ಬೆಂಗಳೂರಿನ ಶಕ್ತಿಕೇಂದ್ರ 'ವಿಧಾನಸೌಧ ಸ್ಪೋಟಿಸಿದಂತೆ' ವಿಡಿಯೋ; ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ!

ಬೆಂಗಳೂರು: ಇಷ್ಟು ದಿನ ಸೆಲೆಬ್ರೆಟಿಗಳ, ಪ್ರಾಣಿ ಪಕ್ಷಿಗಳಿಗೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಿದ್ದವು, ಸಾರ್ವಜನಿಕರ ಕೆಂಗಣ್ಣಿಗೆ ಗುರಿ ಆಗುತ್ತಿದ್ದವು. ಇದೀಗ ಕರ್ನಾಟಕದ ಅತ್ಯುನ್ನತ ಶಕ್ತಿ ಕೇಂದ್ರ ಮತ್ತು ಪ್ರಜಾಪ್ರಭುತ್ವದ ಜೀವಂತ ಸಂಕೇತವಾಗಿರುವ ವಿಧಾನಸೌಧವು ಬಾಂಬ್ ನಿಂದ ಸ್ಪೋಟಿಸಿದಂತೆ ವ್ಯಕ್ತಿಯೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಮನವಿ ಮಾಡಿದ್ದಾರೆ. ಇಂಥವರನ್ನು ಸುಮ್ಮನೆ ಬಿಡಬೇಡಿ ಅಂತಲೂ ಆಗ್ರಹಿಸಿದ್ದಾರೆ.

ಹೌದು, Jnx king Hg ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 'ವಿಧಾನಸೌಧ ಸ್ಪೋಟದ' ವಿಡಿಯೋ ಹಂಚಿಕೊಳ್ಳಲಾಗಿದೆ. 'ವಿಧಾನಸೌಧ ಉಡಾಯಿಸುತ್ತೇನೆ' ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಹಾಡ ಹಗಲೇ ವಿಧಾನಸೌಧ ಮುಂದೆ ನಿಂತು ಕೈಯನ್ನು ವಿಧಾನಸೌಧದ ಮುಂದೆ ತೋರಿಸುತ್ತಿದ್ದಂತೆ ವಿಧಾನಸೌಧ ಸ್ಪೋಟಗೊಂಡು ಬೆಂಕಿ, ಹೊಗೆಯ ಕೆನ್ನಾಲಿಗೆ ಆಗಸದಾದ್ಯಂತ ಆವರಿಸಿಕೊಂಡಂತೆ ವಿಡಿಯೋದಲ್ಲಿ ಕಾಣಿಸುತ್ತದೆ. ಅಸಲಿಗೆ ಈ ವಿಡಿಯೋ AI ನಿಂದ ಮಾಡಲ್ಪಟ್ಟಿದೆ. ವ್ಯಕ್ತಿ ತನ್ನ ಇನ್‌ಸ್ಟಾ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಸಖತ್ ವೈರಲ್ ಆಗುತ್ತಿದೆ.

Vidhana Soudha Blast Video

ಎಐ ತಂತ್ರಜ್ಞಾನ ಬೆಳೆದಂತೆಲ್ಲ ಫೋಟೋ, ವಿಡಿಯೋಗಳು ನಕಲಿಯೋ ಅಸಲಿಯೋ ಎಂಬುದು ತಿಳಿದಷ್ಟರ ಮಟ್ಟಿಗೆ ಎಡಿಟ್ ಮಾಡಿ ಹರಿಬಿಡುವ ಪರಿಪಾಠ ಹೆಚ್ಚಾಗಿದೆ. ಇಷ್ಟು ದಿನ ಸೆಲೆಬ್ರೆಟಿಗಳಿಗೆ ಎಐ ಭೂತ ಕಾಡುತ್ತಿತ್ತು. ತಂತ್ರಜ್ಞಾನ ದುರುಪಯೋಗ ಮಾಡಿಕೊಂಡ ಕಿಡಿಗೇಡಿಗಳು ಅಹಿತಕರ, ಅಸಮಾಧಾನಕರ ಫೋಟೋ, ವಿಡಿಯೋ ಮಾಡಿ ಹರಿಬಿಡುತ್ತಿದ್ದರು. ಇದೀಗ ಬೆಂಗಳೂರಿನ ಶಕ್ತಿಕೇಂದ್ರ ವಿಧಾನಸೌಧವನ್ನೇ ಬಾಂಬ್ ಇಟ್ಟು ಉಡಾಯಿಸಿದಂತೆ ಎಐ ವಿಡಿಯೋ ಮಾಡಿ ಬಿಡಲಾಗಿದ್ದು, ಭಾರೀ ಚರ್ಚೆಗೆ, ಆಕ್ರೋಶಕ್ಕೆ ಕಾರಣವಾಗಿದೆ.

ನೆಟ್ಟಿಗರು ಹೇಳಿದ್ದೇನು?

ನೆಟ್ಟಿಗರು ಈ ವಿಡಿಯೋ ಬೇರೆ ಬೇರೆ ಜಾಲತಾಣ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. 'ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಬಾಂಬ್ ಸ್ಫೋಟವನ್ನು ತಪ್ಪಾಗಿ ಬಿಂಬಿಸುವ ಇನ್‌ಸ್ಟಾಗ್ರಾಮ್ ವೀಡಿಯೊವನ್ನು AI ಮ್ಯಾನಿಪುಲೇಟ್ ಮಾಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣ ಬಳಕೆದಾರರು ಅದನ್ನು ಅಪ್‌ಲೋಡ್ ಮಾಡಿದ ಖಾತೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರನ್ನು ಒತ್ತಾಯಿಸಿದ್ದಾರೆ.

ಎಫ್‌ಐಆರ್‌ ದಾಖಲಿಸಿ, ಕ್ರಮ ಕೈಗೊಳ್ಳಿ

'Jnx king Hg' ಹೆಸರಿನ ಖಾತೆಯಿಂದ ಪೋಸ್ಟ್ ಮಾಡಲಾದ ವೀಡಿಯೊ, ಕಟ್ಟಡವನ್ನು ಸ್ಫೋಟಿಸಲಾಗಿದೆ. ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಿ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಸಿಟಿ ಪೊಲೀಸರನ್ನು ಟ್ಯಾಗ್ ಮಾಡಲಾಗಿದೆ. ಯಾವಾಗ ಪೋಸ್ಟ್ ವೈರಲ್ ಆಯಿತೋ ಆಗ ಪೋಸ್ಟ ಅನ್ನು ಡಿಲೀಟ್ ಮಾಡಿಸಲಾಗಿದೆ.

ರಾಜಕಾರಣಿಗಳ ಭ್ರಷ್ಟಾಚಾರ, ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದು ಕೆಲವು ಹೇಳಿದ್ದಾರೆ. ಮತ್ತೊಬ್ಬರು ವಿಧಾನಸೌಧ ಒಳಗಿದ್ದ ಎಲ್ಲ ಶಾಸಕರ ಆತ್ಮಕ್ಕೆ ಶಾಂತಿ ಸಿಗಲಿ ಎಂಬಂತೆ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆಯಾಗಿ ಈ ರೀತಿ ವಿಡಿಯೋ ಮಾಡಿ ಸಮಾಜದ ಶಾಂತಿ ಕದಡುವುದು, ನಕರಾತ್ಮಕ ಬೆಳವಣಿಗೆಗೆ ಪುಷ್ಠಿ ನೀಡುವುದು ಸರಿಯಲ್ಲಿ ಎಂದು ಖಂಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+