ಬ್ರೇಕ್ ಫೇಲ್: ಯಶ್ ಮನೆಗೆ ಡಿಕ್ಕಿ ಹೊಡೆದ ಟ್ರ್ಯಾಕ್ಟರ್
ಬೆಂಗಳೂರು, ಮೇ 27: ಕನ್ನಡ ನಟ, ರಾಕಿಂಗ್ ಸ್ಟಾರ್ ಯಶ್ ಮನೆಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಈ ಘಟನೆ ಮಂಗಳವಾರ ರಾತ್ರಿ ನಡೆದಿದೆ.
Recommended Video
ನಿನ್ನೆ ರಾತ್ರಿ ಹೊಸಕೆರೆಹಳ್ಳಿ ಯಲ್ಲಿರುವ ಯಶ್ ಮನೆ ಕಾಂಪೌಂಡ್ ಟ್ರ್ಯಾಕ್ಟರ್‌ವೊಂದು ಬಂದು ಡಿಕ್ಕಿ ಹೊಡೆದಿದೆ. ಬ್ರೇಕ್ ಫೇಲ್ ಆದ ಕಾರಣ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಟ್ರ್ಯಾಕ್ಟರ್ ಗುದ್ದಿದ ಪರಿಣಾಮ ಒಂದು ಬೈಕ್ ಜಖಂ ಆಗಿದೆ. ಟ್ರ್ಯಾಕ್ಟರ್ ಮುಂಭಾಗಕ್ಕೆ ಸ್ವಲ್ಪ ಹಾನಿಯಾಗಿದೆ. ಯಶ್ ಮನೆಯ ಮುಂದಿನ ರಸ್ತೆ ಇಳಿಜಾರು ಇರುವ ಕಾರಣ ಬ್ರೇಕ್ ಫೇಲ್ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಕಾಂಪೌಂಡ್ ಗುದ್ದಿದೆ.

ಘಟನೆಯ ಬಗ್ಗೆ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬನಶಂಕರಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟ್ರಾಕ್ಟರ್ ಅನ್ನು ಜೆಸಿಬಿ ಮೂಲಕ ಸ್ಥಳಾಂತರ ಮಾಡಲಾಗಿದೆ.
ಟ್ರ್ಯಾಕ್ಟರ್ ಅವಘಡದಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ. ಅಂದಹಾಗೆ, ಸದ್ಯಕ್ಕೆ ನಟ ಯಶ್ ಹಾಗೂ ಕುಟುಂಬ ಈ ಮನೆಯಲ್ಲಿ ವಾಸ ಮಾಡುತ್ತಿಲ್ಲ. ಹೀಗಾಗಿ, ಘಟನೆ ನಡೆದಾಗ ಅವರು ಇರಲಿಲ್ಲ.












Click it and Unblock the Notifications