ಡೆಂಗ್ಯೂ ಬೆನ್ನಲ್ಲೇ ಬೆಂಗಳೂರಲ್ಲಿ ಹೆಚ್ಚಾಯ್ತು ಮತ್ತೊಂದು ಆತಂಕ! ಏನದು?

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿನ ಹವಾಮಾನ ವೈಪರೀತ್ಯದಿಂದಾಗಿ ಜನರಲ್ಲಿ ಆರೋಗ್ಯ ಸಮಸ್ಯೆಗಳು ಕೂಡ ಹೆಚ್ಚಾಗಿವೆ. ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಡೆಂಗ್ಯೂ ಕೇಸ್‌ಗಳು ಹೆಚ್ಚಾಗಿರುವ ಕಾರಣ ರಾಜ್ಯ ಸರ್ಕಾರವು ಡೆಂಗ್ಯೂ ಅನ್ನು ಸಾಂಕ್ರಾಮಿಕ ರೋಗ ಎಂದು ಅಧಿಕೃತವಾಗಿ ಘೋಷಿಸಿದೆ. ಮತ್ತೊಂದೆಡೆ ಜ್ವರ ಕೂಡ ಹೆಚ್ಚಾಗುತ್ತಿದ್ದು, ರೋಗಿಗಳ ಪೈಕಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರದಿಯಾಗಿದೆ.

ಹೌದು ಉದ್ಯಾನನಗರಿ ಜನರಲ್ಲಿ ಜ್ವರ ಹೆಚ್ಚಾಗಿದ್ದು, ಆಸ್ಪತ್ರೆಗಳತ್ತ ದೌಡಾಯಿಸುತ್ತಿದ್ದಾರೆ. ಇದರಲ್ಲಿ ಜ್ವರದಿಂದ ಆಸ್ಪತ್ರೆಗೆ ಬರುತ್ತಿರುವವರಲ್ಲಿ ಮಕ್ಕಳೇ ಅಧಿಕವಾಗಿದ್ದಾರೆ ಎನ್ನಲಾಗಿದೆ. ಬೆಂಗಳೂರು ನಗರದಲ್ಲಿ ತಾಪಮಾನದ ಏರಿಳಿತ, ಗಾಳಿ ಸಹಿತ ಮಳೆ ಹಾಗೂ ಬಿಸಿಲಿನಿಂದಾಗಿ ವೈರಲ್‌ ಫೀವರ್‌ (Viral fever) ಮಕ್ಕಳನ್ನು ಹೆಚ್ಚಾಗಿ ಕಾಡುತ್ತಿದೆ.

Viral Fever Has Increased Among Residents In Bengaluru

ಬೆಂಗಳೂರಿನ ಪ್ರಮುಖ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದ್ದು, ಶೇ 30ರಷ್ಟು ಮಂದಿ ಜ್ವರ ಇದೆ ಎಂತಲೇ ಚೆಕಪ್‌ಗೆ ಬರುತ್ತಿದ್ದಾರೆ. ಇಂತಹ ರೋಗಿಗಳ ಪೈಕಿಯೂ ಮಕ್ಕಳೇ ಹೆಚ್ಚಾಗಿ ಜ್ವರದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ದಿನವಿಡೀ ಮೋಡ ಕವಿದ ವಾತಾವರಣದಿಂದ ತಾಪಮಾನ ಕೂಡ ತಂಪಾಗಿದ್ದು, ಇದರಿಂದಲೂ ಜ್ವರದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಮಕ್ಕಳು ಒದ್ದಾಡುವಂತಾಗಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿರುವ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ಪ್ರತಿದಿನ 500ಕ್ಕೂ ಹೆಚ್ಚು ರೋಗಿಗಳು ಬರುತ್ತಿದ್ದಾರೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚು ಮಂದಿ ಜ್ವರ, ಕೆಮ್ಮು ಎಂದು ಚೆಕಪ್‌ಗೆ ಬರುತ್ತಿದ್ದಾರೆ. ಅಲ್ಲದೆ, ಜಯನಗರ ಸಾರ್ವಜನಿಕ ಆಸ್ಪತ್ರೆ, ಕೆ.ಸಿ. ಜನರಲ್‌ ಆಸ್ಪತ್ರೆ, ವಿಕ್ಟೋರಿಯಾ, ವಾಣಿವಿಲಾಸ ಸೇರಿದಂತೆ ಬೆಂಗಳೂರಿನಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲೂ ಜ್ವರದ ಸಮಸ್ಯೆ ಹೇಳಿಕೊಂಡು ರೋಗಿಗಳು ಹೆಚ್ಚಾಗಿ ಬರುತ್ತಿದ್ದಾರೆ.

ಇದಲ್ಲದೆ, ಖಾಸಗಿ ಆಸ್ಪತ್ರೆಗಳು ಹಾಗೂ ಏರಿಯಾಗಳಲ್ಲಿರುವ ಕ್ಲಿನಿಕ್‌ಗಳ ಬಳಿಯೂ ಜ್ವರ ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡುಬರುತ್ತಿವೆ.

Viral Fever Has Increased Among Residents In Bengaluru

ವೈದ್ಯರು ಹೇಳುವ ಪ್ರಕಾರ, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇದರಿಂದ ಸಾಮಾನ್ಯವಾಗಿ ಮಕ್ಕಳಿಗೆ ಮೊದಲು ಜ್ವರ ಬರುತ್ತದೆ. ಇದಾದ ನಂತರ ಮನೆಯಲ್ಲಿರುವ ಇತರರಿಗೂ ಜ್ವರ ಹರಡುತ್ತದೆ. ಕೆಮ್ಮು, ನೆಗಡಿ ಹಾಗೂ ದೇಹದ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ವಾತಾವರಣ ಬದಲಾದಂತೆ ಜ್ವರ ಕೂಡ ಹೆಚ್ಚಾಗುತ್ತದೆ.

ಬೆಂಗಳೂರಿನಲ್ಲಿ ಕೆಲ ದಿನಗಳಿಂದ ತುಸು ಚಳಿಯ ವಾತಾವರಣವೇ ಇದೆ. ಇದರಿಂದಾಗಿ ಮಕ್ಕಳು ಹಾಗೂ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಆಸ್ಪತ್ರೆಗಳಿಗೆ ಬರುತ್ತಿರುವ ಅನೇಕರು ಜ್ವರ, ಗಂಟಲು ನೋವು ಎನ್ನುತ್ತಿದ್ದಾರೆ.

ಈ ವೈರಲ್‌ ಫೀವರ್‌ನ ಪ್ರಮುಖ ಲಕ್ಷಣಗಳೆಂದರೆ, ಸುಸ್ತಾಗುವುದು, ದಣಿವು ಮೈ-ಕೈ ನೋವು ತಲೆನೋವು, ನೆಗಡಿ, ಶೀತ, ಜ್ವರ, ಕೆಮ್ಮು, ಮೂಗು ಕಟ್ಟಿಕೊಳ್ಳುವುದು. ಈ ಸಮಸ್ಯೆಗಳು ಕಂಡು ಬಂದಿರುವ ಹಿನ್ನೆಲೆ ಬೆಂಗಳೂರಿನಲ್ಲೇ ಹೆಚ್ಚು ಮಂದಿ ಆಸ್ಪತ್ರೆಗಳತ್ತ ದೌಡಾಯಿಸಿದ್ದಾರೆ ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+