Traffic Violation: 4.12 ಲಕ್ಷ ಕೇಸ್ ದಾಖಲು, ₹22.89 ಕೋಟಿ ದಂಡ, ರಾಜಕೀಯ ಪಕ್ಷಗಳಿಗೆ ಶಾಕ್

ಬೆಂಗಳೂರು, ಮೇ 12: ಕರ್ನಾಟಕ ವಿಧಾನಸಭಾ ಚುನಾವಣೆ 2023 ಪ್ರಯುಕ್ತ ವಿವಿಧ ಪಕ್ಷಗಳನ್ನು ಬೆಂಬಲಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಕಾರ್ಯಕರ್ತರಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಸಂಚಾರಿ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ಪ್ರಚಾರ ವೇಳೆ ಸಾಕಷ್ಟು ಕಡೆ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕೋಟಿ ಕೋಟಿ ದಂಡ ವಿಧಿಸಿದ್ದಾರೆ.

ಚುನಾವಣೆಗಾಗಿ ಬೆಂಗಳೂರಿನಲ್ಲಿ ಭರ್ಜರಿ ರೋಡ್ ಶೋ, ಬೈಕ್ ರ‍್ಯಾಲಿ ನಡೆಸಿ ಪಕ್ಷದ ಪರವಾಗಿ ಮುಖಂಡರು ಮತ್ತು ಕಾರ್ಯಕರ್ತರು ಮತಯಾಚಿಸಿದ್ದರು. ಏಪ್ರಿಲ್ 15ರಿಂದ ಮೇ 10 ರವರೆಗಿನ 25 ದಿನದಲ್ಲಿ ನಗರದಲ್ಲಿ ಸಿಗ್ನಲ್ ಜಂಪ್, ಹೆಲ್ಮೆಟ್ ಇಲ್ಲದೇ ಚಾಲನೆ, ವೇಗದ ಚಾಲನೆ, ತ್ರಿಬಲ್ ರೈಡಿಂಗ್, ಚಲಿಸುವಾಗ ಮೊಬೈಲ್ ಬಳಕೆ ಹೀಗೆ ಸಾಲು ಸಾಲು ಸಂಚಾರಿ ನಿಯಮಗಳ ಉಲ್ಲಂಘನೆ ಆಗಿರುವುದು ಕಂಡು ಬಂದಿದೆ.

traffic rules break

ಇದೆಲ್ಲ ಕಾರಣಗಳಿಂದಾಗಿ ಬೆಂಗಳೂರು ನಗರ ಸಂಚಾರಿ ಪೊಲೀಸರು ಒಟ್ಟು 4.12 ಲಕ್ಷ ರಸ್ತೆ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳನ್ನು ದಾಖಲಿಸಿದ್ದಾರೆ. ಇಷ್ಟು ಪ್ರಕರಣಗಳ ಮೇಲೆ ಒಟ್ಟು 22.89 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.

ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವಾಹನಗಳ ಸಂಖ್ಯೆ ಆಧರಿಸಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ ಒಂದಷ್ಟು ಎಂದಿನಂತೆ ಸಾರ್ವಜನಿಕರ ಪ್ರಕರಣಗಳು ಇವೆ. ಹೆಚ್ಚಾಗಿ ದ್ವಿಚಕ್ರವಾಹನ ಸವಾರರೇ ಹೆಚ್ಚು ಸಂಚಾರ ನಿಯಮ ಉಲ್ಲಂಘಿಸಿದ್ದಾರೆ ಎಂದು ಹೇಳಲಾಗುತ್ತಿದೆ.

traffic rules break

ಕ್ಯಾಮರಾದಲ್ಲಿ ರೂಲ್ಸ್ ಬ್ರೇಕ್ ಸೆರೆ

ಸಂಚಾರ ನಿಯಮ ಉಲ್ಲಂಘನೆಗಳ ಪತ್ತೆಗಾಗಿ ಪೊಲೀಸ್ ಇಲಾಖೆ ನಗರದ ಪ್ರಮುಖ ರಸ್ತೆ, ಜಂಕ್ಷನ್‌ಗಳಲ್ಲಿ ಕ್ಯಾಮರಾ ಅಳವಡಿಸಲಾಗಿದೆ. ಅದರಲ್ಲಿ ಸೆರೆಯಾದ ರೂಲ್ಸ್ ಬ್ರೇಕ್, ವಾಹನ ನೋಂದಣಿ ಸಂಖ್ಯೆ ಆಧಾರದಡಿ ಪ್ರಕರಣ ದಾಖಲಿಸಲಾಗಿದೆ. ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಎಪಿ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರ ಪೈಕಿ ಅನೇಕರು ಸಂಚಾರ ನಿಯಮ ಪಾಲಿಸಿಲ್ಲ. ಪ್ರಚಾರ, ರೋಡ್ ಶೋ ಜೋಶ್ ನಲ್ಲಿ ಮನಬಂದ ಕಡೆಗಳಲ್ಲಿ ಓಡಾಡಿದ್ದಾರೆ. ಈ ವೇಳೆ ರೂಲ್ಸ್ ಬ್ರೇಕ್ ಆಗಿದೆ.

ಸಂಚಾರ ನಿಯಮಗಳು ಗೊತ್ತಿದ್ದರು ಸಹ ಚುನಾವಣೆ ಪ್ರಚಾರ ಭರಾಟೆಯಲ್ಲಿ ಎಲ್ಲ ಪಕ್ಷಗಳ ಕಾರ್ಯಕರ್ತರಿಗೆ ದಂಡ ವಿಧಿಸುವ ಮೂಲಕ ರಾಜಕೀಯ ಪಕ್ಷಗಳಿಗೆ ಟ್ರಾಫಿಕ್ ಪೊಲಿಸರು ಬಿಸಿ ಮುಟ್ಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+