ಪೊಲೀಸ್ ಪೇದೆಗೆ ಕೊರೊನಾ ಸೋಂಕು, ಟ್ರಾವೆಲ್ ಹಿಸ್ಟರಿ ತಂದಿದೆ ಆತಂಕ

ಬೆಂಗಳೂರು, ಮೇ 5: ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಪೇದೆಯೊಬ್ಬರಿಗೆ ಕೊರೊನಾವೈರಸ್ ಸೋಂಕು ತಗುಲಿದೆ. ಕೊವಿಡ್19 ಪಾಸಿಟಿವ್ ಎಂಬ ವರದಿ ಇಂದು ಬಂದಿದೆ. ಪೊಲೀಸ್ ಕಾನ್ಸ್ ಟೇಬಲ್ ಟ್ರಾವೆಲ್ ಹಿಸ್ಟರಿ ನೋಡಿದರೆ ಬೆಚ್ಚುಬೀಳುವಂತಿದೆ. ನಿನ್ನೆ ಪೇದೆಗಳ ಕೊರೊನಾ ವೈರಸ್ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ ಬೆಂಗಳೂರು ಮೂಲದ ಒಬ್ಬ ಪೇದೆಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ.

ಇವರ ಪ್ರಥಮ ಕಾಂಟ್ಯಾಕ್ಟ್ ಯಾರು ಹುಡುಕಿದರೆ ಅವರ ಮನೆಯಲ್ಲಿ ಹದಿನಾಲ್ಕು ಜನ ಇರುವುದು ಕಂಡು ಬಂದಿದೆ. ಈ ಪೈಕಿ ಮೂವರು ಉದ್ಯೋಗಸ್ಥರಾಗಿದೆ. ಇವರ ಅತ್ತಿಗೆ ಬೆಂಗಳೂರಿನ ವಿಕ್ಟೋರಿಯಾ ಹಾಸ್ಪಿಟಲ್ ನಲ್ಲಿ ವೈದ್ಯರಾಗಿದ್ದು, ಕೊವಿಡ್19 ವಿಶೇಷ ವಾರ್ಡ್ ಸಂಪರ್ಕದಿಂದಾಗಿ ಪೇದೆಗೆ ವೈರಸ್ ಹರಡಿರುವ ಶಂಕೆ ವ್ಯಕ್ತವಾಗಿದೆ.

ಇದಲ್ಲದೆ, ಹಸಿರುವಲಯ ಎಂದು ಗುರುತಿಸಿಕೊಂಡಿರುವ ಚಾಮರಾಜನಗರ, ಕೊಳ್ಳೇಗಾಲ ಹಾಗೂ ಮಳವಳ್ಳಿಗೆ ಇತ್ತೀಚೆಗೆ ಭೇಟಿ ನೀಡಿದ್ದಾರೆ. ಕಾನ್ಸ್ ಟೇಬಲ್ ಅವರ ಸೆಕೆಂಡರಿ ಕಾಂಟ್ಯಾಕ್ಟ್ ಏನಾಗಿರಬಹುದು ಎಷ್ಟಾಗಿರಬಹುದು ಇನ್ನು ಯಾರ್ಯಾರಿಗೆ ವೈರಸ್ ಅಂಟಿದೆ ಎನ್ನುವ ಆತಂಕ ಎದುರಾಗಿದ್ದು, ಈ ಬಗ್ಗೆ ಆರೋಗ್ಯ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೇದೆ ಜೊತೆಗಿದ್ದ ಕುಟುಂಬಸ್ಥರು, ಬಂಧು ಮಿತ್ರರು, ಟ್ರಾವೆಲ್ ಹಿಸ್ಟರಿ ಪ್ರಕಾರ ಸಿಗುವ ಸೆಕೆಂಡರಿ ಕಾಂಟ್ಯಾಕ್ಟ್ ವ್ಯಕ್ತಿಗಳನ್ನು ಹುಡುಕಿ ಕ್ವಾರಂಟೈನ್ ಮಾಡಬೇಕಾಗಿದೆ.

Bengaluru: A Police constable tested positive with Covid19, his travel history

ಕಳೆದ 24 ಗಂಟೆಗಳಲ್ಲಿ 22 ಹೊಸ ಸೋಂಕಿತರು ಪತ್ತೆಯಾಗಿದ್ದು, ದಾವಣಗೆರೆಯಲ್ಲಿ ಅತಿಹೆಚ್ಚು 12 ಪ್ರಕರಣಗಳು ದೃಢಪಟ್ಟಿದೆ. ಬೆಂಗಳೂರಿನ ಪೇದೆ ಸೇರಿದಂತೆ 3 ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 673ಕ್ಕೇರಿದೆ. ಸೋಂಕಿನಿಂದ ಈವರೆಗೆ 30 ಮಂದಿ ಮೃತಪಟ್ಟಿದ್ದು, 331 ಜನರು ಗುಣಮುಖರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+