ಬೆಂಗಳೂರಿನಲ್ಲಿ ಹೊಸ ಪ್ರಾಜೆಕ್ಟ್: ಹೊಸ ಟೋಲ್ ಶುಲ್ಕ ಶಾಕ್, ಎಲ್ಲಿ - ಯಾವಾಗ ಇಲ್ಲಿದೆ ಮಾಹಿತಿ
ಬೆಂಗಳೂರಿನಲ್ಲಿ ಜಾರಿ ಆಗುತ್ತಿರುವ ಹೊಸ ಪ್ರಾಜೆಕ್ಟ್‌ನಿಂದ ಮುಂದಿನ ದಿನಗಳಲ್ಲಿ ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಟೋಲ್ ಶುಲ್ಕ ಫಿಕ್ಸ್ ಆಗುವುದು ಬಹುತೇಕ ಪಕ್ಕಾ ಆಗಿದೆ. ಹೌದು ಬೆಂಗಳೂರಿನಲ್ಲಿ ಹೊಸ ಯೋಜನೆಯ ಜೊತೆ ಜೊತೆಗೆ ಇದೀಗ ಮುಂದಿನ ದಿನಗಳಲ್ಲಿ ಟೋಲ್ ಶುಲ್ಕವನ್ನೂ ಸಹ ಪಾವತಿಸಬೇಕಾಗುತ್ತದೆ ಎನ್ನುವ ವಿಷಯ ಜೋರಾಗಿ ಚರ್ಚೆಯಾಗುತ್ತಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಕಂಟ್ರೋಲ್ ಮಾಡುವ ಉದ್ದೇಶಿಂದ ಬೃಹತ್ ಟ್ವಿನ್ ಟ್ಯೂಬ್ ಟನಲ್/ ಅವಳಿ ಸುರಂಗ ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈ ನಡುವೆ ಈ ಯೋಜನೆ ಜಾರಿ ಆಗುವುದರಿಂದ ವಾಹನ ಸವಾರರು ಮುಂದಿನ ದಿನಗಳಲ್ಲಿ ಹೊಸ ಟೋಲ್ ಶುಲ್ಕವನ್ನೂ ಪಾವತಿ ಮಾಡಬೇಕು ಎನ್ನುವುದು ನೂತನ ಅಪ್‌ಡೇಟ್ ಆಗಿದೆ. ಏನಿದು ಬೆಂಗಳೂರು ವಾಹನ ಸವಾರರಿಗೆ ಹೊಸ ಶಾಕ್ ಎನ್ನುವ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಟ್ವಿನ್‌ಟ್ಯೂಬ್ ಟನಲ್ ಯೋಜನೆಯನ್ನು ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಈ ಅಭಿವೃದ್ಧಿ ಯೋಜನೆಗೆ ಪ್ರಾರಂಭದ ಹಂತದಲ್ಲಿ ವಿವಿಧ ಕಾರಣಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಇದರ ನಡುವೆ ನೂತನ ಯೋಜನೆಯಿಂದ ಜನ ಟೋಲ್ ಶುಲ್ಕವನ್ನು ಸಹ ಪಾವತಿ ಮಾಡಬೇಕಾಗುತ್ತದೆ ಎನ್ನುವ ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಯೋಜನೆಯಿಂದ ಎಷ್ಟು ಟೋಲ್ ಶುಲ್ಕ ಬೀಳಲಿದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನ ಹೆಬ್ಬಾಳ ಹಾಗೂ ಸಿಲ್ಕ್ ಬೋರ್ಡ್ ಜಂಕ್ಷನ್ ಮಾರ್ಗವನ್ನು ಸಂಪರ್ಕಿಸುವ ಉದ್ದೇಶಿಂದ ಪ್ಲಾನ್ ಮಾಡಿಕೊಳ್ಳಲಾಗುತ್ತಿರುವ ಬೆಂಗಳೂರಿನ ಸುರಂಗ ಮಾರ್ಗ ಅಭಿವೃದ್ಧಿ ಕಾಮಗಾರಿಯು ಬೇರೆ ಬೇರೆ ಕಾರಣಕ್ಕೆ ಚರ್ಚೆಯಲ್ಲಿ ಇದೆ. ಅವಳಿ ಟ್ಯೂಬ್ ಸುರಂಗ ರಸ್ತೆಯ ಪ್ರಸ್ತಾವಿತ ಟೋಲ್ ಶುಲ್ಕವು ಬೆಂಗಳೂರಿಗರ ತಲೆನೋವಿಗೆ ಕಾರಣವಾಗಿದೆ. ಯಾಕೆಂದರೆ ಉದ್ದೇಶಿತ ಸುಂರಗ ಮಾರ್ಗವು ಬೆಂಗಳೂರಿನ ಹಲವು ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಹೊಸ ಯೋಜನೆಯಿಂದ ಟೋಲ್ ಶುಲ್ಕ ಸಂಗ್ರಹ ಫಿಕ್ಸ್: ಇನ್ನು ಬೆಂಗಳೂರಿನಲ್ಲಿ ಈ ಹೊಸ ಯೋಜನೆಯಿಂದಾಗಿ ಜನ ಟೋಲ್ ಶುಲ್ಕ ಪಾವತಿ ಮಾಡಬೇಕಾಗುವುದು ಫಿಕ್ಸ್ ಆಗಲಿದೆ. ಈ ಸಂಬಂಧ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದ್ದು. ಬೆಂಗಳೂರಿನಲ್ಲಿ ಹೊಸ ಸುರಂಗ ಮಾರ್ಗದಿಂದ 16.6 ಕಿ.ಮೀ. ರಸ್ತೆಯಲ್ಲಿ ಟೋಲ್ ಪಾವತಿ ಮಾಡಬೇಕಾಗುತ್ತದೆ. ಟೋಲ್ ಶುಲ್ಕ ಮೊತ್ತವು 330 ರೂಪಾಯಿ ಇರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಉದ್ದೇಶಿತ ಯೋಜನೆಯ ಟೋಲ್ ಶುಲ್ಕ ಮೊತ್ತವು 330 ರೂಪಾಯಿ 16 ಕಿ.ಮೀಗೆ ಇದ್ದರೂ, ಇದು ಕಾರುಗಳಿಗೆ ಮಾತ್ರ ಅನ್ವಯಿಸಲಿದೆ ಎಂದು ಹೇಳಲಾಗಿದೆ.
ಟೋಲ್ ಶುಲ್ಕದ ವಿವರ: ಬೆಂಗಳೂರಿನಲ್ಲಿ ಸುರಂಗ ಮಾರ್ಗ ಯೋಜನೆಯಿಂದಾಗಿ ಕಾರು ಸವಾರರು ಟೋಲ್ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಹೆಬ್ಬಾಳ - ಸರ್ಜಾಪುರ - ಎಚ್‌ಎಸ್‌ಆರ್ ಲೇಔಟ್ ಮಾರ್ಗವು 16.3 ಕಿ.ಮೀ ಇರಲಿದ್ದು ಇದಕ್ಕೆ ಟೋಲ್ ಶುಲ್ಕ ಮೊತ್ತ 320 ರೂಪಾಯಿ ಇರಲಿದೆ. ಹೆಬ್ಬಾಳ - ಹೊಸೂರು ಮುಖ್ಯ ರಸ್ತೆ ಮಾರ್ಗವು 12.79 ಕಿ.ಮೀ ಇರಲಿದ್ದು ಇದಕ್ಕೆ 250 ರೂಪಾಯಿ ಇರಲಿದೆ. ಹೆಬ್ಬಾಳ - ಶೇಷಾದ್ರಿ ರಸ್ತೆ ಮಾರ್ಗವು 9.05 ಕಿ.ಮೀ ಇರಲಿದ್ದು ಇದಕ್ಕೆ ಟೋಲ್ ಶುಲ್ಕ ಮೊತ್ತವು 180 ಇರಲಿದೆ. ಹೊರ ವರ್ತುಲ ರಸ್ತೆ, ಕೆ.ಆರ್. ಪುರ - ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ 320 ಟೋಲ್ ಶುಲ್ಕ ಇರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಮೇಖ್ರಿ ವೃತ್ತದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಮಾರ್ಗದ 12.54 ಕಿ.ಮೀ 245 ರೂಪಾಯಿ ಹಾಗೂ ರೇಸ್ ಕೋರ್ಸ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ 9.8 ಕಿ.ಮೀ ಇರಲಿದ್ದು, ಇದಕ್ಕೆ 195 ನಿಗದಿ ಮಾಡಲಾಗಿದೆ ಎಂದು ಹೇಳಲಾಗಿದೆ.












Click it and Unblock the Notifications