12ರಂದು ಬೆಂಗಳೂರಿನಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಹರಾಜು
ಬೆಂಗಳೂರು: ಸೆಕೆಂಡ್ ಹ್ಯಾಂಡ್ ಬೈಕ್‌ಗಳಿಗಾಗಿ ಹುಡುಕುತ್ತಿದ್ದೀರಾ? ಸಂಚಾರಿ ಪೊಲೀಸ್ ಇಲಾಖೆ ಹಮ್ಮಿಕೊಂಡಿರುವ ದ್ವಿಚಕ್ರ ವಾಹನಗಳ ಹರಾಜಿನಲ್ಲಿ ಭಾಗವಹಿಸಿ.
1ನೇ ಟ್ರಾಫಿಕ್ ನ್ಯಾಯಾಲಯದ ಆದೇಶದಂತೆ ಸದಾಶಿವನಗರ ಸಂಚಾರ ಪೊಲೀಸ್ ಠಾಣೆಯಲ್ಲಿರುವ ವಾರಸುದಾರರಿಲ್ಲದ ಮತ್ತು ಅಮಾನತು ಮಾಡಿಕೊಂಡಿರುವ 13 ದ್ವಿ ಚಕ್ರ ವಾಹನಗಳನ್ನು ಸಾರ್ವಜನಿಕ ಬಹಿರಂಗ ಹರಾಜು ಹಾಕುವ ಮೂಲಕ ವಿಲೇವಾರಿ ಮಾಡಲು ಇಲಾಖೆ ನಿರ್ಧರಿಸಿದೆ. [ಹರಾಜಾದ ಸಚಿನ್ ಬ್ಯಾಟು ಕನ್ನಡಿಗನ ಬಳಿ]

ಈ ಸದರಿ ವಾಹನಗಳನ್ನು ಡಿ. 12ರಂದು ಬೆಳಗ್ಗೆ 11 ಗಂಟೆಗೆ ಸದಾಶಿವನಗರ ಸಂಚಾರ ಪೊಲೀಸ್ ಠಾಣೆ ಬಳಿ ನಿಯಮದ ಪ್ರಕಾರ ಹರಾಜು ಹಾಕಲಾಗುವುದು.
ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವವರು ಸಮಯಕ್ಕೆ ಸರಿಯಾಗಿ ಪೊಲೀಸ್ ಠಾಣೆಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ದೂ. 080-22942804 ಮತ್ತು 94808 01821 ಸಂಪರ್ಕಿಸಲು ಕೋರಲಾಗಿದೆ.
Post by Oneindia Kannada.












Click it and Unblock the Notifications