Get Updates
Get notified of breaking news, exclusive insights, and must-see stories!

ಕೆಂಪೇಗೌಡ ಏರ್‌ಪೋರ್ಟ್‌ನಿಂದ ಎಲೆಕ್ಷ್ರಾನಿಕ್‌ ಸಿಟಿಗೆ ಊಬರ್‌ ಪ್ರಯಾಣ ದರ ಕಂಡು ಧಂಗಾದ ಪ್ರಯಾಣಿಕ.! ಎಷ್ಟು ಸಾವಿರ ಗೊತ್ತಾ?

ಬೆಂಗಳೂರು, ಮಾರ್ಚ್‌, 02: ಬೆಂಗಳೂರು ಟ್ರಾಫಿಕ್ ಟ್ರಾಫಿಕ್ ಜಾಮ್‌ಗಳಿಗೆ ಹೆಸರುವಾಸಿಯಾಗಿದೆ. ಆದ್ದರಿಂದ ಅನೇಕ ಜನರು ಖಾಸಗಿ ಕ್ಯಾಬ್‌ಗಳನ್ನು ಬಳಸುತ್ತಾರೆ. ಓಲಾ ಮತ್ತು ಉಬರ್‌ನಂತಹ ಕ್ಯಾಬ್‌ನಂತಹ ವಾಹನಗಳನ್ನು ಅವಲಂಬಿಸಿದ್ದಾರೆ. ಇನ್ನು ಇತ್ತೀಚೆಗಷ್ಟೇ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸಲು ಉಬರ್ ಕ್ಯಾಬ್‌ ಅನ್ನು ಬುಕ್‌ ಮಾಡುವಾಗ ಇದರ ದರಗಳನ್ನ ನೋಡಿ ಬೆಚ್ಚಿಬಿದ್ದಿದ್ದಾರೆ. ಹಾಗಾದರೆ ಇದರಲ್ಲಿ ದರ ಎಷ್ಟಿತ್ತು ಹಾಗೂ ಈ ವೇಳೆ ಕಡಿಮೆ ದರದಲ್ಲಿ ಪ್ರಯಾಣಿಸಲು ಪ್ರಯಾಣಿಕ ಮಾಡಿದ್ದೇನು ಪ್ಲಾನ್‌ ಏನು ಗೊತ್ತಾ? ಇಲ್ಲಿದೆ ಮಾಹಿತಿ.

ಪ್ರಯಾಣಿಕ ರಾಜೇಶ್ ಭಟ್ಟಾಡ್ ಮೈಕ್ರೋಬ್ಲಾಗಿಂಗ್ ಸೈಟ್‌ಗೆ ಹೋದಾಗ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಆಗ್ನೇಯ ಉಪನಗರಕ್ಕೆ ಪ್ರಯಾಣಿಸಲು ಉಬರ್ ಸುಮಾರು ₹2,000 ಶುಲ್ಕ ವಿಧಿಸುವ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಇದು ಬೆಂಗಳೂರು ವಿಮಾನ ನಿಲ್ದಾಣದಿಂದ ಎಚ್‌ಎಸ್‌ಆರ್‌ಗೆ ಮಧ್ಯರಾತ್ರಿಯ ನಂತರ ಉಬರ್ ಬೆಲೆ ಎಂದು ಶ್ರೀ ಭಟ್ಟದ್ ತಮ್ಮ ಟ್ವೀಟ್‌ ಖಾತೆಯಲ್ಲಿ ಬರೆದಿದ್ದಾರೆ. ಅವರು ಬಳಿಕ ಕ್ಯಾಬ್ ಬದಲಿಗೆ ಮನೆ ತಲುಪಲು ಬಸ್‌ನಲ್ಲಿ ತೆರಲಿದ್ದಾರೆ. ಅಲ್ಲದೆ ಇದೇ ವೇಳೆ ಬಿಎಂಟಿಸಿ (ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ಸಂಸ್ಥೆ)ಗೆ ಧನ್ಯವಾದ ಅರ್ಪಿಸಿದರು.

Uber fare hike from Kempegowda Airport to Electronic City Passenger are worried

ಕ್ಯಾಬ್ ಸೇವೆಗಳಿ ಸಾಮಾನ್ಯವಾಗಿ ರಾತ್ರಿ-ಸಮಯದ ಶುಲ್ಕವನ್ನು ಹೆಚ್ಚಿನ ಶುಲ್ಕ ಇರುತ್ತದೆ. ಇನ್ನು ಶ್ರೀ ಭಟ್ಟದ್ ಅವರು ಮಧ್ಯರಾತ್ರಿಯ ನಂತರದ ಈ ದರವನ್ನು ಸ್ಕ್ರೀನ್‌ಶಾಟ್ ತೆಗೆದುಕೊಂಡು ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಮನೆಗೆ ತಲುಪಲು ಊಬರ್‌ನಲ್ಲಿ ₹1,931 ವೆಚ್ಚವಾಗಲಿದ್ದು, Uber Go Sedan ಮತ್ತು Uber Premierನಲ್ಲಿ ₹1,846 ಎಂದು ತೋರಿಸಿದೆ. ಇನ್ನು Uber XLನಲ್ಲಿ ದರವು ₹2,495 ಕ್ಕೆ ಏರಿಕೆಯಾಗಿತ್ತು.

ಈ ಬದರ ಪಟ್ಟಿ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ವಾಯು ವಜ್ರ ಬಸ್‌ನಲ್ಲಿ ಎಚ್‌ಎಸ್‌ಆರ್ ಲೇಔಟ್‌ಗೆ ಹೋಗಲು ಒಬ್ಬ ಬಳಕೆದಾರರು ಸಲಹೆ ನೀಡಿದರು. ಆದ್ದರಿಂದ ನಾನು ಅದನ್ನೇ ಆಯ್ಕೆ ಮಾಡಿಕೊಂಡೆ. ಇದರಿಂದ ಸಹಾಯ ಆಯಿತು ಎಂದು ಹೇಳಿದರು.

ಇನ್ನು ಈ ಕ್ಯಾಬ್‌ ದರಗಳನ್ನು ಗಮನಿಸಿದ ಹಲವಾರು ಬಳಕೆದಾರರು, ಅಪ್ಲಿಕೇಶನ್ ಆಧಾರಿತ ಕ್ಯಾಬ್‌ ದರಗಳು ದುಪ್ಪಟ್ಟಾಗಿವೆ ಎಂದು ಪ್ರತಿಕ್ರಿಯಿಸುವ ಮೂಲಕ ಆಕ್ರೋಶ ಹೊರಹಾಕಿದರು. ಇನ್ನು ಕ್ಯಾಬ್‌ನ ಪಿಕಪ್ ಸ್ಥಳವು ಏರ್‌ಪೋರ್ಟ್ ವಲಯದಿಂದ ಹೊರಗಿದ್ದರೆ ದರಗಳು 30 ರಿಂದ 50% ರಷ್ಟು ಕಡಿಮೆಯಾಗುತ್ತವೆ ಎಂದು ಒಬ್ಬರು ಸಲಹೆ ನೀಡಿದ್ದಾರೆ.

ನೀವು Uber/OLA ದರ ಸುಮಾರು 30-50% ರಷ್ಟು ಕಡಿಮೆಯಾಗಲು ಸರಳವಾದ ಮಾರ್ಗವನ್ನು ಅನುಸರಿಸಬಹುದು. ಪಿಕ್-ಅಪ್ ಸ್ಥಳದಲ್ಲಿ - ಏರ್ಪೋರ್ಟ್ ವಲಯವನ್ನು ಆಯ್ಕೆ ಮಾಡಬೇಡಿ (ಹೆಚ್ಚಿನ ಪ್ರಯಾಣಿಕರು ಈ ತಪ್ಪನ್ನು ಮಾಡುತ್ತಾರೆ). ಬದಲಿಗೆ ಕೆಲವು ಮೈಲುಗಳು ನಡೆಯಿರಿ. ವಿಮಾನ ನಿಲ್ದಾಣದ ಗಡಿಯ ಹೊರಗೆ ಪಿಕ್-ಅಪ್ ಅನ್ನು ಆಯ್ಕೆ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ, ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ಉಬರ್ ಕ್ಯಾಬ್‌ಗೆ ಆಘಾತಕಾರಿ ದರವನ್ನು ತೋರಿಸುವ ಮತ್ತೊಂದು ಸ್ಕ್ರೀನ್‌ಶಾಟ್ ಆನ್‌ಲೈನ್‌ನಲ್ಲಿ ವೈರಲ್ ಆಗಿತ್ತು. "ಇಲೆಕ್ಟ್ರಾನಿಕ್‌ ಸಿಟಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕ್ಯಾಬ್ ದರದ ವೆಚ್ಚವು ನಾನು ವಿಮಾನ ಟಿಕೆಟ್‌ಗೆ ಪಾವತಿಸಿದ ದರಕ್ಕೆ ಸಮಾನವಾಗಿದೆ" ಎಂದು ಉಬರ್ ಬೆಲೆಗಳ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. 52-ಕಿಮೀ ದೂರಕ್ಕೆ ಉಬರ್ ಪ್ರೀಮಿಯಂ ಬೆಲೆ ₹2,584 ಆಗಿದ್ದರೆ, ಉಬರ್ ಎಕ್ಸ್‌ಎಲ್‌ನ ಬೆಲೆ ₹4,051ರಷ್ಟಿತ್ತು" ಎಂದು ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+