ಜಯನಗರ : ಉದ್ಯಮಿ ಹುಚ್ಚಾಟ, ಗುಂಡಿಟ್ಟು ಪತ್ನಿ ಹತ್ಯೆ, ಮಕ್ಕಳಿಗೂ ಗಾಯ

ಬೆಂಗಳೂರು, ಜೂನ್ 22 : ಬೆಂಗಳೂರಿನ ಜಯನಗರದಲ್ಲಿ ನಡೆದ ಮಹಿಳೆ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯನ್ನು ಬಂಧಿಸಲಾಗಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಆತ ಮಕ್ಕಳ ಮೇಲೆ ಗುಂಡು ಹಾರಿಸಿದ್ದಾನೆ. ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗುರುವಾರ ರಾತ್ರಿ ಜಯನಗರದಲ್ಲಿ ಸಹನಾ ಎಂಬ ಮಹಿಳೆ ಹತ್ಯೆ ನಡೆದಿತ್ತು. ಶುಕ್ರವಾರ ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಗಣೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಸಹನಾ ಮೇಲೆ ಗುಂಡು ಹಾರಿಸಿ ಗಣೇಶ್ ಹತ್ಯೆ ಮಾಡಿದ್ದರು.

ಕನಕಪುರ ರಸ್ತೆಯಲ್ಲಿ ಇಂದು ಗಣೇಶ್ ಬಂಧಿಸಲಾಗಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಆತ ಮಕ್ಕಳ ಮೇಲೆ ಗುಂಡು ಹಾರಿಸಿದ್ದಾರೆ. ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Twist to Jayanagar house wife murder case : Husband arrested

ಉದ್ಯಮಿಯ ನಷ್ಟದ ಕಥೆ : ಗಣೇಶ್ ಮೂಲತಃ ಸಕಲೇಶಪುರದವರು. ಉದ್ಯಮಿಯಾಗಿದ್ದು ಕನಕಪುರ ರಸ್ತೆಯಲ್ಲಿ ಹರ್ಬಲ್ ವುಡ್ ಫಾರ್ಮ್‌ ಹೌಸ್ ಎಂಬ ರೆಸಾರ್ಟ್‌ ಹೊಂದಿದ್ದಾರೆ. ಕಳೆದ 2 ವರ್ಷದಿಂದ ರೆಸಾರ್ಟ್ ನಷ್ಟದಲ್ಲಿತ್ತು. ಆದ್ದರಿಂದ, ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದರು.

ರೆಸಾರ್ಟ್‌ ಮಾರಾಟ ಮಾಡಿ ಸಾಲ ತೀರಿಸಲು ಪ್ರಯತ್ನ ನಡೆಸಿದ್ದರು. ಆದರೆ, ರೆಸಾರ್ಟ್ ಮಾರುವ ವಿಚಾರದಲ್ಲಿ ಪತ್ನಿ ಸಹನಾ ಜೊತೆ ಜಗಳವಾಡಿದ್ದರು. ಸಹನಾ ರೆಸಾರ್ಟ್ ಮಾರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಇಬ್ಬರ ನಡುವೆ ಈ ವಿಚಾರಕ್ಕೆ ಜಗಳ ನಡೆದಿದೆ.

ಗುರುವಾರ ರಾತ್ರಿ ಸಹ ಈ ವಿಚಾರಕ್ಕೆ ದಂಪತಿಗಳ ನಡುವೆ ಜಗಳ ನಡೆದಿದೆ. ಗಣೇಶ್ ಲೈಸೆನ್ಸ್ ಪಡೆಯದೇ ಬಂದೂಕು ಇಟ್ಟುಕೊಂಡಿದ್ದ. ಅದರಿಂದ ಗುಂಡು ಹಾರಿಸಿ ಪತ್ನಿಯನ್ನು ಕೊಲೆ ಮಾಡಿದ್ದ. ನಂತರ ಮಕ್ಕಳನ್ನು ಕರೆದುಕೊಂಡು ರೆಸಾರ್ಟ್‌ಗೆ ತೆರಳಿದ್ದ.

ಶುಕ್ರವಾರ ಬೆಳಗ್ಗೆ ಗಣೇಶ್ ಕಾರಿನ ನಂಬರ್ ಸಹಾಯದಿಂದ ಆತನನ್ನು ಪತ್ತೆ ಹಚ್ಚಿದ ಪೊಲೀಸರು ಇಂದು ಬಂಧಿಸಲು ಹೋಗಿದ್ದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ಆತ ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸಿದ್ದ. ಮಕ್ಕಳ ಕಾಲಿಗೆ ಗುಂಡು ತಗುಲಿತ್ತು.

ಪೊಲೀಸರು ಅಂತಿಮವಾಗಿ ಗಣೇಶ್‌ನನ್ನು ಬಂಧಿಸಿದ್ದು, ಗಾಯಗೊಂಡಿದ್ದ ಮಕ್ಕಳನ್ನು ಕನಕಪುರ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸಹನಾ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದ್ದು, ಆಕೆಯ ದೇಹದಲ್ಲಿ 4 ಗುಂಡುಗಳು ಪತ್ತೆಯಾಗಿವೆ.

ಗಣೇಶ್ ಸಹನಾ ದಂಪತಿಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಗಂಡು ಮಕ್ಕಳಿದ್ದರೂ ಮತ್ತೊಂದು ಹೆಣ್ಣು ಮಗುವನ್ನು ಅವರು ದತ್ತು ಪಡೆದಿದ್ದರು. ಒಂದು ಗಂಡು ಮಗು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದಾರೆ. ಗಂಡು ಮತ್ತು ಹೆಣ್ಣು ಮಕ್ಕಳು ಗಣೇಶ್ ಜೊತೆಗಿದ್ದು ಅವರ ಮೇಲೆ ಗುಂಡು ಹಾರಿಸಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+