ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಕಂದಾಯ ಭವನ ಮತ್ತು ತಹಸೀಲ್ದಾರ್ ಕಚೇರಿಗಳಿಗೆ ಉಪಲೋಕಾಯುಕ್ತರ ಅಚ್ಚರಿ ದಾಳಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 27: ಬೆಂಗಳೂರಿನ ಕಂದಾಯ ಭವನ ಕಚೇರಿ ಮತ್ತು ತಹಸೀಲ್ದಾರ್ ಕಚೇರಿಗೆ ಉಪಲೋಕಾಯುಕ್ತ ನ್ಯಾ. ಫಣೀಂದ್ರ ನೇತೃತ್ವದ ತಂಡ ದಾಳಿಯನ್ನು ನಡೆಸಿದ್ದಾರೆ. ಧಿಡೀರ್ ಭೇಟಿಯನ್ನು ಕೊಟ್ಟು ತೀವ್ರವಾದ ಪರಿಶೀಲನೆಯನ್ನು ನಡೆಸಿದ್ದಾರೆ.

ಕಂದಾಯ ಭವನದಲ್ಲಿ ಅರ್ಜಿಯನ್ನು ಅರ್ಜಿಗಳನ್ನು ವಿಲೇವಾರಿಯನ್ನು ಮಾಡಲು ತಡವನ್ನು ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಇದರ ಜೊತೆಗೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ ನ್ಯಾ. ನ್ಯಾ.ಫಣೀಂದ್ರ ನೇತೃತ್ವದ ತಂಡ ದಾಳಿಯನ್ನು ನಡೆಸಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಹೈಕೋರ್ಟ್ ಆದೇಶದಂತೆ ಎಸಿಬಿ ರದ್ದುಗೊಳಿಸಿದ ಕರ್ನಾಟಕ ಸರ್ಕಾರ ಹೈಕೋರ್ಟ್ ಆದೇಶದಂತೆ ಎಸಿಬಿ ರದ್ದುಗೊಳಿಸಿದ ಕರ್ನಾಟಕ ಸರ್ಕಾರ

ಕಂದಾಯ ಭವನ ಮೇಲೆ ಉಪಲೋಕಾಯುಕ್ತ ದಿಢೀರ್ ತಪಾಸಣೆ

ಕಂದಾಯ ಭವನ ಮೇಲೆ ಉಪಲೋಕಾಯುಕ್ತ ದಿಢೀರ್ ತಪಾಸಣೆಯನ್ನು ನಡೆಸುತ್ತಿದ್ದು. ಉಪಲೋಕಾಯುಕ್ತ ನ್ಯಾ.ಫಣೀಂದ್ರ ನೇತೃತ್ವದ ತಂಡ ದಾಳಿಯನ್ನು ನಡೆಸಿದ್ದಾರೆ. ದೂರುದಾರರಿಂದ ಕಂದಾಯ ಭವನಕ್ಕೆ ಅರ್ಜಿಯಲ್ಲಿ ವಿಲೇವಾರಿ, ಕೃಷಿ ಭೂಮಿಯಿಂದ ಕೃಷಿಯೇತರ ಅರ್ಜಿ ಸೇರಿದಂತೆ ವಿವಿಧ ಅರ್ಜಿಗಳು ತಡವಾದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

Upa lokayuktas surprise Raid on Kandaya Bhavan and Tahsildar office

ತಾಲೂಕು ಕಚೇರಿಗಳ ಮೇಲೂ ದಾಳಿ

ಕಂದಾಯ ಭವನ ಸೇರಿದಂತೆ ನಗರದ‌ ಎಲ್ಲಾ ತಾಲೂಕು ಕಚೇರಿಗಳ ಮೇಲೆ‌ ಉಪಲೋಕಾಯುಕ್ತ ಹಾಗೂ ಲೋಕಾಯುಕ್ತ ಪೊಲೀಸರಿಂದ ದಿಢೀರ್ ತಪಾಸಣೆ ಕೈಗೊಂಡಿದ್ದಾರೆ. ಕಂದಾಯಭವನ,‌ ಯಲಹಂಕ, ಅನೇಕಲ್ ಹಾಗೂ ಕೆ.ಆರ್ ಪುರಂ ತಾಲೂಕು ಕಚೇರಿಗಳಲ್ಲಿ‌ ಪರಿಶೀಲನೆಯನ್ನು ನಡೆಸಲಾಗುತ್ತಿದೆ. ನಿಗದಿತ ಅವಧಿಯಲ್ಲಿ ಕಡತ ವಿಲೇವಾರಿ ಮಾಡದಿರುವುದು, ಖಾತಾ, ಭೂ ಪರಿವರ್ತನೆ ಮಾಡಲು ಹಣ ಬೇಡಿಕೆ, ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ದೂರುಗಳ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ದಾಳಿಯನ್ನು ನಡೆಸಲಾಗಿದೆ.

ಎಸಿಬಿಯ ಈ ಹಿಂದೆ ದಾಳಿಯನ್ನು ನಡೆಸಿತ್ತು

ಎಸಿಬಿ ರಚನೆ ರದ್ದಾಗುವ ಮುನ್ನವೂ ಡಿಸಿ ಕಚೇರಿಯ ಮೇಲೆ ದಾಳಿಯನ್ನು ನಡೆಸಲಾಗಿತ್ತು. ಮೇ 21ರಂದು ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸಿಬಿ ಲಂಚ ಬಾಕ ಅಧಿಕಾರಿಯನ್ನು ಬಲೆಗೆ ಕೆಡವಿದ್ದರು. ಜಿಲ್ಲಾಧಿಕಾರಿ ಮಂಜುನಾಥ್ ಜೊತೆಯಲ್ಲಿ ಕರ್ತ್ಯವ್ಯವನ್ನು ನಿರ್ವಹಿಸುತ್ತಿದ್ದ ಉಪ ತಹಸೀಲ್ದಾರ್ ಮಹೇಶ್ ಮತ್ತು ಕ್ಲರ್ಕ್ ಚೇತನ್ ಕುಮಾರ್ ಅಲಿಯಾಸ್ ಚಂದ್ರು ಐದು ಲಕ್ಷ ಹಣವನ್ನು ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಇಬ್ಬರು ಆರೋಪಿಗಳನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದರು ಈ ಬಗ್ಗೆ ತನಿಖೆ ನಡೆಯುತ್ತಿದೆ.

English summary
Upa lokayukta Justice Phanindra surprise Raid on Kandaya Bhavan Office and Tahsildar Office, Bengaluru. A visit was made and a thorough inspection was conducted, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X