ಖ್ಯಾತ ಗಾಯಕಿ ವಾರಿಜಶ್ರೀ ಅವರಿಂದ 'ಅಭಿವಂದನಂ'
ಬೆಂಗಳೂರು, ಮೇ 17: ಸುಪ್ರಸಿದ್ಧ ಗಾಯಕಿ ವಾರಜಶ್ರೀ ಅವರಿಂದ ಗಾಯನ ಕಾರ್ಯಕ್ರಮ 'ಅಭಿವಂದನಂ' ಮೇ 19ರಂದು ಬೆಂಗಳೂರಿನ ಕೆಆರ್ ರಸ್ತೆಯಲ್ಲಿರುವ ಗಾಯನ ಸಮಾಜದಲ್ಲಿ ನಡೆಯಲಿದೆ.
ಸಂಜೆ 6 ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಅಂದು ಅವರ ಗಾಯನಕ್ಕೆ ಎಚ್‌ಎಂ ಸ್ಮಿತಾ ವಯೋಲಿನ್, ಜಯಚಂದ್ರ ರಾವ್ ಮೃದಂಗ, ಪ್ರಮಥ್ ಕಿರಣ ಮೋರ್ಸಿಂಗ್, ಗುರುಪ್ರಸನ್ನ ಖಂಜಿರದೊಂದಿಗೆ ಸಾಥ್ ನೀಡಲಿದ್ದಾರೆ. ವಾರಿಜಶ್ರೀ ಅವರ ತಂದೆ ವಿದ್ವಾನ್ ಎಚ್.ಎಸ್. ವೇಣುಗೋಪಾಲ್, ತಾಯಿ ಟಿ.ವಿ. ರಮಾ ಇಬ್ಬರೂ ಕೂಡ ಕಲಾವಿದರು.

ವಾರಿಜಶ್ರೀ ಅವರು ಒಂದೂವರೆ ವರ್ಷದವರಿರುವಾಗಲೇ 50 ರಾಗವನ್ನು ಹಾಡುತ್ತಿದ್ದರು, 4 ವರ್ಷವಿರುವಾಗ 200 ರಾಗವನ್ನು ಅಭ್ಯಾಸ ಮಾಡಿದ್ದರು. ಅವರು ಪ್ರಾಥಮಿಕ ಸಂಗೀತವನ್ನು ಕೊಳಲುವಾದಕರಾದ ಅವರ ತಂದೆ ವೇಣುಗೋಪಾಲ್ ಅವರಿಂದ ಕಲಿತಿದ್ದಾರೆ.












Click it and Unblock the Notifications