ಪ್ರಧಾನಿ ಮಧ್ಯಸ್ಥಿಕೆವಹಿಸಿದರೆ ಬಂದ್ ಹಿಂದಕ್ಕೆ: ವಾಟಾಳ್ ನಾಗರಾಜ್
ಬೆಂಗಳೂರು, ಜನವರಿ 31 : ಮಹಾದಾಯಿ, ಕಳಸಾ-ಬಂಡೂರಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿದರೆ ಫೆ.4 ರಂದು ಕರೆ ನೀಡಲಾಗಿದ್ದ ಬಂದ್ ಹಿಂಪಡೆಯಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 25 ರಂದು ರಾಜ್ಯಾದ್ಯಂತ ಬಂದ್ ಮಾಡಲಾಗಿತ್ತು. ಆದರೆ ರೈತರ ಬೇಡಿಕೆ ಈಡೇರಿಲ್ಲ, ಫೆ.೩ರಂದು ಸಂಜೆಯವರೆಗೆ ಕಾಲಾವಕಾಶ ನೀಡಲಾಗುವುದು ಅಷ್ಟರೊಳಗೆ ಮೋದಿಯವರಿಂದ ಸಂದೇಶ ಬಂದರೆ ಬಂದ್ ಹಿಂಪಡೆಯಲಾಗುತ್ತದೆ. ಇಲ್ಲವಾದರೆ ಪ್ರತಿಭಟನೆ ಮುಂದುವರೆಯುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಉತ್ತರ ಕರ್ನಾಟಕದ ಜನರ ನೋವನ್ನು ನೋಡಲು ಸಾಧ್ಯವಿಲ್ಲ, ಆದಷ್ಟು ಬೇಗ ನೀರಿನ ವಿವಾದ ಬಗೆಹರಿಯಬೇಕಿದೆ. ವಿವಾದ ಬಗೆ ಹರಿಯುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ. ನಮ್ಮನ್ನು ಜೈಲಿಗೆ ಹಾಕಿದರೂ ತೊಂದರೆಯಿಲ್ಲ ನಮ್ಮ ಹೋರಾಟವನ್ನು ಬಿಡುದಿಲ್ಲ.












Click it and Unblock the Notifications