ಡಿ.3ರಿಂದ ಸಾಂಪ್ರದಾಯಿಕ ಬಸವನಗುಡಿ ಕಡಲೆಕಾಯಿ ಪರಿಷೆ
ಬೆಂಗಳೂರು, ನವೆಂಬರ್ 22: ಬೆಂಗಳೂರು ಜನರ ಬಹು ನಿರೀಕ್ಷಿತ ಕಡಲೆಕಾಯಿ ಪರಿಷೆ ಡಿಸೆಂಬರ್ 3ರಂದು ಆರಂಭವಾಗಲಿದೆ.
ಎರಡು ದಿನಗಳ ಕಾಲ ಈ ಪರಿಷೆ ನಡೆಯಲಿದೆ. ಬಸವನಗುಡಿ ಬಸವಣ್ಣ ದೇವಸ್ಥಾನದ ಪ್ರದೇಶದಲ್ಲಿ ಈ ಐತಿಹಾಸಿಕ ಪರಿಷೆ ನಡೆಯಲಿದೆ. ಕಡಲೆಕಾಯಿ ಪರಿಷೆ ಡಿಸೆಂಬರ್ 3 ಮತ್ತು 4 ರಂದು ಎರಡು ದಿನಗಳ ಕಾಲ ನಡೆಯಲಿದೆ.ಕಾರ್ತಿಕ ಮಾಸ ಕೊನೆಯ ಸೋಮವಾರದಂದು ಪರಿಷೆ ನಡೆಯಲಿದೆ. ಇನ್ನು ಕೆಲವೇ ದಿನಗಳು ಬಾಕಿ ಇರುವುದರಿಂದ ತಯಾರಿ ಜೋರಾಗಿದೆ.

ಅಂದು ದೊಡ್ಡ ಗಣಪತಿ ಹಾಗೂ ಬಸವಣ್ಣನ ದರ್ಶನಕ್ಕೆ ಬರುವ ಭಕ್ತಾದಿಗಳೆಲ್ಲ ಕಡಲೆಕಾಯಿಯನ್ನು ಪ್ರಸಾದವಾಗಿ ನೀಡಲಾಗುತ್ತದೆ. ಪರಿಷೆಗೆ ಜನರನ್ನು ಆಕರ್ಷಿಸಲು ಉಯ್ಯಾಲೆ, ರಾಟೆ ಜೋಣೆ ನಡೆದಿದೆ, ಮಕ್ಕಳ ಆಟದ ಸಾಮಗ್ರಿಗಳು, ಮನೆ ಹಾಗೂ ಮಹಿಳೆಯರ ಅಲಂಕಾರಿಕ ವಸ್ತುಗಳು, ಕಡಲೆಕಾಯಿ ವ್ಯಾಪಾರಿಗಳು ದೇವಸ್ಥಾನದೆಡೆಗೆನ ಪಾದಚಾರಿ ಮಾರ್ಗಗಳಲ್ಲಿ ಬೀಡುಬಿಟ್ಟಿದ್ದಾರೆ.












Click it and Unblock the Notifications