ಡೇರಿ ವೃತ್ತ-ನಾಗವಾರ ಮೆಟ್ರೋ ಸುರಂಗ ಮಾರ್ಗ ಕಡಿತ?

Recommended Video

      ಬೆಂಗಳೂರಿನ ಡೇರಿ ವೃತ್ತ - ನಾಗವಾರದ ಮೆಟ್ರೋ ಸುರಂಗ ಮಾರ್ಗ ಕಡಿತ | Oneindia Kannada

      ಬೆಂಗಳೂರು, ಫೆಬ್ರವರಿ 22 : ಡೇರಿ ವೃತ್ತ ಮತ್ತು ನಾಗವಾರ ನಡುವಿನ 13ಕಿ.ಮೀ ಸುರಂಗ ಮಾರ್ಗದ ಅಂತರವನ್ನು ಕಡಿಮೆ ಮಾಡಲು ಬಿಎಂಆರ್ ಸಿಎಲ್ ಚಿಂತನೆ ನಡೆಸಿದೆ.

      ಅಂದಾಜಿನ ಯೋಜನಾ ವೆಚ್ಚಕ್ಕಿಂತ ಸಲ್ಲಿಕೆಯಾದ ಟೆಂಡರ್ ಮೊತ್ತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಡೇರಿ ವೃತ್ತ ಮತ್ತು ನಾಗವಾರ ಸುರಂಗ ಮಾರ್ಗದ ಅಂತರವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಇದರಿಂದಾಗಿ ನಿಗಮಕ್ಕೆ ಪ್ರತಿ ಕಿ.ಮೀಗೆ 308-310 ಕೋಟಿ ರೂ ಉಳಿತಾಯವಾಗಲಿದ್ದು, ಪ್ರಸ್ತುತ ಕರೆದಿರುವ ಟೆಂಡರ್ ರದ್ದುಗೊಳಿಸಿ ಹೊಸ ಟೆಂಡರ್ ಕರೆಯುವ ಕುರಿತು ಆಸಕ್ತಿ ತಾಳಿದೆ.

      3 ಸಾವಿರ ಕೋಟಿ ರೂ. ಹೆಚ್ಚಳ: ಮೆಟ್ರೋ ಮೊದಲನೇ ಹಂತದಲ್ಲಿ 4 ಕಿ.ಮೀ ಎರಡು ಸುರಂಗ ಮಾರ್ಗ ನಿರ್ಮಾಣವಾಗಿತ್ತು. 2 ನೇ ಹಂತದಲ್ಲಿ ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ ಡೇರಿ ವೃತ್ತದಿಂದ ನಾಗವಾರ ನಡುವೆ 13 ಕಿ.ಮೀ ಸುರಂಗ ಮಾರ್ಗವಿರಲಿದೆ. ಇದು ಅತಿ ಉದ್ದದ ಸುರಂ ಮಾರ್ಗವಾಗಿದೆ. ಕಾಮಗಾರಿಗೆ 5,047 ಕೋಟಿ ರೂ.ಗಳ ವೆಚ್ಚವನ್ನು ನಿಗಮ ಅಂದಾಜಿಸಿತ್ತು.

      ಸುರಂಗ ಮಾರ್ಗದಲ್ಲಿ ಪ್ರಮುಖ ಬದಲಾವಣೆ ಏನು

      ಸುರಂಗ ಮಾರ್ಗದಲ್ಲಿ ಪ್ರಮುಖ ಬದಲಾವಣೆ ಏನು

      ಶೀಘ್ರವಾಗಿ ಕಾಮಗಾರಿ ಮುಗಿಸಲು ಮೊದಲನೇ ಟೆಂಡರ್ ಕರೆಯುವಾಗ 13 ಕಿ.ಮೀ ಸುರಂಗ ಮಾರ್ಗವನ್ನು4 ಪ್ಯಾಕೇಜ್ ಗಳಾಗಿ ವಿಭಜಿಸಲಾಗಿತ್ತು. ಎಡರನೇ ಟೆಂಡರ್ ವೇಳೆ 2 ಪ್ಯಾಕೇಜ್ ನಲ್ಲಿ ನೀಡಲು ನಿಗಮ ಆಲೋಚಿಸಿದೆ. ಜತೆಯಲ್ಲೇ ಸುರಂಗ ಮಾರ್ಗದ ಉದ್ದವನ್ನು ಕಡಿತಗೊಳಸಲು ಆಲೋಚಿಸಿದೆ. ಪ್ರಸ್ತುತ ಪ್ರತಿ ಕಿ.ಮೀ ಸುರಂಗ ಮಾರ್ಗ ಕಾಮಗಾರಿಗೆ 500 ಕೋಟಿ ರೂ ಮತ್ತು ಎಲೆವೇಟೆಡ್ ಗೆ 192 ಕೋಟಿ ರೂ ವೆಚ್ಚವಾಗುತ್ತಿದೆ ಕನಿಷ್ಠ 2-3 ಕಿ.ಮೀ ಕಡಿಮೆಯಾದರೂ ನಿಗಮಕ್ಕೆ ಭಾರಿ ಉಳಿತಾಯವಾಗಲಿದೆ.

      ಏರ್ ಪೋರ್ಟ್ ಮಾರ್ಗಕ್ಕೆ ಅಡ್ಡಿ

      ಏರ್ ಪೋರ್ಟ್ ಮಾರ್ಗಕ್ಕೆ ಅಡ್ಡಿ

      ಡೇರಿ ವೃತ್ತ-ನಾಗವಾರ ಮೆಟ್ರೋ ಮಾರ್ಗ ನಿಮಾಣಗದೆ ನಾಗವಾರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲ. ಒಂದಕ್ಕೊಂದು ಸರಪಳಿಯಂತೆ ಈ ಮಾರ್ಗ ಜೋಡಣೆಯಾಗುತ್ತಿದ್ದು, ಸುರಂಗ ಮಾರ್ಗ ವಿಳಂಬವಾಗುತ್ತಿರುವುದು ಯೋಜನೆ ಮೇಲೆಯೇ ಪರಿಣಾಮ ಬೀರಲಿದೆ.

      ಇಐಬಿಗೆ ಮಾಹಿತಿ

      ಇಐಬಿಗೆ ಮಾಹಿತಿ

      ಗೊಟ್ಟಿಗೆರೆ-ನಾಗವಾರ ಮೆಟ್ರೋ ಕಾಮಗಾರಿಗಾಗಿ ಬಿಎಂಆರ್ ಸಿಎಲ್ ಯುರೋಪಿಯನ್ ಇನ್ವೆಸ್ಟಮೆಂಟ್ ಬ್ಯಾಂಕ್ ನಿಂದ 3,800 ಕೋಟಿ ರೂ ವರೆಗೆ ಸಾಲ ಪಡೆದುಕೊಳ್ಳುತ್ತಿದೆ. ಹೀಗಾಗಿ ಇಬಿಐ ಟೆಂಡರ್ ನಿರ್ಧಾರದ ಹಕ್ಕು ಹೊಂದಿದೆ.

      ನಿಗಮದ ಟೆಂಡರ್ ಪರಿಶೀಲನಾ ಸಮಿತಿ, ಕಂಪನಿಗಳು ಸಲ್ಲಿಸಿರುವ ಬಿಡ್ ಮೊತ್ತದ ಬಗ್ಗೆ ಚರ್ಚೆ ನಡೆಸುತ್ತಿವೆ. ಬಿಡ್ ಮಾಹಿತಿಯನ್ನು ಇಐಬಿಗೆ ಕಳುಹಿಸಿ ಸಲಹೆ ಕೇಳುತ್ತೇವೆ. ನಂತರವಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

      ಟೆಂಡರ್ ನಲ್ಲಿ ಏನಿತ್ತು

      ಟೆಂಡರ್ ನಲ್ಲಿ ಏನಿತ್ತು

      ತಲಾ3.3 ಕಿ.ಮೀಟರ್ ನಂತೆ4 ಪ್ಯಾಕೇಜ್ ಗಳಾಗಿ ವಿಭಜಿಸಿ ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ, ಎಲ್ ಆಂಡ್ ಟಿ, ಆಫ್ಕಾನ್ಸ್, ಗ್ಲೂಯರ್ ಮ್ಯಾಕ್ ಮತ್ತು ಐಟಿಡಿ ಸೆಂ ಕಂಪನಿಗಳು ಒಟ್ಟಾರೆ 8 ಸಾವಿರ ಕೋಟಿ ರೂ ಮೊತ್ತದ ಕನಿಷ್ಠ ಬಿಡ್ ಸಲ್ಲಿಸಿದ್ದವು. ಇದು ನಿಗಮದ ಅಂದಾಜು ವೆಚ್ಚವನ್ನೇ ಉಲ್ಟಾ ಮಾಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+