Get Updates
Get notified of breaking news, exclusive insights, and must-see stories!

Viral: ಬೆಂಗಳೂರು ಏರ್‌ಪೋರ್ಟ್‌: ನಕಲಿ ಕ್ಯಾಬ್ ಹತ್ತಿ ಬೆಚ್ಚಿಬಿದ್ದ ಮಹಿಳೆ, ಆದ ಅನುಭವವೇ ಅಂಥದ್ದು..

ಬೆಂಗಳೂರು, ನವೆಂಬರ್ 11: ರಾಜಧಾನಿಯಲ್ಲಿ ಒಂದಲ್ಲಾ ಒಂದು ಅಪರಾಧ ಕೃತ್ಯಗಳು, ಹೊಸ ನಮೂನೆಯ ಕೃತ್ಯಗಳು ನಡೆಯುತ್ತಿರುತ್ತವೆ. ಅಂತದ್ದೇ ಒಂದು ಘಟನೆ ಬೆಂಗಳೂರು ಏರ್‌ಪೋರ್ಟ್‌ನಿಂದ ಕ್ಯಾಬ್ ಹತ್ತಿದ ಮಹಿಳೆಗೆ ಆಗಿದೆ. ಇನ್ನೇನು ತಾನು ಮಾನವ ಕಳ್ಳಸಾಗಾಣೆ, ಲೈಂಗಿಕ ದೌರ್ಜನ್ಯ, ಟ್ರ್ಯಾಟ್‌ಗೆ, ಲೂಟಿಗೆ ಒಳಗಾಗಿಯೇ ಬಿಟ್ಟ ಎನ್ನುವಷ್ಟರಲ್ಲಿ ಅದೃಷ್ಟವಶಾತ್ ಆ ಮಹಿಳೆ ಪಾರಾಗಿದ್ದಾರೆ. ಈ ಭಯಾನಕ ಘಟನೆ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ.

ಆ ಮಹಿಳೆಯ ಪ್ರಕಾರ, ನವೆಂಬರ್ 8ರಂದು ಶನಿವಾರ ನಿಕಿತಾ ಮಲಿಕ್ ಎಂಬ ಮಹಿಳೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (BLR Ariport) ಕ್ಯಾಬ್ ಹತ್ತಿದ್ದರು. ಓಲಾ ಕ್ಯಾಬ್ ಬುಕ್ ಮಾಡುವಷ್ಟರಲ್ಲಿ ಈ ಕ್ಯಾಬ್ ಚಾಲಕ ಬಂದು ನಿಮ್ಮ ಗಮ್ಯ ಸ್ಥಾನಕ್ಕೆ ಕರೆದೊಯ್ಯವುದಾಗಿ ಹೇಳಿದ್ದಾನೆ. ಆತ ಕ್ಯಾಬ್ ಚಾಲಕನಂತೆ ಇದ್ದು, ಮಹಿಳೆಯನ್ನು ಪುಸಲಾಯಿಸಿ ಹತ್ತಿಸಿಕೊಂಡಿದ್ದಾರೆ.

Viral of Women Share Horrible bad Experience after She Boarding Fake Cab From BLR Airport

ಕ್ಯಾಬ್ ಹತ್ತಿದ ಬಳಿಕ ಮಹಿಳೆ ತನಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ನಿರಂತರ ಸ್ನೇಹಿತರ ಸಂಪರ್ಕ ಹಾಗೂ ಪೊಲೀಸರಿಗೆ ಕರೆ ಮಾಡಿದ ಅವರು, ಕೆಲ ಹೊತ್ತಿನಲ್ಲೇ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೇನು ಎಲ್ಲವು ಮುಗಿಯಿತು ಎನ್ನವಷ್ಟರದಲ್ಲಿ ತಾನು ಅಪಾಯದಿಂದ ಪಾರಾಗಿದ್ದೇನೆ. ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದೇನೆ ಎಂದು ಅವರು ಎಕ್ಸ್‌ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಅಸಲಿಗೆ ಆ ರಾತ್ರಿ ಆಗಿದ್ದೇನು?

ಮಹಿಳೆ ಏರ್‌ಪೋರ್ಟ್‌ನಿಂದ ರಾತ್ರಿ 10:30 ರ ಸುಮಾರಿಗೆ ನಕಲಿ ಕ್ಯಾಬ್ ಹತ್ತಿದ್ದಾರೆ. ಆತ ಓಟಿಪಿಯಾಗಲಿ ಬೇರೊಂದು ಮಾಹಿತಿ ಕೇಳದೇ ಅಲ್ಲಿಂದ ಕರೆದುಕೊಂಡು ಹೋಗಿದ್ದಾನೆ. ಸ್ವಲ್ಪ ಹೊತ್ತಿನಲ್ಲೇ ಈತ ಓಲಾ ಕ್ಯಾಬ್ ವೇಷಧಾರಿ ಎಂದು ಗೊತ್ತಾಗಿದೆ.

ಪ್ರಶ್ನಿಸಿದಾಗ ಚಾಲಕ ತನ್ನ ಅಧಿಕೃತ ಅಪ್ಲಿಕೇಶನ್ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿಕೊಂಡಿದ್ದಾನೆ. ಹೀಗೆ ಮಾತನಾಡುತ್ತಿದ್ದಂತೆ ಆತ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮಹಿಳೆ ನಿರಾಕರಿಸಿದ್ದಾರೆ. ಪ್ರಯಾಣದ ದರವಷ್ಟೇ ಪಾವತಿಸುತ್ತೇನೆ. ಇಲ್ಲವಾದರೆ ಕಾರು ನಿಲ್ಲಿಸಿ ಬೇರೆ ಕಾರಿಗೆ ಹೋಗುವುದಾಗಿ ಮಹಿಳೆ ತಿಳಿಸಿದ್ದಾರೆ.

ಶಾಂತವಾಗಿ ವರ್ತಿಸಿ ತಪ್ಪಿಸಿಕೊಳ್ಳುವಲ್ಲಿ ಮಹಿಳೆ ಯಶಸ್ವಿ

ಆತ ನಿಲ್ಲಿಸದೇ ಪೆಟ್ರೋಲ್ ಬಂಕ್‌ಗೆ ತೆರಳಿ ಅಲ್ಲಿ ಪೆಟ್ರೋಲ್‌ಗೆ 500 ರೂಪಾಯಿ ಕೇಳಿದ್ದಾನೆ. ಹಣ ಕೊಡದಿದ್ದರೆ ನೀವೆ ಕಾರು ಓಡಿಸಿ ಎಂದೆಲ್ಲ ಮಹಿಳೆಗೆ ಹೇಳಿದ್ದಾನೆ. ಆತನ ವರ್ತನೆ ಕಂಡು ಈತ ಓಲಾ ಚಾಲಕನಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಶಾಂತವಾಗಿ ವರ್ತಿಸಿದ ಮಹಿಳೆಯು ನಿರಂತರವಾಗಿ 112ಗೆ ಕರೆ ಮಾಡಿದ್ದಾರೆ. ದೂರು ನೀಡಿದ್ದಾರೆ. 20 ನಿಮಿಷಗಳ ಹೊತ್ತಿನಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆ ರಕ್ಷಿಸಿ, ಆತನನ್ನು ಬಂಧಿಸಿ ಕಾರು ವಶಕ್ಕೆ ಪಡೆದಿದ್ದಾರೆ.

ಹಣಕ್ಕಾಗಿಯೂ ಆತ ಹೀಗೆ ಮಾಡಿರಬೇಕು ಎಂದಿರುವ ಮಹಿಳೆಯು, ಒಂದು ವೇಳೆ ಪೊಲೀಸರು ಬರದೇ ಬಹತೇಕ ಕಿಡ್ನಾಪ್, ಮಾನವಕಳ್ಳಸಾಗಾಣಿಕೆ, ಅತ್ಯಾಚಾರ, ಲೂಟಿಗೆ ಒಳಗಾಗಿರುತ್ತಿದ್ದೇ ಎಂದು ಅವರು ಹೇಳಿಕೊಂಡಿದ್ದಾರೆ. ದಯಮಾಡಿ ಏರ್‌ಪೋರ್ಟ್ ನಿಂದ ಓಡಾಡುವ ಮಹಿಳೆಯರು ಇವುಗಳ ಬಗ್ಗೆ ಜಾಗೃತವಾಗಿರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+