ಸಂಚಾರಿ ಪೊಲೀಸರ ಆಶ್ರಯದಲ್ಲಿ 'ಉಚಿತ ನೇತ್ರ ಪರೀಕ್ಷೆ'
ಬೆಂಗಳೂರು, ಅ, 16 : ಹಲವಾರು ಸಾಮಾಜಿಕ ಸೇವೆಗಳನ್ನು ಮಾಡಲು ಮುಂದಡಿ ಇಟ್ಟಿರುವ ನಗರ ಸಂಚಾರಿ ಪೊಲೀಸರು ತಮ್ಮ ಸಿಬ್ಬಂದಿಗಳಿಗೆ ಉಚಿತ ನೇತ್ರಾ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಕಣ್ಣಿನ ಸಮಸ್ಯೆ ಎದುರಿಸುವ ಪೊಲೀಸರಿಗೆ ವೈದ್ಯರ ಮೂಲಕ ಹಲವಾರು ಸಲಹೆಗಳನ್ನು ನೀಡಲು ನಿರ್ಧರಿಸಿದ್ದಾರೆ.
ನಗರ ಸಂಚಾರಿ ಪೊಲೀಸರು ತಮ್ಮ ಸಿಬ್ಬಂದಿಗಳಿಗಾಗಿ ಉಚಿತ ನೇತ್ರಾ ಪರೀಕ್ಷೆ ಹಮ್ಮಿಕೊಂಡಿದ್ದು, ನೇತ್ರಾ ಪರೀಕ್ಷೆಯು ಅಕ್ಟೋಬರ್ 17ರ ಶನಿವಾರದಂದು ಬೆಳಿಗ್ಗೆ 11 ಗಂಟೆಯಿಂದ ಇನ್ ಫೆಂಟ್ರಿ ರಸ್ತೆಯ ಸಂಚಾರ ನಿರ್ವಹಣಾ ಕೇಂದ್ರ ಸಭಾಂಗಣದಲ್ಲಿ ನಡೆಯಲಿದೆ.[ಬೆಂಗಳೂರು ಸಂಚಾರ ಸಮಸ್ಯೆ ಬಗೆಹರಿಸಲು ಸಲಹೆ ಕೊಡಿ]

ಉಚಿತ ನೇತ್ರಾ ಪರೀಕ್ಷೆ ಕಾರ್ಯಕ್ರಮವನ್ನು ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ. ಎಂ. ಎ ಸಲೀಂ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಟೈಟನ್ ಕಂಪನಿಯ ಐವೇರ್ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರೋನಿ ತಲಾಟಿ ಆಗಮಿಸಲಿದ್ದಾರೆ.[ಚಾಲಕರೇ, ಹಿಂಬದಿ ಸವಾರರೇ ಹೆಲ್ಮೆಟ್ ಧರಿಸಲು ಸಿದ್ಧರಾಗಿ]
ಪೊಲೀಸರ ಆರೋಗ್ಯದ ಮೇಲೆ ಕಾಳಜಿ ಇರಿಸಿರುವ ನಗರ ಸಂಚಾರಿ ಪೊಲೀಸರು, ಉಚಿತ ನೇತ್ರ ಪರೀಕ್ಷೆ ನಡೆಸುತ್ತಿದ್ದು, ಸಿಬ್ಬಂದಿ ಹಾಗೂ ಅವರ ಮನೆಯವರಿಗೂ ಈ ಸೌಲಭ್ಯ ಲಭ್ಯವಾಗಲಿದೆ ಎಂದು ನಗರ ಸಂಚಾರಿ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications