ಕೋಲಾರ- ಬೆಂಗಳೂರು ನಡುವೆ ಭಾಗಶಃ ರೈಲು ಸಂಚಾರ ಸ್ಥಗಿತ, ಏಕೆ?, ವಿವರ ಇಲ್ಲಿದೆ

ಬೆಂಗಳೂರು, ಜನವರಿ, 23: ಕಾಮಗಾರಿ ಹಿನ್ನೆಲೆಯಲ್ಲಿ ಕುಪ್ಪಂ- ಕೆಆರ್‌ಎಸ್‌ ಬೆಂಗಳೂರು ನಡುವಿನ ಮೆಮು ರೈಲು ಹಾಗೂ ಕೋಲಾರ- ಬೆಂಗಳೂರು ನಡುವೆ ಸಂಚರಿಸುವ ಡೆಮು ರೈಲುಗಳ ಸಂಚಾರವನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ ಎಂದು ನೈಋುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಹಾಗಾದರೆ ಯಾವ ರೈಲು ಎಷ್ಟು ದಿನಗಳವರೆಗೆ ರದ್ದಾಗಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಲೈನ್‌ ಬ್ಲಾಕ್‌ ಮತ್ತು ಪವರ್‌ ಬ್ಲಾಕ್‌ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕುಪ್ಪಂ- ಕೆಆರ್‌ಎಸ್‌ ಬೆಂಗಳೂರು ನಡುವಿನ ಮೆಮು ರೈಲು ಹಾಗೂ ಕೋಲಾರ- ಬೆಂಗಳೂರು ನಡುವೆ ಸಂಚರಿಸುವ ಡೆಮು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ರೈಲು ನಂಬರ್‌ 06292 ಕುಪ್ಪಂ-ಕೆಎಸ್‌ಆರ್‌ ಬೆಂಗಳೂರು ನಡುವಿನ ಸಂಚಾರವನ್ನು, ಜನವರಿ 25ರವರೆಗೆ ಕುಪ್ಪಂ- ಬಂಗಾರಪೇಟೆ ನಡುವೆ ರದ್ದುಗೊಳಿಸಲಾಗಿದೆ. ಈ ಸಮಯದಲ್ಲಿ ಬಂಗಾರಪೇಟೆಯಿಂದ ರೈಲುಗಳು ಸಂಚರಿಸಲಿವೆ.

ರೈಲು ನಂಬರ್‌ 06382 ಮತ್ತು 06388 ಕೋಲಾರ- ಬೆಂಗಳೂರು ಕಂಟೋನ್ಮೆಂಟ್‌ ನಡುವೆ ಸಂಚರಿಸುವ ಡೆಮು ರೈಲು ಸಂಚಾರವನ್ನು ಫೆಬ್ರವರಿ 4ರವರೆಗೆ ಬೈಯಪ್ಪನಹಳ್ಳಿ- ಬೆಂಗಳೂರು ಕಂಟೋನ್ಮೆಂಟ್‌ ಮಧ್ಯೆ ರದ್ದುಗೊಳಿಸಲಾಗಿದೆ. ಈ ಅವಧಿಯಲ್ಲಿ ಬೈಯಪ್ಪನಹಳ್ಳಿನಿಂದ ರೈಲು ಸಂಚರಿಸಲಿದೆ.

 ಬೈಯಪ್ಪನಹಳ್ಳಿಯಿಂದ ಸಂಚಾರ

ಬೈಯಪ್ಪನಹಳ್ಳಿಯಿಂದ ಸಂಚಾರ

ಇನ್ನು ರೈಲು ನಂಬರ್‌ 06388 ಬೆಂಗಳೂರು ಕಂಟೋನ್ಮೆಂಟ್‌ - ಕೋಲಾರ ನಡುವೆ ಸಂಚರಿಸುವ ಡೆಮು ರೈಲು ಸೇವೆಯಲ್ಲಿ ಫೆಬ್ರವರಿ 4 ರವರೆಗೆ ಬೆಂಗಳೂರು ಕಂಟೋನ್ಮೆಂಟ್‌ - ಬೈಯಪ್ಪನಹಳ್ಳಿ ನಡುವಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಈ ಅವಧಿಯಲ್ಲಿ ಬೈಯಪ್ಪನಹಳ್ಳಿಯಿಂದ ರೈಲು ಸಂಚಾರ ಆರಂಭಗೊಳ್ಳಲಿದೆ.

 ಪ್ರವಾಸ ಪ್ಯಾಕೇಜ್‌ ವಿವರ ಇಲ್ಲಿದೆ

ಪ್ರವಾಸ ಪ್ಯಾಕೇಜ್‌ ವಿವರ ಇಲ್ಲಿದೆ

ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (IRCTC)ಭಾರತವನ್ನು ನೋಡಲು ಬಯಸುವ ಬಜೆಟ್‌ ಸ್ನೇಹಿ ಪ್ರವಾಸಿಗರಿಗೆ ಪ್ರವಾಸ ಪ್ಯಾಕೇಜ್‌ಗಳನ್ನು ಒದಗಿಸುತ್ತಿದೆ. ಈ ಪ್ಯಾಕೇಜ್‌ ಪ್ರವಾಸವನ್ನು ಪ್ರೇಮಿಗಳು ಹಾಗೂ ನವದಂಪತಿಗಳಿಗೆ ಮೀಸಲಿರಿಸಲಾಗಿದೆ. ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳು ಮತ್ತು ಸೌಲಭ್ಯಗಳನ್ನು ಬಳಸಿಕೊಂಡು ವಿವಿಧ ಪ್ರವಾಸಿ ಸ್ಥಳಗಳಿಗೆ ಪ್ರಯಾಣಿಸಲು ಸುಲಭವಾಗುವಂತೆ ಈ ಪ್ರವಾಸ ಪ್ಯಾಕೇಜ್‌ಗಳನ್ನು ಮಾಡಲಾಗಿದೆ. ಐಆರ್‌ಸಿಟಿಸಿ ನೀಡುವ ಟೂರ್ ಪ್ಯಾಕೇಜ್‌ಗಳು ಮಾರುಕಟ್ಟೆಯಲ್ಲಿನ ಇತರ ಪ್ರವಾಸ ಪ್ಯಾಕೇಜ್‌ಗಳಿಗಿಂತ ಕಡಿಮೆ ವೆಚ್ಚದಲ್ಲಿರುತ್ತವೆ ಎಂದು ಡಿಎನ್‌ಎ ವರದಿ ಮಾಡಿದೆ.

 ಪ್ರೇಮಿಗಳಿಗೆ ಸೂಕ್ತವಾದ ಪ್ಯಾಕೇಜ್‌

ಪ್ರೇಮಿಗಳಿಗೆ ಸೂಕ್ತವಾದ ಪ್ಯಾಕೇಜ್‌

ಗೋವಾಕ್ಕೆ 5 ದಿನದ ವ್ಯಾಲೆಂಟೈನ್ಸ್ ಡೇ ವಿಶೇಷ ಪ್ರವಾಸ ಪ್ಯಾಕೇಜ್ ಐಆರ್‌ಸಿಟಿಸಿಯ ಹೆಚ್ಚು ಇಷ್ಟವಾದ ರಜೆಯ ಪ್ಯಾಕೇಜ್‌ಗಳಲ್ಲಿ ಒಂದಾಗಿದೆ. ಗೋವಾ ಯುವಜನರು ಮತ್ತು ನವ ದಂಪತಿಗೆ ಇಷ್ಟವಾದ ಪವಾಸಿ ತಾಣವಾಗಿದೆ. ಇದು ನಿಮ್ಮ ಮಹತ್ವದ ಇತರರೊಂದಿಗೆ ಪ್ರೇಮಿಗಳ ದಿನವನ್ನು ಕಳೆಯಲು ಸೂಕ್ತವಾದ ಸ್ಥಳವಾಗಿದೆ. ಈ ಪ್ರವಾಸದ ಪ್ಯಾಕೇಜ್ 4 ರಾತ್ರಿಗಳು ಮತ್ತು 5 ದಿನಗಳವರೆಗೆ ಇರುತ್ತದೆ. ಜೊತೆಗೆ ರೌಂಡ್ ಟ್ರಿಪ್ ಫ್ಲೈಟ್ ಅನ್ನು ಒಳಗೊಂಡಿದೆ. ಪ್ರವಾಸದ ಪ್ಯಾಕೇಜ್ ಫೆಬ್ರವರಿ 11 ರಂದು ಪ್ರಾರಂಭವಾಗಿ ಫೆಬ್ರವರಿ 15 ರಂದು ಕೊನೆಗೊಳ್ಳಲಿದೆ.

 ಪ್ರವಾಸ ಬೆಳೆಸುವ ಸ್ಥಳಗಳ ವಿವರ

ಪ್ರವಾಸ ಬೆಳೆಸುವ ಸ್ಥಳಗಳ ವಿವರ

ಪ್ರವಾಸದ ಪ್ಯಾಕೇಜ್‌ನಲ್ಲಿ ಸ್ಥಳೀಯ ಮಾರ್ಗದರ್ಶಿಗಳು ಮತ್ತು ಕ್ಯಾಬ್‌ಗಳ ಜೊತೆಗೆ ಉಪಹಾರ ಮತ್ತು ರಾತ್ರಿಯ ಊಟವನ್ನು ಒಳಗೊಂಡಿರುತ್ತದೆ. ಉತ್ತರ ಮತ್ತು ದಕ್ಷಿಣ ಗೋವಾ ಎರಡನ್ನೂ ಸುತ್ತಿ ನೋಡುವ ಅವಕಾಶವನ್ನು ಒಳಗೊಂಡಿದೆ. ಅಗುಡಾ ಫೋರ್ಟ್, ಸ್ಯಾಂಕ್ವೇರಿಯಂ ಬೀಚ್, ಕ್ಯಾಂಡೋಲಿಮ್ ಬೀಚ್, ಬಾಘಾ ಬೀಚ್, ಬೆಸಿಲಿಕಾ ಆಫ್ ಬೊಮ್ ಜೀಸಸ್ ಚರ್ಚ್, ಸೇಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್, ಮಿರಾಮಾರ್ ಬೀಚ್ ಮತ್ತು ಮಾಂಡೋವಿ ರಿವರ್ ಕ್ರೂಸ್ ಇವೇ ನೋಡಬಹುದಾದ ಕೆಲವು ಪ್ರವಾಸಿ ಆಕರ್ಷಣೆಗಳನ್ನು ಒಳಗೊಂಡಿದೆ. ಪ್ರವಾಸದ ಪ್ಯಾಕೇಜ್‌ನ ಬೆಲೆ ಪ್ರತಿ ವ್ಯಕ್ತಿಗೆ ದರ 27,875 ರೂಪಾಯಿ ಆಗಿದೆ. ಆದರೂ ಎಷ್ಟು ಜನರು ಒಟ್ಟಿಗೆ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ ಎಂಬುದರ ಆಧಾರದ ಮೇಲೆ ಇದು ಬದಲಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+