ಬೆಂಗಳೂರಿನಲ್ಲಿ ಇಂದಿನಿಂದ ಟ್ರಾವೆಲ್ ದುಬಾರಿ: ಟ್ರಾಫಿಕ್ ಜಾಮ್ ಕೂಡ ಜಾಸ್ತಿ!

ಬೆಂಗಳೂರಿನಲ್ಲಿ ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ಏಕಕಾಲಕ್ಕೆ ಹಲವು ಸಮಸ್ಯೆಗಳು ಎದುರಾಗಿವೆ. ಬೆಂಗಳೂರಿನಲ್ಲಿ ಪ್ರಯಾಣ ಮಾಡುವುದು ಈಗ ಎಲ್ಲಾ ಕಡೆಗಳಿಂದಲೂ ದುಬಾರಿ ಎನ್ನುವಂತೆ ಆಗಿದೆ. ಕಳೆದ 6ರಿಂದ 8 ತಿಂಗಳ ಅವಧಿಯಲ್ಲಿ ಸಾರಿಗೆಗೆ ಭಾರೀ ಪೆಟ್ಟು ಬಿದ್ದಿದೆ ಅಂತಲೇ ಹೇಳಲಾಗುತ್ತಿದೆ. ಮೊದಲಿಗೆ ರಾಜ್ಯ ಸರ್ಕಾರವು ಬಸ್ ಹಾಗೂ ಮೆಟ್ರೋ ಟಿಕೆಟ್ ಬೆಲೆಯನ್ನು ಹೆಚ್ಚಿಸಿತ್ತು. ಇದಾದ ನಂತರದಲ್ಲಿ ಬೈಕ್ ಟ್ಯಾಕ್ಸ್‌ ಬ್ಯಾನ್ ಮಾಡಲಾಗಿದೆ. ಇದೀಗ ಬೆಂಗಳೂರಿನ ಟೋಲ್ ಶುಲ್ಕ ಹೆಚ್ಚಳವಾಗಿದೆ. ಇದರೊಂದಿಗೆ ಕೆಲವು ಆಟೋ ಚಾಲಕರು ದುಬಾರಿ ಶುಲ್ಕ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪವಿದೆ. ಈ ನಡುವೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲಯೂ ದುಬಾರಿಯಾಗಿದೆ.

ಕರ್ನಾಟಕದಲ್ಲಿ ವಿವಿಧ ಕಾರಣಗಳಿಗೆ ಜನ ಹೊರಗೆ ಓಡಾಡುವುದೇ ಕಷ್ಟ ಎನ್ನುವಂತೆ ಇದೆ. ಬೆಂಗಳೂರಿನಲ್ಲಿ ಯಾವ ಸಾರಿಗೆಯೂ ಸಂಪೂರ್ಣ ಸಂಪರ್ಕವನ್ನು (ಎಂಡ್ ಟು ಎಂಡ್ ಕನೆಕ್ಟಿವಿಟಿ) ಹೊಂದಿಲ್ಲ. ಅಂದರೆ ನೀವು ಬಿಎಂಟಿಸಿ ಅಥವಾ ಮೆಟ್ರೋದಲ್ಲಿ ಹೋಗಬೇಕಾದರೂ ಎಲ್ಲಾ ಕಡೆಯೂ ಸೇವೆ ಇಲ್ಲ. ಸ್ವಂತ ಬೈಕ್ ಅಥವಾ ಕಾರು ಇಲ್ಲದೆ ಇರುವವರು ಹಾಗೂ ಮಧ್ಯಮ ವರ್ಗದವರು ಎರಡು ಸೇವೆಯನ್ನು ಬಳಸಬೇಕು. ಉದಾ: ಬೆಂಗಳೂರಿನ ಮಲ್ಲೇಶ್ವರದ ಒಳ ಪ್ರದೇಶಕ್ಕೆ ಹೋಗಬೇಕೆಂದರೆ ಮಂತ್ರಿ ಸ್ಕ್ವೇರ್‌ ಮೆಟ್ರೋ ನಿಲ್ದಾಣವಿದೆ. ಮುಖ್ಯರಸ್ತೆಗಳಲ್ಲಿ ಬಸ್ ಸೇವೆ ಇದೆಯಾದರೂ ಒಳಗೆ ಇಲ್ಲ. ಶ್ರೀರಾಮಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪರಿಸ್ಥಿತಿಯೂ ಇದೇ ಆಗಿದೆ. ಈ ನಡುವೆ ಪ್ರಯಾಣ ಮಾಡುವುದಕ್ಕೆ ಜನ ಅನಿವಾರ್ಯವಾಗಿ ಆಟೋ ಅವಲಂಬಿಸಿದ್ದಾರೆ.

Travel in Bengaluru will be more expensive from july 01 Traffic jams will also increase

ಎರಡು ಮೂರು ಸಾರಿಗೆ ಸೇವೆ ಬಳಸುವುದಕ್ಕಿಂತ ಆಟೋ ಬಳಸುವುದು ಉತ್ತಮ ಎಂದು ಕೆಲವರು ಭಾವಿಸುವುದು ಇದೆ. ಆದರೆ, ಬೈಕ್‌ ಟ್ಯಾಕ್ಸಿ ಬ್ಯಾನ್ ಆದ ಮೇಲೆ ಕೆಲವು ಆಟೋ ಚಾಲಕರು ದುಬಾರಿ ಶುಲ್ಕವನ್ನು ವಿಧಿಸುತ್ತಿದ್ದಾರೆ ಎನ್ನುವ ಆರೋಪವೂ ಇದೆ. ಈ ನಡುವೆ ಪ್ರಮುಖ ಮಾರ್ಗಗಳಲ್ಲಿ ಟೋಲ್ ಶುಲ್ಕವನ್ನೂ ಹೆಚ್ಚಳ ಮಾಡಲಾಗಿದೆ.

ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಟೋಲ್‌ವೇ ಶುಲ್ಕವನ್ನು ಹೆಚ್ಚಿಸಲಾಗಿದೆ. ನಗರ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಎಲೆಕ್ಟ್ರಾನಿಕ್ಸ್ ಸಿಟಿ ಮಾರ್ಗವಾಗಿ ಕರ್ನಾಟಕದಿಂದ ತಮಿಳುನಾಡು ಗಡಿಗೆ ಅಂದರೆ ಅತ್ತಿಬೆಲೆ ಮಾರ್ಗವಾಗಿ ಹಾದು ಹೋಗುವ ಪ್ರಯಾಣಿಕರಿಗೆ ಇದು ಅನ್ವಯವಾಗಲಿದೆ. ಇನ್ನು ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿರುವ ಟೋಲ್ ಶುಲ್ಕ ಹಾಗೂ ಅತ್ತಿಬೆಲೆ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಟೋಲ್ ಬೆಲೆ ಹೆಚ್ಚಾಗಿದೆ. ಇದು ಇಂದಿನಿಂದಲೇ ಜಾರಿಗೆ ಬರುತ್ತಿದೆ (ಜುಲೈ 1)ರಿಂದ ಎಂದು ಹೇಳಲಾಗಿದೆ.

ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಳ: ಇನ್ನು ಬೆಂಗಳೂರಿನಲ್ಲಿ ನಿರಂತರವಾಗಿ ಸಾರಿಗೆ ಸೇವೆಗಳಲ್ಲಿ ವ್ಯತ್ಯಾಸವಾಗುತ್ತಿರುವುದು ಟ್ರಾಫಿಕ್ ಜಾಮ್‌ ಹೆಚ್ಚಳಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆ ಬ್ಯಾನ್ ಆದ ಮೇಲೆ ಬೆಂಗಳೂರಿನಲ್ಲಿ ಟ್ರಾಫಿಕ್‌ ಜಾಮ್ ಸಮಸ್ಯೆ ಇನ್ನಷ್ಟು ಹೆಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಬೆಂಗಳೂರಿನಲ್ಲಿ ಮೆಟ್ರೋ ಬೆಲೆಯನ್ನು ಏಕಾಏಕಿ ಶೇ 50% ಗಿಂತಲೂ ಹೆಚ್ಚು ಮಾಡಿದ ಮೇಲೆಯೇ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್‌ ಸಮಸ್ಯೆ ವಿಪರೀತವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಟ್ರಾಫಿಕ್ ಜಾಮ್ ಹೆಚ್ಚಾಗುವ ಆತಂಕವೂ ಇದೆ.

ಆಟೋ ದುಬಾರಿ ಶುಲ್ಕಕ್ಕೆ ಬ್ರೇಕ್‌: ಇನ್ನು ಬೆಂಳೂರಿನಲ್ಲಿ ಕೆಲವು ಆಟೋ ಚಾಲಕರು ದುಬಾರಿ ಶುಲ್ಕವನ್ನು ಪಡೆದುಕೊಳ್ಳುತ್ತಿದ್ದು ಇದಕ್ಕೆ ಕಡಿವಾಣ ಹಾಕುವುದಕ್ಕೆ ಆರ್‌ಟಿಒ ಅಧಿಕಾರಿಗಳು ಮುಂದಾಗಿದ್ದಾರೆ. ದುಬಾರಿ ಶುಲ್ಕವನ್ನು ವಿಧಿಸುವ ಆಟೋ ಚಾಲಕರಿಗೆ ದಂಡ ಹಾಗೂ ಆಟೋಗಳನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+