ವೀಕ್ಷಿಸಿ: ಬೆಂಗಳೂರು ಪೊಲೀಸ್ ಠಾಣೆಗಳಲ್ಲಿನ ಗ್ರಂಥಾಲಯ

ಬೆಂಗಳೂರು, ನ.8: ಬೆಂಗಳೂರು ಪೊಲೀಸ್ ಇಲಾಖೆ ಪೊಲೀಸ್ ಠಾಣೆಗಳನ್ನು ಹೆಚ್ಚು ನಾಗರಿಕ ಸ್ನೇಹಿಯನ್ನಾಗಿ ಮಾಡುವ ಕಲ್ಪನೆಯನ್ನು ಹೊಂದಿದೆ. ಹೀಗಾಗಿ ಪೊಲೀಸ್ ಠಾಣೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ.

ಬೌದ್ಧಿಕವಾಗಿ ಸದೃಢವಾಗಿರಲು ಪೊಲೀಸ್ ಠಾಣೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸುವ ವಿನೂತನ ಕಲ್ಪನೆಯನ್ನು ಬೆಂಗಳೂರು ಪೊಲೀಸ್ ಇಲಾಖೆ ತಂದಿದೆ. ಈ ಕಲ್ಪನೆಯ ಹಿಂದಿನ ಮಾಸ್ಟರ್ ಮೈಂಡ್ ಉಪ ಪೊಲೀಸ್ ಆಯುಕ್ತ (ಬೆಂಗಳೂರು ದಕ್ಷಿಣ) ಕೆ ಅಣ್ಣಾಮಲೈ ಅವರು. ಅಣ್ಣಾಮಲೈ ಅವರ ಪ್ರಕಾರ, ಪೊಲೀಸ್ ಅಧಿಕಾರಿಗಳು ಬೆಳೆಯಲು ಮತ್ತು ಉತ್ತಮ ಮನುಷ್ಯರಾಗಲು ಇಂತಹ ರೀತಿಯ ಬದಲಾವಣೆ ಹೆಚ್ಚು ಮುಖ್ಯವಾಗಿದೆ.

''ಪ್ರಾಥಮಿಕವಾಗಿ ಠಾಣೆಗಳಲ್ಲಿ ಪೊಲೀಸ್ ಅಧಿಕಾರಿಗಳಿಗೆ ಅವರದ್ದೇ ಆದ ಒತ್ತಡ ಇರುತ್ತದೆ. ಆದರೆ ಸಮಾಜದ ಸಮಸ್ಯೆಗಳನ್ನು ನಿಭಾಯಿಸುವ ಪ್ರತಿಯೊಬ್ಬರೂ ಸುಸ್ಥಿತಿಯಲ್ಲಿರುವ ಮಾನವರಾಗುವುದು ಮುಖ್ಯ. ನಮಗೆ ಸಾಕಷ್ಟು ಕರೆಗಳು ಬರುತ್ತಿವೆ ಮತ್ತು ಈಗಾಗಲೇ ಅನೇಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ಪುಸ್ತಕಗಳನ್ನು ದಾನ ಮಾಡಲು ಮುಂದೆ ಬಂದಿವೆ. ನಮ್ಮ ಪುಸ್ತಕ ಬ್ಯಾಂಕ್‌ಗಳು ಬೆಳೆಯುತ್ತಿವೆ. ಇದರಿಂದ ನಮ್ಮ ಗ್ರಂಥಾಲಯಗಳು ಶೀಘ್ರದಲ್ಲೇ ಸ್ವಾವಲಂಬಿಯಾಗುತ್ತವೆ'' ಎಂದು ಅಣ್ಣಾಮಲೈ ಹೇಳಿದರು.

Video: All Bengaluru police stations to have libraries

ಜಯನಗರ ಪೊಲೀಸ್ ಠಾಣೆಯಲ್ಲಿ ಅತಿ ಹೆಚ್ಚು ಪುಸ್ತಕಗಳಿವೆ. ಈ ಹಿಂದೆ ಬೆಂಗಳೂರಿನ ಪ್ರತಿ ಪೊಲೀಸ್ ಠಾಣೆಗಳಲ್ಲಿ ಕೇವಲ 20 ಪುಸ್ತಕಗಳೊಂದಿಗೆ ಪ್ರಾರಂಭವಾದ ಗ್ರಂಥಾಲಯವು ಈಗ ಒಟ್ಟು 700 ಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿದೆ. ಉಳಿದ ಪೊಲೀಸ್ ಠಾಣೆಗಳಿಗೆ ಹೋಲಿಸಿದರೆ ಜಯನಗರ ಪೊಲೀಸ್ ಠಾಣೆಯಲ್ಲಿ ಅತಿ ಹೆಚ್ಚು ಪುಸ್ತಕಗಳಿವೆ. ಪ್ರತಿಯೊಂದು ಗ್ರಂಥಾಲಯವು ಕಾನೂನು ಮತ್ತು ಸುವ್ಯವಸ್ಥೆ, ಇತಿಹಾಸ, ಕಾದಂಬರಿ ಮತ್ತು ಕಾಲ್ಪನಿಕವಲ್ಲದ ಮತ್ತು ಸ್ಪೂರ್ತಿದಾಯಕ ಆತ್ಮಚರಿತ್ರೆಗಳನ್ನು ಒಳಗೊಂಡಂತೆ ವಿವಿಧ ಪ್ರಕಾರಗಳ ಪುಸ್ತಕಗಳನ್ನು ಒಳಗೊಂಡಿದೆ.

ಜಯನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಾತನಾಡಿ, ನಮ್ಮ ಗ್ರಂಥಾಲಯದಲ್ಲಿ ಈಗ ಸುಮಾರು 300 ಪುಸ್ತಕಗಳಿವೆ. ಇದು ನಮಗೆ ಬೌದ್ಧಿಕವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಅದು ಈಗ ನಮ್ಮ ನೆಚ್ಚಿನ ಕಾಲಕ್ಷೇಪವಾಗಿದೆ. ಜಿಲ್ಲಾಧಿಕಾರಿಯವರು ಈ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುಸ್ತಕಗಳು ಒತ್ತಡವನ್ನು ನಿವಾರಿಸುತ್ತದೆ. ಆದ್ದರಿಂದ ನಿರಂತರವಾಗಿ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳಿಗೆ ಇದು ಒಳ್ಳೆಯದು ಎಂದು ಕೆಲವು ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+