ಕುಡಿದ ಮತ್ತಿನಲ್ಲಿ ಮಹಿಳಾ ಪೇದೆಗೆ ಡಾರ್ಲಿಂಗ್ ಎಂದವರು ಕಂಬಿ ಹಿಂದೆ
ಬೆಂಗಳೂರು, ಡಿಸೆಂಬರ್ 5 : ಕಂಠಪೂರ್ತಿ ಕುಡಿದು ಪಿಂಕ್ ಹೊಯ್ಸಳ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ ಇಬ್ಬರು ಆರೋಪಿಗನ್ನು ಬೆಂಗಳೂರಿನ ವೈಯ್ಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.
ಅಸಭ್ಯವಾಗಿ ವರ್ತಿಸಿದವರನ್ನು ರೋಹಿತ್ ಮತ್ತು ವೈಭವ್ ಎಂದು ಗುರುತಿಸಲಾಗಿದ್ದು, ಇವರಿಬ್ಬರು ಮತ್ತಿಕೆರೆ ನಿವಾಸಿಗಳು ಎಂದು ತಿಳಿದುಬಂದಿದೆ. ಸೋಮವಾರ ತಡರಾತ್ರಿ ಪಬ್ ವೊಂದರಲ್ಲಿ ಕಂಠಪೂರ್ತಿ ಕುಡಿದು ಗುಟ್ಟಹಳ್ಳಿಯ ವಿನಾಯಕ ಸರ್ಕಲ್ ಬಳಿ ಹೊಯ್ಸಳ ವಾಹನದಲ್ಲಿ ಮಹಿಳಾ ಸಿಬ್ಬಂದಿಯನ್ನು ಡಾರ್ಲಿಂಗ್ ಎಂದು ಕರೆದು ಎಳೆಯಲು ಯತ್ನಿಸಿದ್ದಾನೆ.

ಅಲ್ಲದೇ ಹೊಯ್ಸಳ ವಾಹನದ ಚಾಲಕ ಮಂಜಣ್ಣ ಎಂಬವರಿಗೆ ಅವಾಜ್ ಹಾಕಿದ್ದಾರೆ. ಈ ಕುರಿತು ಮಂಜಣ್ಣ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದ, ವಿಚಾರಣೆ ನಡೆಸಿದ್ದಾರೆ.












Click it and Unblock the Notifications