BBMP: ನಿದ್ದೆಗೆ ಜಾರಿದ್ದ ಬಿಬಿಎಂಪಿಯನ್ನ ಎಚ್ಚರಿಸಿದ ಟ್ರಾಫಿಕ್ ಪೊಲೀಸರು- 180 ಅಪಾಯಕಾರಿ ಸ್ಥಳಗಳ ವರದಿ ಸಲ್ಲಿಕೆ

ಬೆಂಗಳೂರು ಆಗಸ್ಟ್ 15: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ರಸ್ತೆಗಳ ಸ್ಥಿತಿ ಹದಗೆಟ್ಟು ಹೋಗುತ್ತಿದೆ. ಕಳೆದ ಎರಡು ದಿನ ರಾತ್ರಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ನೀರಿನಿಂದ ತುಂಬಿ ಹೋಗಿವೆ. ತಗ್ಗು ಪ್ರದೇಶಗಳ ಸ್ಥಿತಿ ಹೇಳ ತೀರದ್ದಾಗಿದೆ. ಇನ್ನೂ ರಸ್ತೆಗಳಲ್ಲಿ ಮಳೆ ನೀರು ತುಂಬಿ ಗುಂಡಿಗಳು ಕಾಣದೆ ವಾಹನ ಸವಾರರು ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ನಗರಗಳಲ್ಲಿ 180 ಅಪಾಯಕಾರಿ ರಸ್ತೆಗಳು ಇರುವ ಬಗ್ಗೆ ಬಿಬಿಎಂಪಿಗೆ ಪೊಲೀಸರು ವರದಿ ನೀಡಿದ್ದಾರೆ.

ಹೌದು... ಬೆಂಗಳೂರಿನಲ್ಲಿ ಅಧಿಕ ಮಳೆಯಾದರೆ ಸಾಕು ರಸ್ತೆಗಳು, ಅಂಡರ್‌ ಪಾಸ್‌ಗಳು ಜಲಾವೃತವಾಗುತ್ತವೆ. ಮಳೆಗೆ ಮರ ಹಾಗೂ ವಿದ್ಯುತ್ ಕಂಬ ಉರುಳುವುದು ಮಾತ್ರವಲ್ಲದೆ, ನಗರದಲ್ಲಿ ಕೆಲ ಅಪಾಯಕಾರಿ ರಸ್ತೆಗಳನ್ನು ಪತ್ತೆ ಮಾಡಲಾಗಿದೆ. ನಗರದಲ್ಲಿ ಮಳೆ ಬಂದಾಗಲೆಲ್ಲಾ ಸಮಸ್ಯೆ ಸೃಷ್ಟಿಯಾಗುವ ಸ್ಥಳಗಳ ಬಗ್ಗೆ ವರದಿ ತಯಾರಿಸಿ ಟ್ರಾಫಿಕ್ ಪೊಲೀಸರು ಬಿಬಿಎಂಪಿಗೆ ನೀಡಿದ್ದಾರೆ. ಈ ವೇಳೆ 180 ಅಪಾಯಕಾರಿ ಸ್ಥಳಗಳನ್ನು ಗುರುತಿಸಲಾಗಿದೆ. ಮಳೆ ಬಂದಾಗ ಆಗುವ ಅವಾಂತರಗಳನ್ನು ಫೋಟೋ ಸಮೇತ ಬಿಬಿಎಂಪಿಗೆ ಪೊಲೀಸರು ನೀಡಿದ್ದಾರೆ.

Police report to BBMP that there are 180 dangerous roads in Bengaluru

ಮಳೆ ಬಂದಾಗ ರಸ್ತೆಗಳಲ್ಲಿ ಮರ, ವಿದ್ಯುತ್ ಕಂಬ ಹಾಗೂ ಮರಗಳು ಬಿದ್ದಾಗ ಬೇಗ ಸಹಾಯಕ್ಕೆ ಬರುವುದು ಪೊಲೀಸರು. ಹೀಗಾಗಿ ಬಿಬಿಎಂಪಿಗೆ ತಿಳಿಯದ ಅಪಾಯಕಾರಿ ಸ್ಥಳಗಳ ಬಗ್ಗೆ ಪೊಲೀಸರಿಗೆ ಹೆಚ್ಚಾಗಿ ತಿಳಿದಿರುತ್ತದೆ. ಇದರಿಂದಾಗಿ ಆ ಸ್ಥಳಗಳನ್ನು ಗುರುತಿಸಿ ಪಟ್ಟಿ ಮಾಡಿ ಪೊಲೀಸರು ಬಿಬಿಎಂಪಿಗೆ ಕಳುಹಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, 'ಸದ್ಯ ಮಳೆ ಅವಾಂತರಗಳ ಬಗ್ಗೆ ಪೊಲೀಸರು ಕೊಟ್ಟಿದ್ದ ಜಾಗಗಳ ಪರಿಶೀಲನೆಗೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಮಳೆ ಬಂದಾಗ ಉಂಟಾಗುವ ಸಮಸ್ಯೆಗಳಿರುವ ಜಾಗಗಳನ್ನು ಅವರು ಗುರುತಿಸಿ ಪಟ್ಟಿ ಮಾಡಿ ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲು ಹೊರಟಿರುವ ಪಾಲಿಕೆ ಕೆಲವೆಡೆ ಕೆಲಸ ಆರಂಭಿಸಿದೆ' ಎಂದರು.

Police report to BBMP that there are 180 dangerous roads in Bengaluru

ನಿಯಮದ ಪ್ರಕಾರ ಬೆಂಗಳೂರಿನಲ್ಲಿ ಅಪಾಯಕಾರಿ ಸ್ಥಳಗಳ ಬಗ್ಗೆ ಬಿಬಿಎಂಪಿ ಗಮನ ಹರಿಸಬೇಕು. ಆದರೆ ಬಿಬಿಎಂಪಿ ಅಧಿಕಾರಿಗಳು ಮಾತ್ರ ಮಳೆ ಬಂದಾಗ ನಿದ್ದೆಗೆ ಜಾರಿರುತ್ತಾರೆ. ಹೀಗಾಗಿ ಟ್ರಾಫಿಕ್ ಪೊಲೀಸರೇ ಡೆಡ್ಲಿ ಸ್ಪಾಟ್‌ಗಳ ಬಗ್ಗೆ ಪಟ್ಟಿ ಮಾಡಿ ವರದಿ ನೀಡಿದೆ. ಈಗಲಾದರೂ ಬಿಬಿಎಂಪಿ ಎಚ್ಚೆತ್ತುಕೊಳ್ಳುತ್ತಾ ಕಾದು ನೊಡಬೇಕಿದೆ.

Police report to BBMP that there are 180 dangerous roads in Bengaluru

ಆ್ಯಪ್‌ ಬಿಡುಗಡೆ ಮಾಡಿದ ಬಿಬಿಎಂಪಿ!

ಬೆಂಗಳೂರು ನಗರದಾದ್ಯಂತ ಇರುವ ಗುಂಡಿಗಳನ್ನು ಗುರುತಿಸಲು ಮತ್ತು ನಿಗದಿತ ಕಾಲಮಿತಿಯೊಳಗೆ ಸರಿಪಡಿಸಲು ಪೂರಕವಾಗುವಂತೆ ಬಿಬಿಎಂಪಿಯು ರಸ್ತೆ ಗುಂಡಿ ಗಮನ (Fix Pothole) ಎಂಬ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದೆ. ರಸ್ತೆಗುಂಡಿ ಇರುವ ಪ್ರದೇಶಗಳನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗುವಂತೆ ಆ್ಯಪ್‌ ರೂಪಿಸಲಾಗಿದೆ. ಜೊತೆಗೆ ಗುಂಡಿ ಮುಚ್ಚುವ ಕಾಮಗಾರಿ ಪ್ರಗತಿಯ ಹಂತವನ್ನೂ ಆ್ಯಪ್‌ ಮೂಲಕ ವೀಕ್ಷಿಸಬಹುದಾಗಿದೆ. ಬಿಬಿಎಂಪಿ ಸಿಬ್ಬಂದಿ, ಸಂಚಾರ ಪೊಲೀಸರು ಜೊತೆಗೆ ಸಾರ್ವಜನಿಕರೂ ಸಹ ಗುಂಡಿಗಳ ಬಗ್ಗೆ ವರದಿ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+