ಹೊಸ ವರ್ಷಕ್ಕೆ ಬಂದಿದ್ದ 214 ಕೆ.ಜಿ ಗಾಂಜಾ ಜಪ್ತಿ !
ಬೆಂಗಳೂರು, ಡಿಸೆಂಬರ್ 29: ಹೊಸ ವರ್ಷದ ಆಚರಣೆಗೆ ಹೊರ ರಾಜ್ಯದಿಂದ ಕೆಜಿ ಗಟ್ಟಲೇ ಗಾಂಜಾ ತಂದು ಮಾರಾಟ ಮಾಡಲು ಯತ್ನಿಸಿದ ಇಬ್ಬರು ಡ್ಲಗ್ ಪೆಡ್ಲರ್ ಗಳನ್ನು ಸುದ್ದುಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 214 ಕೆಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಕೆ. ಪ್ರೀತಿಪಾಲ್ ಮತ್ತು ಕೆ. ಕಲಂದರ್ ಬಂಧಿತ ಆರೋಪಿಗಳು. ರಾಜಮಂಡ್ರಿಯಿಂದ ಸ್ವರಾಜ್ ಮಜ್ದಾ ವಾಹನದಲ್ಲಿ 214 ಕೆ.ಜಿ. ಗಾಂಜಾ ಬೆಂಗಳೂರಿಗೆ ತಂದಿದ್ದರು. ಹೊಸ ವರ್ಷಕ್ಕೆ ಮಾರಾಟ ಮಾಡಲು ಯತ್ನಿಸಿದ್ದರು. ಖಚಿತ ಮಾಹಿತಿ ಆಧರಿಸಿ ಸುದ್ದುಗುಂಟೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ವಾಹನ ಸಮೇತ ವಶಪಡಿಸಿಕೊಂಡಿದ್ದಾರೆ.
ಹೊನ್ನಾವರದ Eco Beachಗೆ Blue Flagಗ್ ಮಾನ್ಯತೆ, ಸಂತಸ ವ್ಯಕ್ತಪಡಿಸಿಸಿದ ಡಿಸಿ ಹರೀಶ್ ಕುಮಾರ್ |Oneindia Kannada
ದಕ್ಷಿಣ ಕನ್ನಡ ಮತ್ತು ಇತರ ಕಡೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು. ಬಂಧಿತ ಆರೋಪಿಗಳ ಮೇಲೆ ಸುಮಾರು ಎಂಟು ಪ್ರಕರಣಗಳಿವೆ. ಅಲ್ಲಿಂದ ತಲೆ ಮರೆಸಿಕೊಂಡು ಬಂದಿದ್ದ ಆರೋಪಿಗಳು ಬೆಂಗಳೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.