• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಬೆಂಗಳೂರಲ್ಲಿ ವಿಎಚ್‌ಪಿ ರ‍್ಯಾಲಿ

|

ಬೆಂಗಳೂರು, ನವೆಂಬರ್ 10: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ತರಲು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ನವೆಂಬರ್ 25ರಂದು ಬೃಹತ್ ಜನಾಗ್ರಹ ಸಭೆ ಹಮ್ಮಿಕೊಂಡಿರುವುದಾಗಿ ವಿಶ್ವ ಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿ ಮಿಲಿಂದ ಪರಾನಡೆ ಹೇಳಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿಮಾಣ ಮಾಡಿಯೇ ತೀರುತ್ತೇವೆ, ಇದಕ್ಕೆ ಸುಗ್ರೀವಾಜ್ಞೆ ತರಲು ಒತ್ತಾಯಿಸಿ ಜನಾಗ್ರಹ ಸಭೆ ಹಮ್ಮಿಕೊಳ್ಳಲಾಗಿದೆ, ಹರಿದ್ವಾರದ ಚಿನ್ಮಯಾನಂದ ಸರಸ್ವತಿ , ಪೇಜಾವರ ಶ್ರೀ ಸೇರಿ ಇತರರು ಭಾಗಿಯಾಗಲಿದ್ದಾರೆ. ಅದೇ ದಿನ ಹುಬ್ಬಳ್ಳಿ ಹಾಗೂ ಮಂಗಳೂರಿನಲ್ಲಿ ಕೂಡ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ಮಂದಿರ್ ಥಾ, ಹೈ ಔರ್ ರಹೇಗಾ: ಯೋಗಿಯಿಂದ ರಾಮಮಂದಿರ ನಿರ್ಮಾಣದ ಸೂಚನೆ

ಸುಪ್ರೀಂಕೋರ್ಟ್ ಗೆ ಗೌರವವಿದ್ದು ಅದಕ್ಕಾಗಿಯೇ ಈವರೆಗೆ ಕಾದಿದ್ದೇವೆ, ಆದರೆ ಅರ್ಬನ್ ನಕ್ಸಲ್ ಪ್ರಕರಣದಲ್ಲಿ ಕೋರ್ಟ್ ತೋರಿದ ಆತುರ ರಾಮಮಂದಿರ ವಿಚಾರದಲ್ಲಿ ತೋರಿಲ್ಲ, ಅದಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರದ ಮೇಲೆ ಒತ್ತಡ ತರಲು ತೀರ್ಮಾನಿಸಲಾಗಿದೆ ಎಂದರು. ಟಿಪ್ಪು ಜಯಂತಿ ಆಚರಣೆ ಮೂಲಕ ರಾಜ್ಯ ಸರ್ಕಾರದಿಂದ ಹಿಂದುಗಳಿಗೆ ಅವಮಾನ ಮಾಡಿದ್ದಾರೆ, ಸೆಕ್ಯುರ್ ಪಕ್ಷಗಳಿಂದ ಅಲ್ಪಸಂಖ್ಯಾತರ ಓಲೈಕೆಯ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

English summary
Vishwa Hindu Parishad has decided to hold a huge rally in Bengaluru on November 25 urging construction of Ram temple in Ayodhya. Another rally will be held on the same day in Hubli and Mangalore as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X