Aero Indiaಗೆ ಯುಎಸ್ ವಾಯುಪಡೆಯ ವಿಮಾನಗಳ ಪ್ರದರ್ಶನ
ಅಮೆರಿಕಾದ ಎರಡು ಜೆಟ್‌ಗಳಾದ ಎಫ್-35ಎ ಲೈಟ್ನಿಂಗ್ 2 ಮತ್ತು ಎಫ್-35ಎ ಜಂಟಿ ಸ್ಟ್ರೈಕ್ ಫೈಟರ್ ಏರೋ ಇಂಡಿಯಾ ಪ್ರದರ್ಶನದಲ್ಲಿ ಪಾಲ್ಗೊಂಡವು.
ಬೆಂಗಳೂರು, ಫೆಬ್ರವರಿ 13: ಯುಎಸ್ ಏರ್ ಫೋರ್ಸ್‌ನ (ಯುಎಸ್‌ಎಎಫ್) ಐದನೇ ತಲೆಮಾರಿನ ಸೂಪರ್‌ಸಾನಿಕ್ ಮಲ್ಟಿರೋಲ್ ಎಫ್-35ಎ ಎರಡು ಹೊಸ ವಿಮಾನಗಳು ಸೋಮವಾರ ಏರೋ ಇಂಡಿಯಾ ವಾಯು ಪ್ರದರ್ಶನದಲ್ಲಿ ಪಾಲ್ಗೊಂಡವು.
ಅಮೆರಿಕಾದ ಎರಡು ಜೆಟ್‌ಗಳಾದ ಎಫ್-35ಎ ಲೈಟ್ನಿಂಗ್ 2 ಮತ್ತು ಎಫ್-35ಎ ಜಂಟಿ ಸ್ಟ್ರೈಕ್ ಫೈಟರ್ ಇಲ್ಲಿ ಪಾಲ್ಗೊಂಡವು. ಯುಎಸ್‌ನ ಉತಾಹ್ ಮತ್ತು ಅಲಾಸ್ಕಾ ವಾಯುಪಡೆಯ ನೆಲೆಗಳಿಂದ ತಮ್ಮ ಪ್ರಯಾಣದ ನಂತರ ಬೆಂಗಳೂರಿನ ಹೊರವಲಯದಲ್ಲಿರುವ ಯಲಹಂಕ ವಾಯುಪಡೆಯ ನಿಲ್ದಾಣವನ್ನು ತಲುಪಿದವು.
ಅಮೆರಿಕದ ವಾಯುಪಡೆಯ ಎಫ್-35 ವಿಮಾನ ಭಾರತದಲ್ಲಿ ಬಂದಿಳಿದಿದ್ದು ಇದೇ ಮೊದಲ ಬಾರಿ ಎಂದು ಇಬ್ಬರು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಎಫ್-35 ಗಳ ಜೊತೆಗೆ ಯುಎಸ್ ಏರ್ ಫೋರ್ಸ್‌ನ ಎಫ್-16 ಫೈಟಿಂಗ್ ಫಾಲ್ಕನ್ ವಿಮಾನ ಜೋಡಿಯು ದೈನಂದಿನ ವೈಮಾನಿಕ ಪ್ರದರ್ಶನಗಳನ್ನು ನೀಡುತ್ತದೆ ಮತ್ತು ಪಡೆಯ ಪ್ರಮುಖ ಯುದ್ಧ ವಿಮಾನಗಳ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.

ಎಫ್/ಎ-18ಇ ಮತ್ತು ಎಫ್/ಎ-18ಎಫ್ ಸೂಪರ್ ಹಾರ್ನೆಟ್, ಅಮೆರಿಕಾ ನೌಕಾಪಡೆಯ ಅತ್ಯಂತ ಸುಧಾರಿತ ಫ್ರಂಟ್‌ಲೈನ್ ಕ್ಯಾರಿಯರ್ ಆಧಾರಿತ ಮಲ್ಟಿರೋಲ್ ಸ್ಟ್ರೈಕ್ ಫೈಟರ್ ಏರ್‌ಕ್ರಾಫ್ಟ್‌ಗಳು ಯುಎಸ್‌ನಿಂದ ಪ್ರದರ್ಶನಗಳ ಭಾಗವಾಗಿದೆ. ಯುನೈಟೆಡ್ ಸ್ಟೇಟ್ಸ್‌ನ ಉತಾಹ್‌ನಲ್ಲಿರುವ ಹಿಲ್ ಏರ್ ಫೋರ್ಸ್ ಬೇಸ್‌ನಿಂದ ಪ್ರಯಾಣದ ನಂತರ ಎಫ್-35ಎ ಲೈಟ್ನಿಂಗ್ 2 ಪ್ರದರ್ಶನ ತಂಡವು ತನ್ನ ವಿಶಿಷ್ಟ ವೈಮಾನಿಕ ಸಾಮರ್ಥ್ಯಗಳ ಡೆಮೊದೊಂದಿಗೆ ಜನರನ್ನು ಆಕರ್ಷಿಸುತ್ತದೆ.
ಏರ್ ಫೋರ್ಸ್ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಯುಎಸ್ ಸಹಾಯಕ ಉಪ ಕಾರ್ಯದರ್ಶಿ ಮೇಜರ್ ಜನರಲ್ ಜೂಲಿಯನ್ ಸಿ ಚೀಟರ್, ಯುಎಸ್ ನೀಡುತ್ತಿರುವ ಅತ್ಯಾಧುನಿಕ, ಪರಸ್ಪರ ಕಾರ್ಯಾಚರಣಾ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಪ್ರದರ್ಶಿಸಲು ಏರೋ ಇಂಡಿಯಾ ಸೂಕ್ತ ವೇದಿಕೆಯಾಗಿದೆ ಎಂದು ಹೇಳಿದರು.
"ಎಫ್-35 ಯುಎಸ್ ಫೈಟರ್ ತಂತ್ರಜ್ಞಾನದ ಪ್ರಮುಖ ಉತ್ಪನ್ನವಾಗಿದೆ. ಏರೋ ಇಂಡಿಯಾವು ಯುಎಸ್ ಒದಗಿಸುವ ಅತ್ಯಾಧುನಿಕ, ಸಮರ್ಥ, ಮಾರಕ ಮತ್ತು ಪರಸ್ಪರ ಕಾರ್ಯಾಚರಣಾ ಶಸ್ತ್ರಾಸ್ತ್ರಗಳ ವ್ಯವಸ್ಥೆಗಳನ್ನು ಪ್ರದರ್ಶಿಸಲು ಸೂಕ್ತವಾದ ವೇದಿಕೆಯಾಗಿದೆ. ಈ ವ್ಯವಸ್ಥೆ ಮುಂದುವರಿದ ಎದುರಾಳಿ ವಾಯು ರಕ್ಷಣೆ ಪಡೆಯ ಯುದ್ಧ ವಿಮಾನಗಳನ್ನು ಎದುರಿಸಲು ವಿನ್ಯಾಸಗೊಳಿಸಲಾಗಿದೆ. ಎಫ್-35ನ ಎಂಜಿನ್ ಮೂರು ಹಂತದ ಫ್ಯಾನ್, ಆರು ಹಂತದ ಕಂಪ್ರೆಷರ್, ಅನೂಯಲರ್ ಕಂಬೂಸ್ಟರ್, ಒಂದು ಹಂತದ ಅಧಿಕ ಒತ್ತಡದ ಟರ್ಬೈನ್ ಮತ್ತು ಎರಡು-ಹಂತದ ಕಡಿಮೆ ಒತ್ತಡದ ಟರ್ಬೈನ್ ಅನ್ನು ಒಳಗೊಂಡಿದೆ ಅವರು ಹೇಳಿದರು.












Click it and Unblock the Notifications