• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರ ನಿಯಮ ಉಲ್ಲಂಘನೆ: ಆರ್ ಸಿ ಮೇಲಲ್ಲ, ಡಿಎಲ್ ಮೇಲೆ ಕೇಸು

By Nayana Bj
|
Google Oneindia Kannada News

ಬೆಂಗಳೂರು, ಜನವರಿ 24 : ಬೇರೆಯವರ ವಾಹನ ಪಡೆದು ಸಂಚಾರ ನಿಯಮ ಉಲ್ಲಂಘಿಸುವ ಚಾಲಕರು ಎಚ್ಚರಿಕೆಯಿಂದಿರಬೇಕು. ಏಕೆಂದರೆ ಇನ್ನುಮುಂದೆ ಸಂಚಾರ ನಿಯಮ ಉಲ್ಲಂಘಿಸುವ ಚಾಲಕರ ಚಾಲನಾ ಪರವಾನಗಿ ಆಧರಿಸಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಡಿಎಲ್ ಅಮಾನತಿಗೂ ಶಿಫಾರಸ್ಸು ಮಾಡಲಿದ್ದಾರೆ. ಪ್ರಸ್ತುತ ನಗರ ಸಂಚಾರ ಪೊಲೀಸರು ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ನೋಂದಣಿ ಪತ್ರ( ಆರ್ ಸಿ) ಆಧರಿಸಿ ಪ್ರಕರಣ ದಾಖಲಿಸುತ್ತಿದ್ದಾರೆ. ವಾಹನದ ಮಾಲೀಕ ಬೇರೆ ಇದ್ದು, ಚಾಲಕ ನಿಯಮ ಉಲ್ಲಂಘಿಸಿದರೂ ಮಾಲೀಕನ ವಿರುದ್ಧವೇ ಪ್ರಕರಣ ದಾಖಲಾಗುತ್ತಿದೆ.

ಸಂಚಾರ ದಟ್ಟಣೆ ಮಾಹಿತಿಯುಳ್ಳ ನೂತನ ಆ್ಯಪ್ 'ಟ್ರಾಫಿಕ್ ಅನಲೈಸರ್'ಸಂಚಾರ ದಟ್ಟಣೆ ಮಾಹಿತಿಯುಳ್ಳ ನೂತನ ಆ್ಯಪ್ 'ಟ್ರಾಫಿಕ್ ಅನಲೈಸರ್'

ನಿಯಮ ಉಲ್ಲಂಘನೆ ಪುನರಾವರ್ತನೆಯಾದರೆ ವಾಹನದ ಆರ್ ಸಿ ಅಮಾನತಿಗೆ ಶಿಫಾರಸ್ಸು ಮಾಡಲಾಗುತ್ತಿದೆ. ಚಾಲಕನ ತಪ್ಪಿಗೆ ಮಾಲೀಕ ಅಮಾನತಿ ಶಿಕ್ಷೆ ಅನುಭವಿಸುವುದನ್ನು ತಪ್ಪಿಸುವ ಉದ್ದೇಶದಿಂದ ಇನ್ನುಮುಂದೆ ನಿಯಮ ಉಲ್ಲಂಘನೆ ವೇಳೆ ಚಾಲಕನ ಡಿಎಲ್ ಆಧರಿಸಿ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ರಸ್ತೆಗಳಲ್ಲಿ ನಿರ್ಲಕ್ಷ್ಯದ ಚಾಲನೆ, ಡ್ರಿಂಕ್ ಅಂಡ್ ಡ್ರೈವ್, ಸಿಗ್ನಲ್ ಜಂಪ್, ನೋ ಪಾರ್ಕಿಂಗ್, ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ ಸೇರಿದಂತೆ ಇತರೆ ಸಂಚಾರ ನಿಯಮ ಉಲ್ಲಂಘಿಸಿದಾಗ ಸಂಚಾರ ಪೊಲೀಸರು ವಾಹನದ ಆರ್ ಸಿ ಆಧರಿಸಿ ದಂಡ ವಿಧಿಸುತ್ತಾರೆ.

ಬೆಂಗಳೂರು ನಗರದಲ್ಲಿ ಕಳೆದ ಆರು ದಿನಗಳಲ್ಲಿ 3807 ವಾಹನಗಳನ್ನು ತಪಾಸಣೆ ನಡೆಸಿರುವ ಸಾರಿಗೆ ಇಲಾಖೆ ವಿಶೇಷ ತನಿಖಾ ತಂಡಗಳು, ಸಾರಿಗೆ ನಿಯಮ ಉಲ್ಲಂಘಿಸಿದ560 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, 18 ವಾಹನ ಜಪ್ತಿ ಮಾಡಿದೆ.

English summary
Now onwards traffic police will file the cases against traffic rules violation based on the driving license instead of registration certificate of the vehicle, Department of Transport Commissioner B. Dayanand told reporters in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X