ಕಬ್ಬನ್ ಪಾರ್ಕ್‌ನಲ್ಲಿ ವಾಹನ ನಿಷೇಧ; ಬೆಂಗಳೂರು ಪೊಲೀಸರ ವರದಿ
ಬೆಂಗಳೂರು, ಸೆಪ್ಟೆಂಬರ್ 18 : ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರವನ್ನು ನಿಷೇಧಿಸಬೇಕು ಎಂಬ ಪ್ರಸ್ತಾವನೆ ಹಲವಾರು ದಿನಗಳಿಂದ ಕೇಳಿ ಬರುತ್ತಿದೆ. ಆದರೆ, ವಾಹನ ನಿಷೇಧಿಸಿದರೆ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ಸಮಸ್ಯೆ ಹೆಚ್ಚಾಗಲಿದೆ ಎಂದು ಅಧ್ಯಯನ ವರದಿ ಹೇಳಿದೆ.
ಬೆಂಗಳೂರು ಸಂಚಾರಿ ಪೊಲೀಸರು ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಿದ್ದಾರೆ. ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧ ಮಾಡಿದರೆ ಸುತ್ತ-ಮುತ್ತಲಿನ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.
ಕಬ್ಬನ್ ಪಾರ್ಕ್‌ನಲ್ಲಿ ವಾಹನ ಬೇಡ; ಸರ್ಕಾರಕ್ಕೆ ಪತ್ರ
ನಗರ ಭೂ ಸಾರಿಗೆ ನಿರ್ದೇಶನಾಲಯದ 2017ರ ವರದಿ ಪ್ರಕಾರ ಕಬ್ಬನ್ ಪಾರ್ಕ್ ಒಳಗೆ ಪ್ರತಿದಿನ 95,000 ವಾಹನಗಳು ಸಂಚಾರ ನಡೆಸುತ್ತವೆ. ಒಂದು ವೇಳೆ ವಾಹನ ನಿಷೇಧಿಸಿದರೆ ಅಷ್ಟು ವಾಹನಗಳು ಅಕ್ಕ-ಪಕ್ಕದ ರಸ್ತೆಗೆ ಇಳಿಯಬೇಕಾಗುತ್ತದೆ.
ಕಬ್ಬನ್ ಪಾರ್ಕ್ ಅಭಿವೃದ್ಧಿ; ಎರಡು ಹಂತದ ಯೋಜನೆಗೆ 40 ಕೋಟಿ
ಲಾಕ್ ಡೌನ್ ಸಮಯದಲ್ಲಿ ಕಬ್ಬನ್ ಪಾರ್ಕ್ ವೊಳಗೆ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಈಗ ಪುನಃ ಸಂಚಾರ ಆರಂಭವಾಗಿದೆ. ವಾಹನ ಸಂಚಾರವನ್ನು ಶಾಶ್ವತವಾಗಿ ಬಂದ್ ಮಾಡಬೇಕು ಎಂದು ಸಂಚಾರಿ ಪೊಲೀಸರಿಂದ ಮುಖ್ಯಮಂತ್ರಿಗಳ ತನಕ ಮನವಿ ಸಲ್ಲಿಕೆ ಮಾಡಲಾಗಿದೆ.
ಶೀಘ್ರದಲ್ಲೇ ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧ

5 ಕಿ. ಮೀ. ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ
ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧ ಮಾಡಿದರೆ ಸುತ್ತಮುತ್ತಲಿನ 5 ಕಿ. ಮೀ. ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಲಿದೆ. ವಿಧಾನಸೌಧ, ಹೈಕೋರ್ಟ್ ಸೇರಿದಂತೆ ಪ್ರಮುಖ ಕಟ್ಟಡಗಳು ಇರುವುದರಿಂದ ಸಂಚಾರ ದಟ್ಟಣೆ ಹೆಚ್ಚಾದರೆ ಸಮಸ್ಯೆ ಉಂಟಾಗಲಿದೆ ಎಂದು ವರದಿ ಹೇಳಿದೆ.

ವಾಹನಗಳ ನಿಲುಗಡೆ
ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ಬಂದ್ ಮಾಡಿದರೆ ಪಾರ್ಕ್ ಸುತ್ತಮುತ್ತಲಿನ 8 ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್‌ಗೆ ತೊಂದರೆ ಆಗಲಿದೆ ಎಂದು ಸಂಚಾರಿ ಪೊಲೀಸರ ವರದಿ ಹೇಳಿದೆ. ಇದರಿಂದಾಗಿ ವಾಹನ ಸಂಚಾರ ಬಂದ್ ಮಾಡುವ ಬಗ್ಗೆ ಪುನಃ ಚರ್ಚೆಗಳು ಆರಂಭವಾಗಿದೆ.

ವಾಹನ ಸಂಚಾರ ಹೆಚ್ಚಾಗಲಿದೆ
ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ಬಂದ್ ಮಾಡಿದರೆ ನೃಪತುಂಗ ರಸ್ತೆಯಲ್ಲಿ 3,800 ಇರುವ ಪಿಸಿಯು 4,500 ಆಗಲಿದೆ. ಹಡ್ಸನ್ ಸರ್ಕಲ್-ಟೌನ್ ಹಾಲ್ ನಡುವಿನ ಮಾರ್ಗದಲ್ಲಿ 6,300ಕ್ಕೆ ಏರಿಕೆಯಾಗಲಿದೆ. ರಾಜಭವನ ರಸ್ತೆಯಲ್ಲಿ 3,800 ರಿಂದ 4,500ಕ್ಕೆ ಏರಿಕೆಯಾಗಲಿದೆ ಎಂದು ವರದಿ ಅಂದಾಜಿಸಿದೆ.

ಸರ್ಕಾರ ಅನುಮತಿ ನೀಡಲಿದೆಯೇ?
ಕರ್ನಾಟಕ ಸರ್ಕಾರ ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ಬಂದ್ ಮಾಡಲು ಅವಕಾಶ ನೀಡಲಿದೆಯೇ? ಎಂಬುದುನ್ನು ಕಾದು ನೋಡಬೇಕಿದೆ. ಹಲವಾರು ವರ್ಷಗಳಿಂದ ಕಬ್ಬನ್ ಪಾರ್ಕ್‌ನ ಪರಿಸರ ಕಾಪಾಡಲು ವಾಹನ ಸಂಚಾರ ಬಂದ್ ಆಗಬೇಕು ಎಂಬ ಬೇಡಿಕೆ ಇದೆ.