎನ್ನುವುದನ್ನ ಈ ಕಥೆ ಸಾಬೀತುಪಡಿಸಿದೆ.


Click it and Unblock the Notifications
