ಯುಗಾದಿ ಹಬ್ಬದ ಸಡಗರಕ್ಕೆ "ದ ಸೋಕ್ ಮಾರ್ಕೆಟ್" ಮೆರಗು

ಬೆಂಗಳೂರು ಮಾರ್ಚ್ 20: ಭಾರತ ದೇಶದ ಮೂಲೆ ಮೂಲೆಗಳಲ್ಲಿರುವ ಅತ್ಯಂತ ಹೆಮ್ಮೆಯ ಕರಕುಶಲ ಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ನಿಮಗೆ ತಲುಪಿಸಲೆಂದೇ ಮತ್ತೆ ನಗರಕ್ಕೆ ಬಂದಿದೆ ದ ಸೋಕ್ ಮಾರ್ಕೇಟ್ - ಯುಗಾದಿ ಶಾಪಿಂಗ್ ಫೆಸ್ಟಿವಲ್.

ಹೌದು, ದೇಶದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇರುವ ಕುಶಲಕರ್ಮಿಗಳ ಕಲಾ ಪ್ರಕಾರಗಳ ಕಲೆಯ ರಸದೌತಣವನ್ನು ಈ ಬಾರಿಯ ಯುಗಾದಿ ಹಬ್ಬಕ್ಕೆ ಮೆರಗು ನೀಡಲು ಉಣಬಡಿಸಲಾಗುತ್ತಿದೆ. ಇದರ ಜತೆಗೆ ಪ್ರಾಚೀನ ಹಾಗೂ ಭಾರತ ದೇಶದ ಸಾಂಸ್ಕೃತಿಕ ಭವ್ಯತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮಾರ್ಚ್ 22 ರಿಂದ ಮಾರ್ಚ್ 31 ರ ವರೆಗೆ ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ಈ ಮೇಳದಲ್ಲಿ ಹೋಂ ಡೆಕೋರ್‍ಗಳು, ಲ್ಯಾಂಪ್‍ಶೇಡ್‍ಗಳು, ಹ್ಯಾಂಡ್‍ಲೂಮ್ಸ್, ಹ್ಯಾಂಡ್‍ಕ್ರಾಫ್ಟ್‍ಗಳು, ತಂಜಾವೂರ್ ಪೇಂಟಿಂಗ್‍ಗಳು, ಮಧುಬನಿ, ಒರಿಸ್ಸಾ ಪೇಂಟಿಂಗ್‍ಗಳು, ಕೋಲ್ಕತ್ತಾ ಪೇಂಟಿಂಗ್‍ಗಳು, ವಿವಿಧ ಬಗೆಯ ಸೀರೆಗಳು, ರೇಷ್ಮೆ ಸೀರೆಗಳು, ಕಾಶ್ಮೀರಿ ಸೀರೆಗಳು, ಕೋಲ್ಕತ್ತಾ ಸೀರೆಗಳು, ಹುಬ್ಬಳ್ಳಿ ಸೀರೆಗಳು, ಮಣಿಪುರ, ಚಂದೇರಿ ಸೀರೆಗಳು, ಕಾಂತವರ್ಕ್ ಸೀರೆಗಳು, ಕಲಾಮ್ಕರಿ ಸೀರೆಗಳು, ಲೈನೆನ್ ಸಿಲ್ಕ್ ಸೀರೆಗಳು ಮತ್ತು ಬಾಗಲ್ಪುರಿ ಸೀರೆಗಳು ಇರಲಿವೆ.

Ugadi Shopping Carnival - The SouQ (Market) at Karnataka Chitrakala Parishath

ವಿವಿಧ ವಿನ್ಯಾಸದ ಕುರ್ತಿಗಳು, ಲಕ್ನೋ ಕುರ್ತಿ, ಕಲಾಮ್ಕರಿ, ಕೋಲ್ಕತ್ತಾ, ಗುಜರಾತಿ ಕುರ್ತಿಗಳು, ಬಂಧನಿ, ಬೆಡ್‍ಶೀಟ್‍ಗಳು, ರಾಜಸ್ಥಾನಿ ಮತ್ತು ಗುಜರಾತಿ ಬೆಡ್‍ಶೀಟ್‍ಗಳು ಆಕರ್ಷಕ ರೀತಿಯಲ್ಲಿರಲಿವೆ. ಇವಲ್ಲದೇ, ಕರ್ಟೇನ್‍ಗಳು, ಕಾಶ್ಮೀರಿ ಕಾರ್ಪೆಟ್‍ಗಳು, ಮ್ಯಾಟ್‍ಗಳು ನಿಮ್ಮ ಮನೆಯ ಅಂದವನ್ನು ಹೆಚ್ಚಿಸಲು ಬಂದಿವೆ.

ಇನ್ನು ಮಹಿಳೆಯರಿಗೆ ಇಷ್ಟವಾಗುವ ಕಾಶ್ಮೀರಿ ಬ್ಯಾಗ್‍ಗಳು, ಕಲಾಮ್ಕರಿ ಬ್ಯಾಗ್‍ಗಳು, ಖಾದಿ ಕುರ್ತಾಗಳು ಇವೆ. ವಿವಿಧ ಬಗೆಯ ವಿನ್ಯಾಸದ ಆಭರಣಗಳು, ಒರಿಸ್ಸಾ ಆಭರಣಗಳು, ರಾಜಸ್ಥಾನಿ ಆಭರಣಗಳು, ಹ್ಯಾಂಡ್‍ಮೇಡ್ ಆಭರಣಗಳು ಹೀಗೆ ನೂರಾರು ಬಗೆಯ ಉತ್ಪನ್ನಗಳು ಗ್ರಾಹಕರನ್ನು ಆಕರ್ಷಿಸಲಿವೆ. ಈ ಮೂಲಕ ಈ ಬಾರಿಯ ಯುಗಾದಿ ಹಬ್ಬವನ್ನು ಮತ್ತಷ್ಟು ಅಂದಗೊಳಿಸಲಿವೆ.

ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ದೇಶದ ಮುಖ್ಯ ನಗರಗಳಲ್ಲಿ ಮಾರಾಟ ಮೇಳವನ್ನು ಆಯೋಜಿಸುವ ಮೂಲಕ ನೇರವಾಗಿ ಅವರ ಉತ್ಪನ್ನಗಳು ಗ್ರಾಹಕರಿಗೆ ತಲುಪಿಸುವಂತೆ ವ್ಯವಸ್ಥೆ ಮಾಡುವುದು ಮತ್ತು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇಕಾರರೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭವನ್ನು ಹೆಚ್ಚು ಗಳಿಸುವಂತೆ ಮಾಡುವ ಉದ್ದೇಶವನ್ನು ದ ಸೋಕ್ ಮಾರ್ಕೇಟ್ ಪ್ರದರ್ಶನ ಹಾಗೂ ಮಾರಾಟ ಮೇಳ ಹೊಂದಿದೆ.

Ugadi Shopping Carnival - The SouQ (Market) at Karnataka Chitrakala Parishath

ದ ಸೋಕ್ ಮಾರ್ಕೇಟ್ - ಯುಗಾದಿ ಶಾಪಿಂಗ್ ಫೆಸ್ಟಿವಲ್ ನ ವಿಶೇಷತೆಗಳು:

ಈ ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು 100 ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಬೆಂಗಳೂರು ಜನತೆಯ ಮುಂದೆ ಪ್ರತಿದಿನ ಬೆಳಿಗ್ಗೆ 11 ರಿಂದ ರಾತ್ರಿ 7 ರವರೆಗೆ ಪ್ರದರ್ಶಿಸಿ ಮಾರಾಟ ಮಾಡುವರು.

ಕುರ್ತಾ, ಸ್ಟೋಲ್ಸ್, ಶಾಲುಗಳು, ಸಲ್‍ವಾರ್ ಕಮೀಜ್ ಮತ್ತು ಉಡುಪಿನ ಬಟ್ಟೆಗಳು, ಕುಶನ್ ಕವರ್‍ಗಳು ಮತ್ತು ಬೆಡ್‍ಶೀಟ್‍ಗಳನ್ನು ಈ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಿ ಮಾರಾಟ ಮಾಡುವರು. ಈ ವಸ್ತುಗಳನ್ನು ಉತ್ವಾದಕರೆ ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿರುವುದರಿಂದ ವಸ್ತುಗಳು ನ್ಯಾಯಯುತ ಬೆಲೆಯಲ್ಲ್ಲಿ ದೊರಕಲಿವೆ.

ಈ ಮೇಳವನ್ನು 'ಒಗ್ಗರಣೆ ಡಬ್ಬಿ' ಖ್ಯಾತಿಯ ಮುರಳಿ ಮತ್ತು ನಟಿ ಜಯಶ್ರೀ ರಾಜ್ ಅವರು ಚಾಲನೆ ನೀಡಲಿದ್ದಾರೆ.

ದ ಸೋಕ್ ಮಾರ್ಕೇಟ್ - ಯುಗಾದಿ ಶಾಪಿಂಗ್ ಫೆಸ್ಟಿವಲ್

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್

(ಶಿವಾನಂದ ವೃತ್ತದ ಬಳಿ)

ದಿನಾಂಕ: ಮಾರ್ಚ್ 22 ರಿಂದ ಮಾರ್ಚ್ 31 ರ ವರೆಗೆ

ಸಮಯ: ಬೆಳಿಗ್ಗೆ 11 ಗಂಟೆಯಿಂದ ಸಂಜೆ 7 ರ ವರೆಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+