ಬೆಂಗಳೂರಿನಲ್ಲಿ ಭಾರಿ ಗೃಹಸಾಲ ಉತ್ಸವ ಆರಂಭ
ಬೆಂಗಳೂರು, ಏ.26: "ಕ್ರೆಡೈ ಕರ್ನಾಟಕ ಎಸ್ ಬಿಐ ರಿಯಾಲ್ಟಿ ಎಕ್ಸ್ ಪೋ ಗೃಹ ಸಾಲ ಉತ್ಸವ"ಕ್ಕೆ ಎಸ್.ಬಿ.ಐ ನ ಅಧ್ಯಕ್ಷರಾದ ಅರುಂಧತಿ ಭಟ್ಟಾಚಾರ್ಯ ಅದ್ಧೂರಿ ಚಾಲನೆ ನೀಡಿದರು. ಉದ್ಘಾಟನೆ ನಂತರ ಮಾತನಾಡಿದ ಅವರು ತಮ್ಮ ಬ್ಯಾಂಕ್ ಜೊತೆ ಕ್ರೆಡೈ ಸಂಸ್ಥೆ ಕೈಜೋಡಿಸಿರುವುದು ಸಂತಸ ತಂದಿದೆ ಎಂದರು.
"ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಉತ್ಸವ ನಡೆಯುತ್ತಿದೆ. ಹಾಗೂ ಎಸ್.ಬಿ.ಐ ಬ್ಯಾಂಕ್ ಬಡವ, ಶ್ರೀಮಂತರೆಂಬ ಬೇಧ-ಭಾವ ಮಾಡದೆ ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ಎಲ್ಲಾ ವರ್ಗದವರಿಗೂ ಗೃಹಸಾಲ ನೀಡುತ್ತಾ ಬಂದಿದೆ" ಎಂದು ಭಟ್ಟಾಚಾರ್ಯ ತಿಳಿಸಿದರು.

ಬಳಿಕ ಮಾತನಾಡಿದ ಕರ್ನಾಟಕದ ಕ್ರೆಡೈ ಅಧ್ಯಕ್ಷರಾದ ಆರ್.ನಾಗರಾಜ್, "ಇದೊಂದು ವಿಶೇಷ ಕಾರ್ಯಕ್ರಮ. ಇದೇ ಮೊದಲ ಬಾರಿಗೆ ಎಸ್.ಬಿ.ಐನ ಸಹಕಾರದೊಂದಿಗೆ ನಡೆಯುತ್ತಿದೆ. ಗೃಹಸಾಲದಲ್ಲಿ ಮೊದಲ ಸ್ಥಾನದಲಿರುವ ಎಸ್.ಬಿ.ಐ ತಮ್ಮ ಸಂಸ್ಥೆಯ ಜೊತೆ ಕೈ ಜೋಡಿಸಿರುವುದು ಹೆಮ್ಮೆಯ ವಿಷಯ.."
"ಹಾಗೂ ಕ್ರೆಡೈ ಸಂಸ್ಥೆ ತನಗೆ ತಾನೇ ನೀತಿ ನಿಯಮಗಳನ್ನ ರೂಪಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ಗ್ರಾಹಕರು ಮನೆ ಖರೀದಿಸಲು ಕ್ರೆಡೈ ಸಂಸ್ಥೆ ಒಂದು ಟ್ರೇಡ್ ಮಾರ್ಕ್ ಇದ್ದಂತೆ. ಬಿಲ್ಡರ್ ಗಳು ಇದರ ಸದಸ್ಯರಾಗಲು ಕೆಲವು ನಿಯಮಗಳನ್ನ ಪಾಲಿಸಬೇಕಾಗುತ್ತದೆ" ಎಂದರು.













Click it and Unblock the Notifications