ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಏರ್ ಪೋರ್ಟ್‌ ರಸ್ತೆಯಲ್ಲಿ ಟೋಲ್ ಶುಲ್ಕ ಹೆಚ್ಚಳ

|
Google Oneindia Kannada News

ಬೆಂಗಳೂರು, ಏಪ್ರಿಲ್ 26 : ಲಾಕ್ ಡೌನ್ ಮುಗಿದ ಬಳಿಕ ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿ ಸಂಚಾರ ನಡೆಸುವ ವಾಹನ ಸವಾರರು ಹೆಚ್ಚಿನ ಟೋಲ್ ಶುಲ್ಕ ಪಾವತಿ ಮಾಡಬೇಕು. ಹೌದು, ಎನ್‌ಎಚ್‌ಎಐ 5 ರಿಂದ 30 ರೂ. ತನಕ ಟೋಲ್ ಶುಲ್ಕವನ್ನು ಹೆಚ್ಚಳ ಮಾಡಿದೆ.

ಸಾದಹಳ್ಳಿ ಟೋಲ್‌ ಗೇಟ್‌ನಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಶುಲ್ಕ ಹೆಚ್ಚಳ ಮಾಡಿದೆ. ಕಾರು, ವ್ಯಾನ್, ಜೀಪು ಒಂದು ಕಡೆ ಪ್ರಯಾಣಕ್ಕೆ 90 ರೂ. ಬದಲು 95 ರೂ. ನೀಡಬೇಕಿದೆ.

ಲಾಕ್‌ಡೌನ್: ಇಂದಿನಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಆರಂಭ ಲಾಕ್‌ಡೌನ್: ಇಂದಿನಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಆರಂಭ

ಟೋಲ್ ದರ ಹೆಚ್ಚಳದ ಬಳಿಕ ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು 190 ರೂ. ಪಾವತಿ ಮಾಡಬೇಕು. ಮಾಸಿಕ ಪಾಸಿನ ದರವನ್ನು 3125 ರೂ.ಗೆ ಏರಿಕೆ ಮಾಡಲಾಗಿದೆ. ಮಾರ್ಚ್ 31ರಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.

ಫಾಸ್ಟ್‌ಟ್ಯಾಗ್ ಇಲ್ಲವೆಂದು ಕಾರಿನ ಗಾಜು ಒಡೆದ ಟೋಲ್ ಸಿಬ್ಬಂದಿಫಾಸ್ಟ್‌ಟ್ಯಾಗ್ ಇಲ್ಲವೆಂದು ಕಾರಿನ ಗಾಜು ಒಡೆದ ಟೋಲ್ ಸಿಬ್ಬಂದಿ

Toll Fee Hiked In Bengaluru Airport Road

ಬಸ್‌ಗಳು ಮೊದಲು ಒಂದು ಕಡೆಯ ಪ್ರಯಾಣಕ್ಕೆ 280 ರೂ. ಪಾವತಿ ಮಾಡಬೇಕಿತ್ತು. ಅದನ್ನು 290ಕ್ಕೆ ಹೆಚ್ಚಳ ಮಾಡಲಾಗಿದೆ. ಎರಡೂ ಕಡೆಯ ಪ್ರಯಾಣದ ಟೋಲ್ ಒಟ್ಟಿಗೆ ಕಟ್ಟಿದರೆ 420 ರೂ. ಬದಲು 435 ರೂ. ಪಾವತಿಸಬೇಕು.

ಫಾಸ್ಟ್ಯಾಗ್ ; ಒಂದೇ ದಿನದಲ್ಲಿ 86.2 ಕೋಟಿ ಟೋಲ್ ಸಂಗ್ರಹ ಫಾಸ್ಟ್ಯಾಗ್ ; ಒಂದೇ ದಿನದಲ್ಲಿ 86.2 ಕೋಟಿ ಟೋಲ್ ಸಂಗ್ರಹ

ಏಳು ಅಥವ ಹೆಚ್ಚಿನ ಆಕ್ಸೆಲ್ ಹೊಂದಿರುವ ವಾಹನಗಳು ಒಂದು ಕಡೆಯ ಪ್ರಯಾಣಕ್ಕೆ 555 ರೂ. ಬದಲು 575 ರೂ. ಪಾವತಿ ಮಾಡಬೇಕು. ವಾಪಸ್ ಬರುವ ಟೋಲ್ ದರಗಳನ್ನು ರೂ. 30ರಷ್ಟು ಹೆಚ್ಚಳ ಮಾಡಲಾಗಿದೆ.

ಲಾರಿ ಮಾಲೀಕರ ಸಂಘ ಟೋಲ್ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದೆ. "ಲಾಕ್ ಡೌನ್ ಸಂದರ್ಭದಲ್ಲಿ ಆದಾಯದಲ್ಲಿ ಕಡಿತವಾಗಿರುವವಾಗ ಟೋಲ್ ದರ ಹೆಚ್ಚಿಸಿದ್ದು ಸರಿಯಲ್ಲ. ಲಾಕ್ ಡೌನ್ ಮುಗಿಯುತ್ತಿದ್ದಂತೆ ಇದೆ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ" ಎಂದು ಸಂಘದ ಅಧ್ಯಕ್ಷ ಜಿ. ಆರ್. ಷಣ್ಮುಗಪ್ಪ ಹೇಳಿದ್ದಾರೆ.

English summary
National Highways Authority of India has hiked the toll fee at Bengaluru airport road by Rs 5 to Rs 30 for various types of vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X