Namma Metro: ಹಳದಿ ಮಾರ್ಗದ ಡ್ರೈವರ್ ಲೆಸ್ ರೈಲಿನ ಪ್ರಾಯೋಗಿಕ ಸಂಚಾರ, ಡೇಟ್ ಫಿಕ್ಸ್

ಬೆಂಗಳೂರು, ಫೆಬ್ರವರಿ 24: ಬೆಂಗಳೂರಿಗರ ಬಹುನಿರೀಕ್ಷೆಯ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಡ್ರೈವರ್‌ಲೆಸ್ ಮೆಟ್ರೋ ರೈಲು ತಪಾಸಣೆಗೆ ಒಳಗಾಗಲು ಸಿದ್ಧವಾಗಿದೆ. ದೇಶಿಯ ಮೊದಲ ಚಾಲಕ ರಹಿತ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಹಾಗಾದರೆ, ಮೆಟ್ರೋ ರೈಲು ಸುರಕ್ಷತಾ ಆಯುಕ್ತರ (CMRS) ಪರಿಶೀಲನೆ ಬಳಿಕ ಈ ಮಾರ್ಗ ನಮಗೆ ತೆರೆಯುತ್ತದೆಯೋ ಎಂದು ಜನರು ಕೇಳುತ್ತಿದ್ದಾರೆ.

ರೈಲುಗಳ ಪೂರೈಕೆ ವಿಳಂಬದಿಂದ ಕಾರ್ಯಾಚರಣೆ ತಡವಾಗುತ್ತಿರುವ ಹಳದಿ ಮೆಟ್ರೋ ಮಾರ್ಗಕ್ಕೆ ಇದೇ ತಿಂಗಳು 14ರಂದು ಆರು ಬೋಗಿಗಳ ಎರಡನೇ ರೈಲು ಆಗಮಿಸಿದೆ. ಇದು ಚೀನಾದಿಂದ ಕೊಲ್ಕತ್ತಾದ ಟಿಟಾಗರ್ ಘಟಕಕ್ಕೆ ತೆರಳಿ ಅಲ್ಲಿಂದ ಜೋಡಣೆ ಆಗಿದೆ ಬಂದಿದೆ. ಈ ರೈಲಿನ ತಪಾಸಣೆ, ಪ್ರಾಯೋಗಿಕ ಪರಿಶೀಲನೆಗೆ ದಿನಾಂಕ ಫಿಕ್ಸ್ ಮಾಡಲಾಗಿದೆ. ಮತ್ತೊಂದೆಡೆ ಇತರ ರೈಲುಗಳ ಪೂರೈಕೆಗೆ ಕ್ರಮ ವಹಿಸಲಾಗಿದೆ.

Trail Run Date Fix of Driverless Namma Metro Train on Yellow Lline CMRS

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಅಧಿಕಾರಿಗಳು ಫೆಬ್ರವರಿ 14ರಂದು ಹೆಬ್ಬಗೋಡಿ ಮೆಟ್ರೋ ಡಿಪೋದಲ್ಲಿ ಮೆಟ್ರೋ ರೈಲು ಸ್ವೀಕರಿಸಿದರು. ಈಗಾಗಲೇ ರೈಲಿನ ಆಂತರಿಕ ಪರೀಕ್ಷೆಗಳು ಪಾಸಾಗಿವೆ. CMRS ಅಧಿಕಾರಿಗಳ ತಂಡ ಪ್ರಾಯೋಗಿಕ ಸಂಚಾರ ನಡೆಸಿ, ಸುರಕ್ಷತೆ, ಸುಗಮ ಸಂಚಾರವನ್ನು ದೃಢಪಡಿಸಲಿದ್ದಾರೆ.

ಈ ಡ್ರೈವರ್‌ಲೆಸ್ ರೈಲನ್ನು CMRS ಅಧಿಕಾರಿಗಳು ಇಂದು ಸೋಮವಾರ ಫೆಬ್ರವರಿ 24 ರಂದು ಪರಿಶೀಲಿಸಲಿದ್ದಾರೆ. ಇದು ಬರೀ ರೈಲು ತಪಾಸಣೆಯಾಗಿದೆ. ಮುಂದಿನ ತಿಂಗಳು ಮಾರ್ಚ್ ಅಂತ್ಯಕ್ಕೆ ಸಂಪೂರ್ಣ ಹಳದಿ ಮಾರ್ಗದ ಮೌಲ್ಯಮಾಪನ ಮಾಡಲು ಸಮಯ ನಿಗದಿಪಡಿಸಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Trail Run Date Fix of Driverless Namma Metro Train on Yellow Lline CMRS

ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ?

ಈ ಚಾಲಕ ರಹಿತ ರೈಲುಗಳೂ ಸಂವಹನ ಆಧಾರಿತಿ ರೈಲು ನಿಯಂತ್ರಣ (CBTC) ವ್ಯವಸ್ಥೆ ಹೊಂದಿವೆ. ಸಿಗ್ನಲ್ ಬೇಸ್ ಮೇಲೆಯೇ ಚಲಿಸುತ್ತವೆ. ಹಳದಿ ಮಾರ್ಗದ ರೈಲುಗಳು ಇಂಥದ್ದೊಂದು ವ್ಯವಸ್ಥೆ ಹೊಂದಿರುವುದು ಬೆಂಗಳೂರು ಪಾಲಿಗೆ ಇದೇ ಮೊದಲು. ಇದಕ್ಕೆ 'ಚಾಲಕರಹಿತ ತಂತ್ರಜ್ಞಾನ' ಎಂದು ಕರೆಯಲಾಗುತ್ತದೆ. ಹೀಗಿದ್ದರೂ ಸದ್ಯ ಲೋಕೋ ಪೈಲಟ್ ಇಟ್ಟುಕೊಂಡೇ ಚಾಲನೆಗೆ ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ರೈಲು ಆವರ್ತನ ಸಮಯ 90 ಸೆಕೆಂಡ್‌ಗೆ ಇಳಿಕೆ

ಈ ಮಾರ್ಗದಲ್ಲಿ ಬಂದ CBTC ತಂತ್ರಜ್ಞಾನವು ಪ್ರಯಾಣಿಕರ ಕಾಯುವಿಕೆ ಕಡಿಮೆ ಮಾಡುತ್ತದೆ. ಈ ರೈಲುಗಳು ಅವರ್ತನ ಸಮಯವನ್ನು 2.5 ನಿಂದ 3 ನಿಮಿಷದ ಸಮಯವನ್ನು ಕೇವಲ 90 ಸೆಕೆಂಡ್‌ಗಳಿಗೆ ಇಳಿಕೆ ಮಾಡುತ್ತದೆ ಎಂಬ ನಿರೀಕ್ಷೆ ಇದೆ. ಸ್ವಯಂಚಾಲಿತ ರೈಲುಗಳು ವಿನ್ಯಾಸವು ಪ್ರಯಾಣಿಕರಿಗೆ ಇಷ್ಟವಾಗುವಂತಿದೆ.

ಆರ್.ವಿ. ರಸ್ತೆ-ಬೊಮ್ಮಸಂದ್ರದವರೆಗಿನ ಹಳದಿ ಮಾರ್ಗವು 19.15 ಕಿಲೋ ಮೀಟರ್ ಉದ್ದವಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಸೇರಿದಂತೆ ಪ್ರಮುಖ ಬಡಾವಣೆಗಳಿಗೆ ಸಂಪರ್ಕ ಸಾಧಿಸುತ್ತದೆ. ಮಾರ್ಗ, ಕಾಮಗಾರಿ ಎಲ್ಲವು ಮುಗಿದಿದೆ. ಆದರೆ ರೈಲುಗಳ ಪೂರೈಕೆ ವಿಳಂಬ ಕಾರಣದಿಂದ ಪ್ರಯಾಣಿಕರ ಸಂಚಾರ ಪದೇ ಪದೆ ವಿಳಂಬವಾಗುತ್ತಿದೆ.

16 ಎತ್ತರದ ನಿಲ್ದಾಣ: ಸಂಚಾರ ನಿರೀಕ್ಷೆ

ಈ ಮಾರ್ಗವು ಹಸಿರು ಮಾರ್ಗವನ್ನು ಆರ್.ವಿ. ರಸ್ತೆ ನಿಲ್ದಾಣದಲ್ಲಿ ಸಂಪರ್ಕಿಸುತ್ತದೆ. ಇನ್ನು ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಗುಲಾಬಿ ಮಾರ್ಗದೊಂದಿಗೆ ಪರಸ್ಪರ ಸಂಪರ್ಕ ಸಾಧಿಸುತ್ತದೆ. ಒಟ್ಟು 16 ಎತ್ತರದ ನಿಲ್ದಾಣಗಳು ಇವೆ. ಇನ್ಫೋಸಿಸ್, ಬಯೋಕಾನ್ ಕಂಪನಿಗಳಿಗೆ ಸಂಪರ್ಕ ಸಾಧಿಸುವ ಕಾರಣ, ಅನೇಕ ಉದ್ಯೋಗಿಗಳು ಈ ಮಾರ್ಗದ ಮೇಲೆ ಇನ್ನಿಲದ ಭರವಸೆ ಇಟ್ಟುಕೊಂಡಿದ್ದಾರೆ. ಸಂಚಾರ ಕಿರಿ ಕಿರಿ ಇಲ್ಲದೇ, ಹಳದಿ ಮೆಟ್ರೋ ಮಾರ್ಗದಲ್ಲಿ ಓಡಾಡಬಹುದೆಂದು ಭಾವಿಸಿದ್ದಾರೆ. ಆದರೆ ಅವರ ಕನಸು ಯಾವತ್ತು ನನಸಾಗುತ್ತದೋ ಎಂದು BMRCL ತಿಳಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+