ಗಾಳಿ ಇಲ್ಲ ಮಳೆ ಇಲ್ಲ, ನೋಡುತ್ತಿದ್ದಂತೆ ಶಾಲಾ ಬಸ್ ಮೇಲೆ ಉರುಳಿದ ಮರ
ಬೆಂಗಳೂರು, ಅಕ್ಟೋಬರ್ 14: ಶಾಲೆ ಮುಗಿಸಿ ಮನೆಗೆ ಮಕ್ಕಳನ್ನು ಬಿಡಲು ಹೊರಟಿದ್ದ ಶಾಲಾ ಬಸ್ ಮೇಲೆ ನೋಡ ನೋಡುತ್ತಿದ್ದಂತೆಯೇ ಮರ ಉರುಳಿದ್ದು, ಅದೃಷ್ಟವಶಾತ್ ಮಕ್ಕಳು ಪಾರಾಗಿದ್ದಾರೆ.
ವರ್ತೂರಿನ ಗುಂಜೂರು ಮುಖ್ಯ ರಸ್ತೆಯ ಬಳಿ ಘಟನೆ ನಡೆದಿದೆ. ಶಾಲೆಯಿಂದ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ಸಿನ ಮೇಲೆ ಮರ ಉರುಳಿದೆ. ಆಶ್ಚರ್ಯವೆಂದರೆ ಗಾಳಿಯೂ ಇಲ್ಲ ಮಳೆಯೂ ಇಲ್ಲ ಏಕಾಏಕಿ ದೊಡ್ಡ ಮರ ಬಿದ್ದಿರುವುದು ಕೆಲಕಾಲ ಆತಂಕವನ್ನು ಸೃಷ್ಟಿಸಿತ್ತು.
ಬಸ್ಸಿನಲ್ಲಿ 30ಕ್ಕೂ ಹೆಚ್ಚಿನ ಮಕ್ಕಳಿದ್ದರು. ಅದೃಷ್ಟವಶಾತ್ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ , ನಿರ್ವಾಹಕನಿಗೆ ಮಾತ್ರ ಸ್ವಲ್ಪ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಸ್ ಸಂಪೂರ್ಣ ಜಖಂ ಆಗಿದ್ದು, ಮಕ್ಕಳನ್ನು ರಕ್ಷಿಸಲಾಗಿದೆ, ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನ ನಡೆಸುತ್ತಿದ್ದಾರೆ. ಮಕ್ಕಳನ್ನು ಅವರವರ ಮನೆಗಳಿಗೆ ಸುರಕ್ಷಿತವಾಗಿ ಕಳುಹಿಸಿಕೊಡಲಾಗುತ್ತಿದೆ.












Click it and Unblock the Notifications